ಎಎಪಿ, ಬಿಜೆಪಿ ಸದಸ್ಯರ ನಡುವೆ ಮಾರಾಮಾರಿ; ಕುಸಿದು ಬಿದ್ದ ಕೌನ್ಸಿಲರ್!
ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ (ಎಂಸಿಡಿ) ಮತ್ತೆ ಬಿಜೆಪಿ ಮತ್ತು ಎಎಪಿ ಕೌನ್ಸಿಲರ್ ಗಳ ನಡುವೆ ಮಾರಾಮಾರಿ ನಡೆದಿದೆ.
ಶುಕ್ರವಾರ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ, ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಕೌನ್ಸಿಲರ್ ಗಳ ನಡುವೆ ಘರ್ಷಣೆ ಸಂಭವಿಸಿದ್ದು, ಉಭಯ ಪಕ್ಷಗಳ ಕೌನ್ಸಿಲರ್ ಗಳ ನಡುವೆ ಪರಸ್ಪರ ತಳ್ಳಾಟ, ಗಲಾಟೆ, ಹಲ್ಲೆ ನಡೆದಿದೆ. ಇದರಿಂದಾಗಿ ಕೌನ್ಸಿಲರ್ ಒಬ್ಬರು ಎಂಸಿಡಿ ಸದನದಲ್ಲಿ ಕುಸಿದು ಬಿದ್ದಿದ್ದಾರೆ
ಎಂಸಿಡಿಯಲ್ಲಿ ಮೂರನೇ ಬಾರಿಗೆ ಈ ರೀತಿಯ ಅಹಿತಕರ ಘಟನೆ ನಡೆದಿದೆ. ಫೆಬ್ರವರಿ 23 ರಂದು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆಯುವಾಗ ಮಾರಾಮರಿ ನಡೆದಿದ್ದರಿಂದ ಇಂದಿಗೆ ಚುನಾವಣೆಯನ್ನು ಮುಂದೂಡಲಾಗಿತ್ತು. ಇಂದು ಕೂಡಾ ಚುನಾವಣೆ ಸಂದರ್ಭದಲ್ಲಿ ಕೌನ್ಸಿಲರ್ ಗಳು ತಾವು ಜನರಿಂದ ಚುನಾಯಿತರಾದ ಪ್ರತಿನಿಧಿಗಳು ಎಂಬುದನ್ನು ಮರೆತು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಮಹಿಳಾ ಮೇಯರ್ ಶೆಲ್ಲಿ ಒಬೆರಾಯ್ ಮೇಲೆ ಹಲ್ಲೆ ನಡೆಸಿದ ಬಿಜೆಪಿಯ ಗೂಂಡಾಗಳು ತಮ್ಮ ಮೇಲೂ ಹಲ್ಲೆ ನಡೆಸಿರುವುದಾಗಿ ಹಲ್ಲೆಗೊಳಗಾದ ಎಎಪಿ ಕೌನ್ಸಿಲರ್ ಅಶೋಕ್ ಕುಮಾರ್ ಮಾನು ಮಾಧ್ಯಮಗಳ ಮುಂದೆ ಆರೋಪಿಸಿದರು.
#WATCH | Delhi: AAP Councillor, Ashok Kumar Maanu who collapsed at Delhi Civic Centre minutes back, appears before media with other Councillors of his party.
— ANI (@ANI) February 24, 2023
They say, "They are so shameless that they attacked even women and the Mayor. BJP goons did this." pic.twitter.com/dbz4xE8FW9