ಮಗ್ಗುಲ ಗ್ರಾಮದಲ್ಲಿ ಮತ್ತೆ ಧಾಳಿ ನಡೆಸಿದ ಗಜ ಪಡೆ.ರೈತರ ಆಕ್ರೋಶ
Twitter
Facebook
LinkedIn
WhatsApp
ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮ ಮತ್ತೆ ಮತ್ತೆ ಆನೆ ಧಾಳಿಗೆ ಒಳಗಾಗುತ್ತಿದ್ದು ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ದಿನಾಂಕ 18- 2- 2023 ರಂದು ಮಗ್ಗುಲ ಗ್ರಾಮದ ಪುಲಿಯಂಡ ಪಿ.ಡೆನ್ನಿ,ಪುಲಿಯಂಡ ತಿಮ್ಮಯ್ಯ ಸೇರಿದಂತೆ ಅನೇಕ ಜನರ ತೋಟಗಳಿಗೆ ಲಗ್ಗೆ ಹಾಕಿದ ಆನೆಗಳು ಕಾಫಿ,ಅಡಿಕೆ,ಏಲಕ್ಕಿ ಮುಂತಾದ ಗಿಡಗಳನ್ನು ಸಂಪೂರ್ಣವಾಗಿ ನಾಶಮಾಡಿ ಲಕ್ಷಾಂತರ ರೂ ನಷ್ಡಪಡಿಸಿವೆ.ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಟಿ ಪರಿಹಾರ ವಿತರಿಸುವ ಭರವಸೆ ನೀಡಿದ್ದಾರೆ.
ಪದೇ ಪದೇ ಮಗ್ಗುಲ ಗ್ರಾಮ ಆನೆ ಧಾಳಿಗೆ ಒಳಗಾಗುತ್ತಿದ್ದು ಇದನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೆ ಇರುವ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ತಿಂಗಳು ಪುಲಿಯಂಡ ಜಗದೀಶ್ ರವರ ಭತ್ತದ ಗದ್ದೆಗೆ ಧಾಳಿ ನಡೆಸಿ ಬೆಳೆ ನಷ್ಟ ಪಡಿಸಿದನ್ನು ಉಲ್ಲೇಖಿಸಿದ
ಗ್ರಾಮಸ್ಥರು ಹೀಗೆ ಪ್ರತಿ ತಿಂಗಳು ಆನೆ ಧಾಳಿ ಮಾಡುತ್ತಿದ್ದರೆ ರೈತರು ಗುಳೆ ಹೋಗುವ ಪರಿಸ್ಥಿತಿ ಬರಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.