ಪಾಗಲ್ ಪ್ರೇಮಿ ಕೊಲೆ ಕೇಸ್‌ಗೆ ಟ್ವಿಸ್ಟ್- ಪೊಲೀಸ್ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲು
ಬೆಂಗಳೂರು: ಪ್ರೀತಿ (Love) ನಿರಾಕರಿಸಿದ ಯುವತಿಯನ್ನ ಬರ್ಬರವಾಗಿ ಇರಿದು ಕೊಲೆ ಮಾಡಿದ್ದ ಸ್ಟೋರಿಗೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದ್ದು, ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಸಾಯುವ ಮುನ್ನ ತಾಯಿಗೆ ಕರೆ:
ಪಾಗಲ್ ಪ್ರೇಮಿ ದಿನಕರ್, ಮೂರು ದಿನಗಳ ಹಿಂದೆ ಯುವತಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ಹುಡುಕಿಕೊಂಡು ಬಂದಿರುವ ವಿಚಾರ ತಿಳಿದ ಲೀಲಾ ಪವಿತ್ರಾ ತನ್ನ ತಾಯಿಗೆ ಕರೆ ಮಾಡಿದ್ದಳು. ಆಂಧ್ರಪ್ರದೇಶದಲ್ಲಿರುವ (Andhra Pradesh) ತನ್ನ ತಾಯಿಗೆ ಕರೆ ಮಾಡಿದ ಲೀಲಾ, ಅಮ್ಮ ಅವನು ಇಲ್ಲಿಗೂ ಬಂದಿದ್ದಾನೆ. ಹೊರಗೆ ಬರುವಂತೆ ಕಿರುಕುಳ ಕೊಡ್ತಿದ್ದಾನೆ. ಏನ್ ಮಾಡೋದು ಗೊತ್ತಾಗ್ತಿಲ್ಲ ಅಂತಾ ಹೇಳಿಕೊಂಡಿದ್ದಾಳೆ.
ದಿನಕರ್ ಜೊತೆಗೆ ಮಾತಾಡುವ ವೇಳೆ ಕೂಡ, ತಾಯಿಗೆ ಫೋನ್ ಮಾಡಿ ದಿನಕರ್‌ಗೆ ಮಾತನಾಡುವಂತೆ ಕೊಟ್ಟಿದ್ದಳು. ಈ ವೇಳೆ ಲೀಲಾ ತಾಯಿ ಸಹ ದಿನಕರ್‌ಗೆ ಬೈದು ಅಲ್ಲಿಂದ ಹೋಗುವಂತೆ ಹೇಳಿದ್ದಳು. ಫೋನ್‌ನಲ್ಲಿ ಮಾತನಾಡುತ್ತಿದ್ದಂತೇ ದಿನಕರ್ ಚಾಕು ತೆಗೆದಿದ್ದನಂತೆ. ಚಾಕು ನೋಡಿದ ಲೀಲಾ ತಾಯಿ ಜೊತೆಗೆ ತುಂಬಾ ಭಯ ಆಗ್ತಿದೆ, ಏನಾದರೂ ಮಾಡ್ತಾನೆ ಅಂತಲೇ ಫೋನ್ ಕಟ್ ಆಗಿದೆ ಅನ್ನೋದು ಪೊಲೀಸರ ತನಿಖೆ (Police Investigation) ವೇಳೆ ಬಹಿರಂಗಗೊಂಡಿದೆ.
ಆಂಧ್ರಪ್ರದೇಶದ ಶ್ರೀಕಾಕೋಳುವಿನಲ್ಲಿ ಕಾಲೇಜು ಓದುವ ವೇಳೆ ಆರೋಪಿ ದಿನಕರ್, ಲೀಲಾ ಪವಿತ್ರಾಗೆ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ವಿದ್ಯಾಭ್ಯಾಸ ಮುಗಿಸಿದ ಯುವತಿ ಕೆಲಸ ಹರಿಸಿ ಬೆಂಗಳೂರಿಗೆ ಬಂದಿದ್ಲು. ಇದರಿಂದ ಗಾಬರಿಯಾದ ದಿನಕರ್, ಲೀಲಾಳ ತಾಯಿಗೆ ಕರೆ ಮಾಡಿ ಅವಳನ್ನು ನಾನೇ ಮದುವೆ ಆಗೋದು, ನಂಗೆ ಮದುವೆ ಮಾಡಿಕೊಡಿ ಚೆನ್ನಾಗಿ ನೋಡ್ಕೋತಿನಿ ಅಂತಾ ಕೇಳ್ಕೊಂಡಿದ್ದ. ಆದರೆ ಯುವತಿ ತಾಯಿ, ಅಂತರ್ಜಾತಿ ಅನ್ನೋ ಕಾರಣಕ್ಕೆ ಸಾಧ್ಯವಿಲ್ಲ ಅಂತಾ ಹೇಳಿದ್ದರು.
ಈ ವೇಳೆ ಲೀಲಾಳನ್ನು ನಾನೇ ಮದುವೆ ಆಗೋದು ಒಂದು ವೇಳೆ ಆ ರೀತಿ ಆಗಲಿಲ್ಲ ಅಂದರೆ ಅವಳನ್ನು ಪತ್ತೆ ಮಾಡಿ ಕೊಲೆ ಮಾಡಿ ನಾನೂ ಆತ್ಮಹತ್ಯೆ ಮಾಡ್ಕೋತಿನಿ ಅಂತಾ ಬೆದರಿಸಿದ್ದ. ಅದು ಮುಂದುವರಿದು, ಲೀಲಾ ಪವಿತ್ರ ಕೆಲಸ ಮಾಡುತ್ತಿದ್ದ ಜಾಗವನ್ನು ಸ್ನೇಹಿತರ ಮೂಲಕ ಪತ್ತೆ ಮಾಡಿದ್ದ. ಆಕೆ ಮದುವೆಯಾಗಲು ನಿರಾಕರಿಸಿದ ನಂತರ 16 ಬಾರಿ ಬರ್ಬರವಾಗಿ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.