ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಅಂದು ಧೋನಿ.. ಇಂದು ಹರ್ಮನ್‌ಪ್ರೀತ್; ಭಾರತೀಯರಿಗೆ ಆಘಾತ ನೀಡಿದ 2 ರನೌಟ್​ಗಳ ವಿಡಿಯೋ ಹಂಚಿಕೊಂಡ ಐಸಿಸಿ

Twitter
Facebook
LinkedIn
WhatsApp
accidnet15938371621651422240 1

ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗುವ ಭಾರತದ ಮಹಾ ಕನಸು ಭಗ್ನಗೊಂಡಿದೆ. ಮಹಿಳಾ ಟಿ20 ವಿಶ್ವಕಪ್‌ನ (Women’s T20 World Cup) ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು 5 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ (India Vs Australia) ಫೈನಲ್​ಗೇರಿದೆ. ಈ ಮೂಲಕ ವಿಶ್ವಕಪ್ ಗೆಲ್ಲಬೇಕೆನ್ನುವ ಹರ್ಮನ್‌ಪ್ರೀತ್ ಕೌರ್ ಮಹದಾಸೆಗೆ ಆಸೀಸ್ ವನಿತೆಯರು ತಣ್ಣೀರೆರಚ್ಚಿದ್ದಾರೆ. ವಾಸ್ತವವಾಗಿ ಆಸೀಸ್ ನೀಡಿದ 173 ರನ್‌ಗಳ ಗುರಿಯನ್ನು ಸುಲಭವಾಗಿ ಸಾಧಿಸುವ ಹಂತದಲ್ಲಿದ್ದ ಟೀಂ ಇಂಡಿಯಾ ನಾಯಕಿಯ ಅದೊಂದು ಅಜಾಗರೂಕತೆಯಿಂದ ಸೋಲನನುಭವಿಸಿತು. ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಗೆಲುವಿಗಾಗಿ ಹೋರಾಟ ನಡೆಸಿದರಾದರೂ, ತಾವು ಮಾಡಿದ ತಪ್ಪಿನಿಂದಲೇ ತಂಡದ ಸೋಲಿಗೆ ಕಾರಣರಾದರು. ಭಾರತದ ಪರ ಗರಿಷ್ಠ 52 ರನ್ ಗಳಿಸಿ, ತಂಡಕ್ಕೆ ಗೆಲುವು ತರಲು ತುದಿಗಾಲಿನಲ್ಲಿ ನಿಂತಿದ್ದ ಹರ್ಮನ್​ಪ್ರೀತ್ ವಿಕೆಟ್ ಒಪ್ಪಿಸಿದ ರೀತಿ ಮಾತ್ರ ಸಾವಿರಾರು ಅಭಿಮಾನಿಗಳಿಗೆ ಶಾಕ್ ನೀಡಿತು. ಇದೀಗ ಕೌರ್ ರನ್ ಔಟ್ ಆದ ರೀತಿ, ಈ ಹಿಂದೆ, ವಿಶ್ವಕಪ್ ಸೆಮಿಫೈನಲ್​ನಲ್ಲಿ ಎಂಎಸ್ ಧೋನಿ (Ms Dhoni) ಆಗಿದ್ದ ರನೌಟ್ ನೆನಪಿಸುತ್ತಿದ್ದು, ಈ ಎರಡು ರನೌಟ್​ಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಾಸ್ತವವಾಗಿ ಆಸೀಸ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಟಾಪ್ ಆರ್ಡರ್ ಅಂದರೆ, ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಆದರೆ ತಂಡದ ಜವಬ್ದಾರಿವಹಿಸಿಕೊಂಡ ನಾಯಕಿ ಹರ್ಮನ್‌ಪ್ರೀತ್ ತಂಡದ ಗೆಲುವಿನ ಭರವಸೆಯನ್ನು ಜೀವಂತವಾಗಿಡಲು ಏಕಾಂಗಿ ಹೋರಾಟ ನಡೆಸಿದರು. ಆದರೆ ಪಂದ್ಯವು ನಿರ್ಣಾಯಕ ಹಂತವನ್ನು ತಲುಪಿದಾಗ ಹರ್ಮನ್​ಪ್ರೀತ್ ವಿಕೆಟ್ ಒಪ್ಪಿಸಿದ ರೀತಿ ಮಾತ್ರ ಕೋಟ್ಯಾಂತರ ಅಭಿಮಾನಿಗಳ ಹೃದಯ ಒಡೆಯುವಂತೆ ಮಾಡಿತು.

ಹರ್ಮನ್‌ಪ್ರೀತ್ ರನ್ ಔಟ್‌ನಿಂದ ಕನಸು ಭಗ್ನ

ವಾಸ್ತವವಾಗಿ ಭಾರತದ ಇನ್ನಿಂಗ್ಸ್​ನ 15ನೇ ಓವರ್​ನ 5ನೇ ಎಸೆತವನ್ನು ಆಡಿದ ಹರ್ಮನ್‌ಪ್ರೀತ್‌ ಎರಡು ರನ್ ಕದಿಯಲು ಓಡಿದರು. ಈ ವೇಳೆ ಒಂದು ರನ್​ ಅನ್ನು ಸುಲಭವಾಗಿ ತೆಗೆದುಕೊಂಡ ಕೌರ್, ಎರಡನೇ ರನ್​ ಅನ್ನು ಸುಲಭವಾಗಿ ತೆಗೆದುಕೊಳ್ಳುವ ಸಲುವಾಗಿ ಓಡಲಾರಂಭಿಸಿದರು. ಆದರೆ ಅವರು ಕ್ರೀಸ್​ ಬಳಿಕ ಬರುವಷ್ಟರಲ್ಲೇ ಚೆಂಡು ವಿಕೆಟ್ ಕೀಪರ್ ಹತ್ತಿರ ಬಂದಿತ್ತು. ಇದನ್ನು ಗಮನಿಸಿದ ಕೌರ್ ತಮ್ಮ ಬ್ಯಾಟನ್ನು ಕ್ರೀಸ್​ ಒಳಗೆ ಜಾರಿಸಲು ಪ್ರಯತ್ನಿಸಿದರು. ಆದರೆ ನೆಲಕ್ಕೆ ಕಚ್ಚಿಕೊಂಡ ಬ್ಯಾಟ್‌ ಮುಂದಕ್ಕೆ ಜಾರಲೇ ಇಲ್ಲ. ಹೀಗಾಗಿ ಸಮಯಕ್ಕೆ ಸರಿಯಾಗಿ ಕ್ರೀಸ್‌ ತಲುಪಲು ಸಾಧ್ಯವಾಗದೆ ಕೌರ್ ರನೌಟ್ ಆಗಿ ಪೆವಿಲಿಯನ್‌ಗೆ ಮರಳಬೇಕಾಯಿತು. ಹರ್ಮನ್‌ಪ್ರೀತ್ ರೂಪದಲ್ಲಿ ಭಾರತಕ್ಕೆ ದೊಡ್ಡ ಪೆಟ್ಟು ಬಿದ್ದಿತು. ಹರ್ಮನ್‌ಪ್ರೀತ್‌ ಔಟಾದ ಬಳಿಕ ಮತ್ತೊಮ್ಮೆ ಭಾರತದ ಇನ್ನಿಂಗ್ಸ್‌ ತತ್ತರಿಸಿತು. ಪೆವಿಲಿಯನ್‌ಗೆ ಹಿಂತಿರುಗುವಾಗ ಅವರ ಮುಖದಲ್ಲಿ ಔಟಾದ ನಿರಾಸೆ ಸ್ಪಷ್ಟವಾಗಿ ಕಾಣುತ್ತಿತ್ತು.

ಧೋನಿ ರನೌಟ್ ನೆನಪಾಯ್ತು

ಹರ್ಮನ್‌ಪ್ರೀತ್ ಅವರ ರನ್ ಔಟ್ ಎಲ್ಲರಿಗೂ ಎಂಎಸ್ ಧೋನಿಯನ್ನು ನೆನಪಿಸಿತು. ಇದರ ವಿಡಿಯೋವನ್ನು ಐಸಿಸಿ ಹಂಚಿಕೊಂಡಿದ್ದು, ಹರ್ಮನ್‌ಪ್ರೀತ್ ಮತ್ತು ಎಂಎಸ್ ಧೋನಿ ರನೌಟ್ ಆಗಿದ್ದು ಕೋಟಿಗಟ್ಟಲೆ ಜನರ ಹೃದಯ ಒಡೆಯುವಂತೆ ಮಾಡಿದೆ ಎಂದು ಬರೆದುಕೊಂಡಿದೆ. ವಾಸ್ತವವಾಗಿ, 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ ಧೋನಿ ಆಸರೆಯಾಗಿದ್ದರು.

 

ಕಣ್ಣೀರಿಟ್ಟಿದ್ದ ಅಭಿಮಾನಿಗಳು

ಈ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ಧೋನಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಈ ವೇಳೆ 50 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ, ಡೀಪ್‌ನಿಂದ ಮಾರ್ಟಿನ್ ಗಪ್ಟಿಲ್ ಎಸೆದ ನೇರ ಎಸೆತದಲ್ಲಿ ರನೌಟ್ ಆದರು. ಸ್ವಲ್ಪದರಲ್ಲೇ ಧೋನಿ ರನೌಟ್​ ಆಗಿದ್ದನ್ನು ನೋಡಿದ ತಕ್ಷಣ ಭಾರತೀಯ ಡ್ರೆಸ್ಸಿಂಗ್ ಸೇರಿದಂತೆ ಇಡೀ ದೇಶವೇ ಕಣ್ಣೀರಿಟ್ಟಿತ್ತು. ಸ್ವತಃ ಧೋನಿ ಕೂಡ ಕಣ್ಣಲ್ಲಿ ನೀರು ತುಂಬಿಕೊಂಡು ಪೆವಿಲಿಯನ್​ಗೆ ಮರಳಿದರು. ಇದೀಗ ಧೋನಿ ರನೌಟ್ ಜೊತೆಗೆ ಹರ್ಮನ್‌ಪ್ರೀತ್ ಆದ ರನ್ ಔಟ್ ವಿಡಿಯೋ ಮತ್ತೊಮ್ಮೆ ಕೋಟ್ಯಂತರ ಭಾರತೀಯರ ಹೃದಯ ಒಡೆಯುವಂತೆ ಮಾಡಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist