ಕಡಬದಲ್ಲಿ ಕಾಡಾನೆ ದಾಳಿ – ಯುವತಿ ಸಹಿತ ಇಬ್ಬರ ಸಾವು
Twitter
Facebook
LinkedIn
WhatsApp
ಮಂಗಳೂರು: ಕಾಡಾನೆ ದಾಳಿಗೆ (Elephant Attack) ಯುವತಿ (Young Woman) ಸಹಿತ ಇಬ್ಬರು ಸಾವನ್ನಪ್ಪಿದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ (Kadaba)ತಾಲೂಕಿನ ಮೀನಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಆನೆ ದಾಳಿಗೆ ರಂಜಿತಾ (21) ಹಾಗೂ ರಮೇಶ್ ರೈ (55) ಎಂಬುವವರು ಸಾವನ್ನಪ್ಪಿದ್ದಾರೆ.
ರಂಜಿತಾ ಸ್ಥಳೀಯ ಪೇರಡ್ಕ ಹಾಲಿನ ಸೊಸೈಟಿಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆಯೇ ಮನೆಯಿಂದ ಸೊಸೈಟಿಗೆ ಹೋಗುತ್ತಿದ್ದ ವೇಳೆ ಕಾಡನೆಯೊಂದು ಏಕಾಏಕಿ ಈಕೆಯ ಮೇಲೆ ದಾಳಿ ನಡೆಸಿದೆ. ಇದೇ ವೇಳೆ ಸ್ಥಳದಲ್ಲಿದ್ದ ರಮೇಶ್ ರೈ ಎಂಬುವವರ ಮೇಲೆಯೂ ಆನೆ ದಾಳಿ ನಡೆಸಿದ್ದು, ರಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಂಜಿತಾ ಅವರನ್ನು ನೆಲ್ಯಾಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.