ಶನಿವಾರ, ಮೇ 4, 2024
ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ :ನಿಖಿಲ್‌ ಕುಮಾರಸ್ವಾಮಿ-Onion price : ಈರುಳ್ಳಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ; ಕಾರಣವೇನು?-ಅಶ್ಲೀಲ ವಿಡಿಯೋ ಪ್ರಕರಣ; ದೇವೇಗೌಡರ ನಿವಾಸಿದಿಂದಲೇ ಹೆಚ್​ಡಿ ರೇವಣ್ಣ ಎಸ್ಐಟಿ ವಶಕ್ಕೆ..!-ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?-ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

WPL:ಕೊನೆಗೂ ಮೊದಲ ಜಯಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

Twitter
Facebook
LinkedIn
WhatsApp
WhatsApp Image 2023 03 16 at 7.33.30 AM

ಮುಂಬಯಿ: ಪ್ರೀಮಿಯರ್ ಲೀಗ್ ನಲ್ಲಿ ಸತತ 5 ಸೋಲುಗಳಿಂದ ದಿಕ್ಕೆಟ್ಟಿದ್ದ ಆರ್‌ ಸಿಬಿ ವನಿತಾ ತಂಡ ಯುಪಿ ವಾರಿಯರ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಜಯದ ನಗು ಬೀರುವಲ್ಲಿ ಯಶಸ್ವಿಯಾಗಿದೆ

ಸ್ಮತಿ ಮಂಧನಾ ಬಳಗ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆಮಾಡಿತು. ಎಸ್ ಡಿವೈನ್ ಅವರು ಮೊದಲ ಓವರ್ ನಲ್ಲೆ ನಾಯಕಿ ಹೀಲೇ ಮತ್ತು ದೇವಿಕಾ ವೈದ್ಯ ಅವರ ರೂಪದಲ್ಲಿ ಪ್ರಮುಖ 2 ವಿಕೆಟ್ ಕಬಳಿಸಿ ಯುಪಿ ವಾರಿಯರ್ಸ್ ಗೆ ಭಾರಿ ಶಾಕ್ ನೀಡಿದರು. 5 ರನ್ ಆಗುವಷ್ಟರಲ್ಲಿ ತಾಲಿಯಾ ಮೆಕ್‌ಗ್ರಾತ್ ಅವರ ರೂಪದಲ್ಲಿ 3 ನೇ ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಕಿರಣ್ ನವಗಿರೆ 22 ರನ್ ಮತ್ತು ಗ್ರೇಸ್ ಹ್ಯಾರಿಸ್ 46 ರನ್ ಕೊಡುಗೆ ನೀಡಿ ತಂಡಕ್ಕೆ ಆಸರೆಯಾದರು. ದೀಪ್ತಿ ಶರ್ಮಾ 22 ಮತ್ತು ಎಕ್ಲೆಸ್ಟೋನ್ 12 ರನ್ ಗಳಿಸಿದರು. 19.3 ಓವರ್ ಗಳಲ್ಲಿ 135 ರನ್ ಗಳಿಗೆ ಆಲೌಟಾಯಿತು. ಎಲ್ಲಿಸ್ ಪೆರ್ರಿ3 ವಿಕೆಟ್ ಪಡೆದು ಗಮನ ಸೆಳೆದರು. ಉತ್ತಮ ಬೌಲಿಂಗ್ ದಾಳಿ ನಡೆಸಿ ಎಸ್ ಡಿವೈನ್ ಮತ್ತು ಆಶಾ ಶೋಬನಾ ತಲಾ 2 ವಿಕೆಟ್ ಪಡೆದರು. ಮೇಗನ್ ಶುಟ್ ಮತ್ತು ಶ್ರೇಯಾಂಕ ಪಾಟೀಲ್ ತಲಾ 1 ವಿಕೆಟ್ ಪಡೆದರು.

rstb5aupyo89ht7y 1678900339

ಗುರಿ ಬೆನ್ನಟ್ಟಿದ ಆರ್ ಸಿಬಿ 18 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ಗೆಲುವಿನ ಸಂಭ್ರಮದಲ್ಲಿ ತೇಲಿತು. 14 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಸ್ಮತಿ ಮಂಧನಾ ಶೂನ್ಯಕ್ಕೆ ಔಟಾಗಿ ನಿರಾಸೆ ಅನುಭವಿಸಿದರು. ಸೋಫಿ 14 ರನ್ , ಹೀದರ್ ನೈಟ್ 24, ಭರ್ಜರಿ ಆಟವಾಡಿದ ಕನಿಕಾ ಅಹುಜಾ 46 ರನ್ ಗಳಿಸಿ ಔಟಾದರು. ರಿಚಾ ಘೋಷ್ ಔಟಾಗದೆ 31 ಮತ್ತುಶ್ರೇಯಾಂಕಾ ಪಾಟೀಲ್ ಔಟಾಗದೆ 5 ರನ್ ಕೊಡುಗೆ ನೀಡಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ