ಪುಟ್ಟ ಹುಡುಗಿಯ ಬ್ಯಾಟಿಂಗ್ ಕೌಶಲ್ಯ; ಸಚಿನ್ ತೆಂಡೂಲ್ಕರ್, ಜಯ್ ಶಾ ಫಿದಾ! ವಿಡಿಯೋ ವೈರಲ್
ಜೈಪುರ: ರಾಜಸ್ಥಾನದ ರೈತರೊಬ್ಬರ ಮಗಳು ಅದ್ಭುತವಾಗಿ ಬ್ಯಾಟಿಂಗ್ ಮಾಡುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಗಮನ ಸೆಳೆದಿದ್ದು, ಬಾಲಕಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳಾ ಪ್ರೀಮಿಯರ್ ಲೀಗ್ ಹರಾಜು ನಡೆದ ದಿನದಂದೇ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಕನಾಸರ್ ಗ್ರಾಮದ ಬಡ ರೈತನ ಮಗಳು, 14 ವರ್ಷದ ಮುಮಲ್ ಮೆಹರ್ ಅವರು ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಿರುವ ವೇಳೆ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವೀಡಿಯೋ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಗಮನ ಸೆಳೆದಿದ್ದು, ಅವರು ವೀಡಿಯೋವನ್ನು ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. “”ಹರಾಜು ನಿನ್ನೆಯಷ್ಟೇ ನಡೆಯಿತು ಮತ್ತು ಇಂದು ಪಂದ್ಯವೂ ಪ್ರಾರಂಭವಾಗಿದೆ? ಏನು ವಿಷಯ, ನಿಜವಾಗಿಯೂ ನಿಮ್ಮ ಬ್ಯಾಟಿಂಗ್ ಅನ್ನು ಆನಂದಿಸಿದೆ” ಎಂದು ಸಚಿನ್ ತೆಂಡೂಲ್ಕರ್ ಬರೆದಿದ್ದಾರೆ.
ಇನ್ನು “ಚಿಕ್ಕ ಹುಡುಗಿಯ ಕ್ರಿಕೆಟ್ ಕೌಶಲ್ಯ ಮತ್ತು ಆಟದ ಮೇಲಿನ ಉತ್ಸಾಹ ನೋಡುಗರನ್ನು ಆಶ್ಚರ್ಯ ಮೂಡಿಸಿದೆ. ಮಹಿಳಾ ಕ್ರಿಕೆಟ್‌ನ ಭವಿಷ್ಯ ಉತ್ತಮ ಕೈಯಲ್ಲಿದೆ ಎಂದು ನೋಡಲು ನನಗೆ ಸಂತೋಷವಾಗಿದೆ. ನಮ್ಮ ಯುವ ಅಥ್ಲೀಟ್‌ಗಳನ್ನು ಸಬಲೀಕರಣಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ, ಇದರಿಂದ ಅವರ ಭವಿಷ್ಯದ ಬದಲಾಯಿಸಬಹುದು” ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನ ಬಿಜೆಪಿ ಅಧ್ಯಕ್ಷ ಪಿಎಲ್ ಪೂನಿಯಾ ಅವರು ಸಹ ಬಾಲಕಿಯ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದು, ಬಾಲಕಿ ಸಂಪೂರ್ಣ ಕ್ರಿಕೆಟ್ ನಲ್ಲಿ ತೊಡಗಿಕೊಳ್ಳಲು ಕ್ರಿಕೆಟ್ ಕಿಟ್ ಕಾಣಿಕೆಯಾಗಿ ನೀಡಿದ್ದಾರೆ. ಮರುಭೂಮಿ ಜಿಲ್ಲೆಯ ಮರಳಿನ ದಿಬ್ಬಗಳಲ್ಲಿ ಬೂಟುಗಳಿಲ್ಲದೆ ಕ್ರಿಕೆಟ್ ಆಡುತ್ತಿದ್ದ ಬಾಲಕಿಗೆ ಇದು ಗಮನಾರ್ಹ ತಿರುವು.
Kal hi toh auction hua.. aur aaj match bhi shuru? Kya baat hai. Really enjoyed your batting. ???#CricketTwitter #WPL @wplt20
— Sachin Tendulkar (@sachin_rt) February 14, 2023
(Via Whatsapp) pic.twitter.com/pxWcj1I6t6