ಮಂಗಳವಾರ, ಮೇ 21, 2024
ಮನೆಯೊಂದರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮಹಿಳೆಯೊಂದಿಗೆ ನೇಣು ಬಿಗಿದು ಆತ್ಮಹತ್ಯೆ.!-Rain Alert: ಕರಾವಳಿಯಲ್ಲಿ ಭಾರಿ ಮಳೆ ಮುನ್ಸೂಚನೆ; ಸಮುದ್ರ ತೀರದಲ್ಲಿ ಹೈ-ಅಲರ್ಟ್.!-Rave Party :ಇಂದು ಮತ್ತೊಂದು ವಿಡಿಯೋ ಹರಿಬಿಟ್ಟ ನಟಿ ಹೇಮಾ; ರೇವ್ ಪಾರ್ಟಿಯಲ್ಲಿ ಇದ್ದಿದ್ದು ನಿಜಾನಾ.?-ಬ್ರಹ್ಮ ಅಡ್ಡಬಂದರೂ ರಘುಪತಿ ಭಟ್ ನೈಋತ್ಯ ಪಧವೀಧರ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾರೆ; ಕೆ.ಎಸ್ ಈಶ್ವರಪ್ಪ-2023 ಚುನಾವಣೆಯಲ್ಲಿ ಬಂಗೇರ ರವರನ್ನು ಸ್ಪರ್ಧಿಸುವಂತೆ ನಾನು ಹೇಳಿದರೂ, ಅವರ ಸ್ಪರ್ಧಿಸಲಿಲ್ಲ. ಸ್ಪರ್ಧಿಸುತ್ತಿದ್ದರೆ ಮಂತ್ರಿಯಾಗುತ್ತಿದ್ದರು-ಬಂಗೇರ ನುಡಿ ನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತು-ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಿ. ಇಲ್ಲಾದ್ರೆ ಜಾಗ ಖಾಲಿ ಮಾಡಿ, ಹೊಸ ಮುಖಗಳನ್ನು ಬೆಳೆಸುತ್ತೇವೆ-ನಾಯಕರುಗಳಿಗೆ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ-ದ್ವೇಷ ರಾಜಕಾರಣಕ್ಕೆ ಬೆಳ್ತಂಗಡಿಯಲ್ಲಿ ಅಖಾಡ ಸಿದ್ಧವಾಗಿದೆಯೇ? ಹರೀಶ್ ಪೂಂಜ V/S ರಕ್ಷಿತ್ ಶಿವರಾಂ..!-ಭಜರಂಗಿ ಸಿನೆಮಾದಲ್ಲಿ ನಟಿಸಿದ್ದ ನಟಿ ಪತಿಯಿಂದಲೇ ಭೀಕರ ಹತ್ಯೆ..!-ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ; ಸಚಿವರು ಅನಗತ್ಯವಾಗಿ ಹೇಳಿಕೆ ನೀಡದಂತೆ ಸಿದ್ದರಾಮಯ್ಯ ಸೂಚನೆ..!-ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ; ತಾಯಿ -ಮಗ ಮೃತ್ಯು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ಗೆ ಕೊರೋನಾ ಪಾಸಿಟಿವ್

Twitter
Facebook
LinkedIn
WhatsApp
suicide16709127311678050822 14

ನಿನ್ನ ಸನಿಹಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ಅಣ್ಣಾವ್ರ ಮುದ್ದಿನ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ಗೆ ಕೊರೋನಾ ಸೋಂಕು ತಗುಲಿದೆ. ಕೋವಿಡ್‌ ಪಾಸಿಟಿವ್ ಬಂದಿರುವುದಾಗಿ ಬರೆದುಕೊಂಡು ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 

No photo description available.

ಧನ್ಯಾ ಪೋಸ್ಟ್‌:

‘ಎಲ್ಲರಿಗೂ ನಮಸ್ಕಾರ, ನನಗೆ ಕೋವಿಡ್‌ 19 ಪಾಸಿಟಿವ್  ಆಗಿದೆ ಈ ವಿಚಾರವನ್ನು ತಿಳಿಸಲು ಪೋಸ್ಟ್‌ ಬರೆಯುತ್ತಿರುವೆ. ಸದ್ಯಕ್ಕೆ ನಾನು ಐಸೋಲೇಟ್ ಆಗಿರುವ ಹಾಗೂ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡಿರುವೆ. ಮುನ್ನೆಚ್ಚರಿಕೆ ವಹಿಸಿ ಆದಷ್ಟು ಬೇಗ ನಿಮ್ಮ ಮುಂದೆ ಬರುವೆ’ ಎಂದು ಧನ್ಯಾ ಬರೆದುಕೊಂಡಿದ್ದಾರೆ.

Actor Ramkumar's Daughter's First Cinema Release Date Fixes » Jsnewstimes

‘ಪ್ರತಿಯೊಬ್ಬರೂ ದಯವಿಟ್ಟು ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ಆರೋಗ್ಯವೇ ನಮ್ಮ ಭಾಗ್ಯ.  ನನ್ನ ಆರೋಗ್ಯ ಬಗ್ಗೆ ನಿಮ್ಮ ನಾನೇ ಮಾಹಿತಿ ಕೊಡುವೆ. ದಯವಿಟ್ಟು ಈ ಸಮಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ’ಎಂದು ಧನ್ಯಾ ಹೇಳಿದ್ದಾರೆ.

No photo description available.

ಸಿನಿಮಾ ಕ್ಷೇತ್ರ ಯಾಕೆ?

ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಜರ್ನಲಿಸಂ ಮತ್ತು ಮಾಸ್ ಕಮ್ಯೂನಿಕೇಷನ್‌ನಲ್ಲಿ (Journalism & Mass Communication) ಪದವಿ ಪಡೆದ ನಂತರ ಕೆಲವು ವರ್ಷಗಳ ಕಾಲ ಪಿಆರ್‌ ಸಂಸ್ಥೆ ಒಂದರಲ್ಲಿ ಕೆಲಸ ಮಾಡಿದ್ದಾರೆ. ಕೈ ತುಂಬಾ ಸಂಪಾದನೆ ಮಾಡುತ್ತಿದ್ದರೂ ಕೆಲಸದಲ್ಲಿ ನೆಮ್ಮದಿ ಇಲ್ಲದ ಕಾರಣ ಧನ್ಯಾ ಈ ನಿರ್ಧಾರ ಕೈಗೊಂಡರಂತೆ. 

Dhanya Ramkumar — The Movie Database (TMDB)

ದಿನವೂ ಕೆಲಸಕ್ಕೆ ಹೋಗುವ ಮುನ್ನ ಸಂತೋಷವಿರುತ್ತಿರಲಿಲ್ಲ ಒಂದು ದಿನ ಕೆಲಸ ಒತ್ತಡ ಹೆಚ್ಚಾಗಿತ್ತು. ಇಲ್ಲ ಇದು ನನ್ನ ಕೈಯಲ್ಲಿ ಆಗುವುದಿಲ್ಲ ನಾನು ಇಷ್ಟ ಪಡುವ ಕೆಲಸವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಮನೆಗೆ ಹೋಗಿ ಈ ವಿಚಾರವನ್ನು ಅಮ್ಮನಿಗೆ ತಿಳಿಸುತ್ತೇನೆ ಎಂದು ನಿರ್ಧರಿಸಿಕೊಂಡು ತಮ್ಮ ಕನಸಿನ ಕೆಲಸದ ಬಗ್ಗೆ ಹಂಚಿಕೊಂಡರಂತೆ. ಧನ್ಯಾ ಸಿನಿಕ್ಷೇತ್ರ ಪ್ರವೇಶಿಸುತ್ತಾಳೆ ಎನ್ನುವ ಸಣ್ಣ ಅನುಮಾನ ತಾಯಿ ಅವರಿಗೆ ಇತ್ತಂತೆ ಆದರೆ ಇಷ್ಟು ಬೇಗ ಎಂದುಕೊಂಡಿರಲಿಲ್ಲ. ಅದರಲ್ಲೂ ರಾಜ್‌ಕುಮಾರ್ ಕುಟುಂಬದಿಂದ ಇದೇ ಮೊದಲ ಹೆಣ್ಣು ಮಗಳ ಲೈಮ್‌ ಲೈಟ್‌ ಕಡೆ ಮುಖ ಮಾಡುತ್ತಿರುವ ಕಾರಣ ಧನ್ಯಾ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಮುಂದೊಂದು ದಿನ ನಾನು ನನ್ನ ಕನಸನ್ನು ಫಾಲೋ ಮಾಡಿಲ್ಲ ಎಂದು ರಿಗ್ರೆಟ್ (Regret) ಮಾಡಬಾರದು. ಹೀಗಾಗಿ ಗಟ್ಟಿ ಮನಸ್ಸು ಮಾಡಿಕೊಂಡು ಮನೆಯಲ್ಲಿ ಎಲ್ಲರಿಗೂ ಹೇಳಿದೆ ಎಂದು ನಟಿ ಧನ್ಯಾ ಸಂದರ್ಶನದಲ್ಲಿ ಹೇಳಿದ್ದಾರೆ.

No photo description available.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ