ಸೋಮವಾರ, ಫೆಬ್ರವರಿ 24, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

‘ಸೆಲ್ಫೀ’ ಹೀನಾಯ ಸೋಲು; ಹೊಣೆ ಹೊತ್ತುಕೊಂಡ ಅಕ್ಷಯ್​ ಕುಮಾರ್

Twitter
Facebook
LinkedIn
WhatsApp
‘ಸೆಲ್ಫೀ’ ಹೀನಾಯ ಸೋಲು; ಹೊಣೆ ಹೊತ್ತುಕೊಂಡ ಅಕ್ಷಯ್​ ಕುಮಾರ್

ನಟ ಅಕ್ಷಯ್​ ಕುಮಾರ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಿದ್ದರೂ ಕೂಡ ಅವರ ಸಿನಿಮಾಗಳು ಸೋಲುತ್ತಿವೆ. ಅಲ್ಲೊಂದು ಇಲ್ಲೊಂದು ಚಿತ್ರಗಳು ಸೋಲುವುದು ಸಹಜ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್​ ಕುಮಾರ್​ ನಟಿಸಿದ ಎಲ್ಲ ಚಿತ್ರಗಳೂ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಲು ವಿಫಲವಾಗುತ್ತಿವೆ. ಫೆಬ್ರವರಿ 24ರಂದು ಬಿಡುಗಡೆಯಾದ ‘ಸೆಲ್ಫೀ’ ಸಿನಿಮಾ ಕೂಡ ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿದೆ. ಇದರಿಂದ ಅಕ್ಷಯ್​ ಕುಮಾರ್​ ಅವರ ಮಾರ್ಕೆಟ್​ ಕುಸಿಯುವ ಅಪಾಯ ಎದುರಾಗಿದೆ. ಸಿನಿಮಾಗಳು ಸೋತಾಗ ಇತರರ ಮೇಲೆ ಗೂಬೆ ಕೂರಿಸುವವರೇ ಹೆಚ್ಚು. ಆದರೆ ಅಕ್ಷಯ್​ ಕುಮಾರ್​ ಹಾಗೆ ಮಾಡಿಲ್ಲ. ಸಿನಿಮಾದ ಸೋಲಿಗೆ ತಾವೇ ಮುಖ್ಯ ಕಾರಣ ಎಂದು ಅವರು ಒಪ್ಪಿಕೊಂಡಿದ್ದಾರೆ.

‘ಸೆಲ್ಫೀ’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಜೊತೆ ಇಮ್ರಾನ್​ ಹಷ್ಮಿ ನಟಿಸಿದ್ದಾರೆ. ಈ ಚಿತ್ರಕ್ಕೆ ರಾಜ್​ ಮೆಹ್ತಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಸೋಲಿನ ಹೊಣೆಯನ್ನು ಯಾರಿಗೂ ನೀಡದೇ ಎಲ್ಲವನ್ನೂ ತಮ್ಮ ಮೇಲೆ ಹಾಕಿಕೊಂಡಿದ್ದಾರೆ ಅಕ್ಷಯ್​ ಕುಮಾರ್​. ‘ಆಜ್​ ತಕ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರ ಹೇಳಿಕೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

‘ನನ್ನ ಸಿನಿಮಾಗಳು ಸತತ ಸೋಲುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ನನ್ನ 16 ಚಿತ್ರಗಳು ಸತತವಾಗಿ ಸೋತಿದ್ದವು. ಅಷ್ಟೇ ಅಲ್ಲ, ಒಂದು ಕಾಲದಲ್ಲಿ ನನ್ನ 8 ಸಿನಿಮಾಗಳು ಒಳ್ಳೆಯ ಕಲೆಕ್ಷನ್​ ಮಾಡಲು ವಿಫಲವಾಗಿದ್ದವು. ನನ್ನದೇ ತಪ್ಪಿನಿಂದ ಇದೆಲ್ಲ ಆಗಿದೆ. ಪ್ರೇಕ್ಷಕರು ಬದಲಾಗಿದ್ದಾರೆ. ಅವರು ಬೇರೆ ಏನನ್ನೋ ಬಯಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

‘ಇದೊಂದು ದೊಡ್ಡ ಎಚ್ಚರಿಕೆ ಗಂಟೆ. ಬದಲಾಗಲು ನಾನು ಪ್ರಯತ್ನ ಮಾಡುತ್ತಿದ್ದೇನೆ. ಅಷ್ಟನ್ನು ಮಾತ್ರ ನಾನು ಮಾಡಲು ಸಾಧ್ಯ. ಸಿನಿಮಾ ಸೋತಾಗ ಪ್ರೇಕ್ಷಕರನ್ನಾಗಲಿ ಅಥವಾ ಇನ್ಯಾರನ್ನೂ ದೂಷಿಸಬೇಡಿ. ಇದು ಸಂಪೂರ್ಣ ನನ್ನದೇ ತಪ್ಪು. ನನ್ನ ಆಯ್ಕೆ ತಪ್ಪಾಗಿರಬಹುದು’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

‘ಸೆಲ್ಫೀ’ ಸಿನಿಮಾ ಮೊದಲ ದಿನ (ಫೆ.24) ಗಳಿಸಿದ್ದು ಕೇವಲ 2.55 ಕೋಟಿ ರೂಪಾಯಿ. ಎರಡನೇ ದಿನವಾದ ಶನಿವಾರ ಆಗಿದ್ದು 3.80 ಕೋಟಿ ರೂಪಾಯಿ ಕಲೆಕ್ಷನ್​. ಎರಡೂ ದಿನ ಗಳಿಕೆ ಸೇರಿಸಿದರೆ ಆಗುವುದು ಬರೀ 6.35 ಕೋಟಿ ರೂಪಾಯಿ. ಭಾನುವಾರವೂ ನಿರೀಕ್ಷಿತ ಮಟ್ಟದ ಏರಿಕೆ ಕಾಣುತ್ತಿಲ್ಲ. ಇದರಿಂದಾಗಿ ನಿರ್ಮಾಪಕರಿಗೆ ಸಖತ್​ ನಷ್ಟ ಆಗಿದೆ. ಅಕ್ಷಯ್​ ಕುಮಾರ್​ ಅವರಂತಹ ಸ್ಟಾರ್ ನಟನ ಚಿತ್ರ ಇಷ್ಟು ಕಡಿಮೆ ಕಲೆಕ್ಷನ್ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist