ಗುರುವಾರ, ನವೆಂಬರ್ 21, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮ್ಯೂಸಿಕ್ ಆ್ಯಪ್ ಸ್ಪಾಟಿಫೈ ಬಳಕೆದಾರರಿಗೆ ಬ್ಯಾಡ್​ನ್ಯೂಸ್​; ಕನ್ನಡ ಸೇರಿ ಎಲ್ಲಾ ಭಾಷೆಯ ಸಾವಿರಾರು​ ಹಾಡುಗಳು ಡಿಲೀಟ್

Twitter
Facebook
LinkedIn
WhatsApp
file7kz3ooflvhwsmtlldoy1679439394 2

ಮ್ಯೂಸಿಕ್ ಆ್ಯಪ್ ಸ್ಪಾಟಿಫೈ (Spotify) ಬಳಕೆದಾರರು ಇತ್ತೀಚೆಗೆ ಸಮಸ್ಯೆ ಎದುರಿಸಿದ್ದಾರೆ. ಕನ್ನಡ, ಬಾಲಿವುಡ್ ಹಾಡುಗಳು ಅವರಿಗೆ ಕೇಳಲು ಸಿಗುತ್ತಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಧ್ವನಿ ಎತ್ತುತ್ತಿದ್ದಾರೆ. ಈ ರೀತಿ ಆಗುವುದಕ್ಕೂ ಒಂದು ಕಾರಣ ಇದೆ. ಇದನ್ನು ಕೆಲವರು ವಿವರಿಸಿದ್ದಾರೆ. ಸದ್ಯ ಆಗಿರುವ ಸಮಸ್ಯೆ ಬಗೆಹರಿದ ನಂತರದಲ್ಲಿ ಹಾಡುಗಳು ಮರಳಿ ಬರಲಿದೆ. ಅಲ್ಲಿಯವರೆಗೆ ಬಳಕೆದಾರರು ಕಾಯಲೇಬೇಕು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅನೇಕರು ಈ ಮ್ಯೂಸಿಕ್ ಆ್ಯಪ್​ನ ಅನ್​ಇನ್​ಸ್ಟಾಲ್​ ಮಾಡುವ ಬೆದರಿಕೆ ಹಾಕಿದ್ದಾರೆ.

ಜೀ ಮ್ಯೂಸಿಕ್ ಹಾಗೂ ಸ್ಪಾಟಿಫೈ ಮಧ್ಯೆ ಆಗಿರುವ ಒಪ್ಪಂದ ಮುಗಿದಿದೆ. ಹೊಸದಾಗಿ ಒಪ್ಪಂದ ಮಾಡಿಕೊಳ್ಳಬೇಕಿತ್ತು. ಆದರೆ, ಸ್ಪಾಟಿಫೈಗೆ ಇದು ಸಾಧ್ಯವಾಗಿಲ್ಲ. ಇದರಿಂದ ತಮ್ಮ ಸಂಸ್ಥೆಗೆ ಸೇರಿದ ಎಲ್ಲಾ ಹಾಡುಗಳನ್ನು ತೆಗೆದುಹಾಕುವಂತೆ ಜೀ ಸಂಸ್ಥೆ ಸ್ಪಾಟಿಫೈಗೆ ಆದೇಶ ನೀಡಿತ್ತು. ಇದರಿಂದ ಜೀ ಮ್ಯೂಸಿಕ್ ಹಾಗೂ ಜೀ ಎಂಟರ್​ಟೇನ್​ಮೆಂಟ್​ನ ಎಲ್ಲಾ ಹಾಡುಗಳು ಸ್ಪಾಟಿಫೈ ಆ್ಯಪ್​ನಿಂದ ಮಾಯ ಆಗಿದೆ.

ಕನ್ನಡದ ವೇದ, ಹಿಂದಿಯ ಫಿತೂರ್, ಉಡ್ತಾ ಪಂಜಾಬ್, ದಂಗಲ್, ಬರೇಲಿ ಕಿ ಬರ್ಫಿ, ಧಡಕ್, ಅಕ್ಟೋಬರ್, ಗಲ್ಲಿ ಬಾಯ್, ಕೇಸರಿ, ಕಾಲಾ ಚಶ್ಮಾ, ಕಳಂಕ್ ಮೊದಲಾದ ಹಾಡುಗಳನ್ನು ಡಿಲೀಟ್ ಮಾಡಲಾಗಿದೆ.

ಬಳಕೆದಾರರ ಆಕ್ರೋಶ

ಸದ್ಯ ಸ್ಪಾಟಿಫೈ ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಜಾಹೀರಾತಿನಿಂದ ಮುಕ್ತಿ ಪಡೆಯಲು ಸ್ಪಾಟಿಫೈ ಬಳಕೆದಾರರು ಹಣ ನೀಡುತ್ತಾರೆ. ಅಂಥ ಬಳಕೆದಾರರು ತಮ್ಮ ಚಂದಾದಾರತ್ವವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಪರವಾನಿಗೆಯನ್ನು ಬೇಗನೇ ಮರಳಿ ಪಡೆಯುವ ಅಗತ್ಯ ಸಂಸ್ಥೆಗೆ ಎದುರಾಗಿದೆ.

ಇದು ತಾತ್ಕಾಲಿಕ

ಅಂದಹಾಗೆ ಒಪ್ಪಂದ ನವೀಕರಣಗೊಂಡ ನಂತರದಲ್ಲಿ ಜೀಗೆ ಸಂಬಂಧಿಸಿದ ಎಲ್ಲಾ ಹಾಡುಗಳು ಮರಳುತ್ತವೆ. ಬಾಲಿವುಡ್​ನ ಸಾವಿರಾರು ಹಾಡುಗಳ ಹಕ್ಕು ಈ ಸಂಸ್ಥೆಯ ಅಡಿಯಲ್ಲಿ ಇದೆ. ಹೀಗಾಗಿ, ಸಾವಿರಾರು ಹಾಡುಗಳನ್ನು ಸ್ಪಾಟಿಫೈ ಬಳಕೆದಾರರಿಗೆ ಕೇಳಲು ಸಾಧ್ಯವಾಗುತ್ತಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ