ಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ
ಮುಂಬೈ: ಖಾಸಗಿ ಸುದ್ದಿವಾಹಿನಿಯೊಂದರ ರಹಸ್ಯ ಕಾರ್ಯಾಚರಣೆ ಬಹಿರಂಗಗೊಂಡ ನಂತರ ಭಾರತ ತಂಡದ (Team India) ಮುಖ್ಯ ಆಯ್ಕೆಗಾರರ ಸ್ಥಾನಕ್ಕೆ ಚೇತನ್ ಶರ್ಮಾ (Chetan Sharma) ರಾಜೀನಾಮೆ ನೀಡಿದ್ದಾರೆ.
ಶುಕ್ರವಾರ ಚೇತನ್ ಶರ್ಮಾ ತಮ್ಮ ರಾಜೀನಾಮೆ ಪತ್ರವನ್ನು ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಅವರಿಗೆ ಸಲ್ಲಿಸಿದ್ದು, ರಾಜೀನಾಮೆ ಅಂಗೀಕರಿಸಿದ್ದಾರೆಖಾಸಗಿ ಸುದ್ದಿವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದರು. ವಿರಾಟ್‌ಕೊಹ್ಲಿ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಟೀಂ ಇಂಡಿಯಾ (Team India) ಕೋಚ್ ರಾಹುಲ್ ದ್ರಾವಿಡ್ (Rahul Dravid) ಹಾಗೂ ನಾಯಕ ರೋಹಿತ್ ಶರ್ಮಾ ಅವರ ನಡುವಿನ ಆಂತರಿಕ ಚರ್ಚೆಗಳ ಬಗ್ಗೆಯೂ ಬಹಿರಂಗಪಡಿಸಿದ್ದರು.
ಆಸ್ಟ್ರೇಲಿಯಾದಲ್ಲಿ (Australia) ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಕಳಪೆ ಪ್ರದರ್ಶನದ ನಂತರ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನೇ ವಜಾಗೊಳಿಸಲಾಗಿತ್ತು. ಆದರೆ ಕಳೆದ ತಿಂಗಳು ಚೇತನ್ ಶರ್ಮಾ ಅವರನ್ನ ಮುಖ್ಯ ಆಯ್ಕೆಗಾರರಾಗಿ ಮರುನೇಮಕ ಮಾಡಲಾಗಿತ್ತು. ಕಳೆದ ಮೂರು ದಿನಗಳಿಂದ ಹಿಂದೆ ನಡೆಸಲಾದ ಕುಟುಕು ಕಾರ್ಯಾಚರಣೆಯ ನಂತರ, ಚೇತನ್ ಶರ್ಮಾರನ್ನು ವಜಾಗೊಳಿಸಲು ತೀವ್ರ ಒತ್ತಡ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಚೇತನ್ ಶರ್ಮಾ ತಮ್ಮ ರಾಜೀನಾಮೆ ನೀಡಿದ್ದಾರೆ.
ರಹಸ್ಯ ಕಾರ್ಯಾಚರಣೆಯಲ್ಲಿ ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್ ಹಾಗೂ ದೀಪಕ್ ಹೂಡಾ ಆಗಾಗ್ಗೆ ತಮ್ಮ ಮನೆಗೆ ಬರುತ್ತಿದ್ದರು. ಈ ಹಿಂದೆ ವೇಗದ ಬೌಲರ್‌ಗಳು ಶೇ.70-80 ರಷ್ಟು ಫಿಟ್ ಆಗಿದ್ದರೂ ದೊಡ್ಡ ದೊಡ್ಡ ಪಂದ್ಯಗಳಲ್ಲಿ ಆಡಲು ಚ್ಚುಚ್ಚುಮದ್ದು ತೆಗೆದುಕೊಳ್ಳುತ್ತಿದ್ದರು ಎಂದು ಅವರು ಬಾಯ್ಬಿಟ್ಟಿದ್ದರು. ಇದರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.