ಗುರುವಾರ, ನವೆಂಬರ್ 21, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಒಂದೆಲಗ ಸೊಪ್ಪಿನಲ್ಲಿ ಇರುವ ಪ್ರಯೋಜನಕಾರಿ ಅಂಶಗಳು

Twitter
Facebook
LinkedIn
WhatsApp
ಒಂದೆಲಗ ಸೊಪ್ಪಿನಲ್ಲಿ ಇರುವ ಪ್ರಯೋಜನಕಾರಿ ಅಂಶಗಳು

ಒಂದೆಲಗ ಎಂಬುದು ಒಂದು ವಿಶೇಷವಾದ ಔಷಧೀಯ ಗಿಡಮೂಲಿಕೆಯಾಗಿದೆ. ಇದನ್ನು ಆಹಾರವಾಗಿಯೂ ಉಪಯೋಗಿಸುತ್ತಾರೆ. ಒಂದೆಲಗವು ಹೆಸರೇ ಸೂಚಿಸುವಂತೆ ಒಂದೇ ಎಲೆಯನ್ನು ಹೊಂದಿರುವ ಸಸ್ಯವಾಗಿದೆ. ಇದನ್ನು ಬ್ರಾಹ್ಮಿ ಎಂಬುದಾಗಿಯೂ ಕೆರೆಯುತ್ತಾರೆ. ಮತ್ತು ಆಡು ಭಾಷೆಯಲ್ಲಿ ಇಲಿಕಿವಿ ಸೊಪ್ಪು ಎಂದು ಕರೆಯುತ್ತಾರೆ. ಒಂದೆಲಗವು ನೆಲವನ್ನೇ ಅಂಟಿಕೊಂಡು ಬಳ್ಳಿಯಂತೆ ಬೆಳೆಯುವ ಗಿಡವಾಗಿದ್ದು, ಜೌಗುಪ್ರದೇಶಗಳಲ್ಲಿ ಮತ್ತು ನೀರಿನ ಪ್ರದೇಶಗಳಲ್ಲಿ ಅಂದರೆ ಗದ್ದೆ, ತೋಟಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.

ಒಂದೆಲಗ ಎನ್ನುವುದು ಹಲವಾರು ವಿಧದ ಔಷಧೀಯ ಗುಣಗಳನ್ನು ಹೊಂದಿರುವಂತಹ ಒಂದು ಸೊಪ್ಪು ಎಂದು ಹೇಳಬಹುದು. ಇದನ್ನು ಹಿಂದಿನಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ

4m 1538561285

ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಒತ್ತಡ ಹಾಗೂ ಆತಂಕ. ಕೊರೊನಾ ಸಾಂಕ್ರಾಮಿಕ ಅಥವಾ ಲಾಕ್ ಡೌನ್ ನಿಂದಾಗಿ ಇದು ಹೆಚ್ಚಾಗಿದೆ. ಅಧ್ಯಯನಗಳು ಕೂಡ ಹೇಳಿರುವ ಪ್ರಕಾರ ಜನರಲ್ಲಿ ಒತ್ತಡ ಹಾಗೂ ಆತಂಕವು ತೀವ್ರವಾಗಿದೆ.

ಮಾನಸಿಕ ಒತ್ತಡವು ಹೆಚ್ಚಾದರೆ ಅದು ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದು. ಈ ಕಾರಣ ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ. ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಆಯುರ್ವೇದದಲ್ಲಿ ಬ್ರಾಹ್ಮಿಯನ್ನು ಬಳಸಲಾಗಿದೆ.

ಬ್ರಾಹ್ಮಿ ತಿಂದರೆ ಅದರಿಂದ ಪರಿಹಾರ ಪಡೆಯಬಹುದು. ಇದರಲ್ಲಿ ಒತ್ತಡ ನಿವಾರಕ ಹಾಗೂ ಖಿನ್ನತೆ ದೂರ ಮಾಡುವ ಲಕ್ಷಣಗಳು ಇವೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವುದು.ಇದರಲ್ಲಿ ಮನಸ್ಸಿಗೆ ಶಮನ ನೀಡುವಂತಹ ಗುಣಗಳು ಕೂಡ ಇವೆ ಎಂದು ಕಂಡುಕೊಳ್ಳಲಾಗಿದೆ. ಇಂದಿನ ಕೊರೊನಾ ಸಮಯದಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ಕೂಡಿ ಹಾಕಲ್ಪಟ್ಟ ಪರಿಸ್ಥಿತಿಯಲ್ಲಿ ಇರುವ ಕಾರಣದಿಂದಾಗಿ ಮಾನಸಿಕ ಒತ್ತಡವು ಅತಿಯಾಗುತ್ತಿದೆ.

  • ಬ್ರಾಹ್ಮಿ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸಂಗ್ರಹವಾಗುವ ವಿಷಕಾರಿ ವಸ್ತುಗಳನ್ನು ನಿವಾರಿಸಲು ಸಹಾಯಕವಾಗಿದೆ. ಇದು ರಕ್ತಪರಿಚಲನೆ, ತೈಲಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಚರ್ಮದ ಆರೋಗ್ಯ ಹೆಚ್ಚಿಸುತ್ತದೆ. ಅಲ್ಲದೇ, ಸೋರಿಯಾಸಿಸ್, ತುರಿಕೆ, ಕೀವು ಸಮಸ್ಯೆಗೆ ಪರಿಹಾರ ನೀಡುತ್ತದೆ.
  • ಮಾನಸಿಕ ಒತ್ತಡ ಹೆಚ್ಚಾದಾಗ ಖಿನ್ನತೆ ಉಂಟಾಗುತ್ತದೆ. ನಮ್ಮ ಮಾತುಗಳನ್ನು ಕೇಳಲು ಯಾರು ಇಲ್ಲದಿರುವಾಗ ಒಂಟಿತನ ಕಾಡುತ್ತದೆ. ಅದು ನಿಮ್ಮನ್ನ ಖಿನ್ನತೆಗೆ ಜಾರಿಸುತ್ತದೆ. ಆಗ ಹೆಚ್ಚು ಒಂದೆಲಗ ಆಹಾರವನ್ನು ಸೇವನೆ ಮಾಡಿ.
  • ಕೂದಲಿನ ಪ್ರತಿಯೊಂದು ಸಮಸ್ಯೆಗಳಿಗೆ ಒಂದೆಲಗ ಮದ್ದು ಎನ್ನುತ್ತಾರೆ. ಒಂದೆಲಗ ಪೇಸ್ಟ್ ಅನನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಹಾಗೂ ತಲೆಹೊಟ್ಟು ನಿವಾರಣೆಯಾಗುತ್ತದೆ.
  • ಒಂದೆಲಗದ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ಅದರಿಂದ ರಸ ತೆಗೆದು ಅದನ್ನು ಜೇನುತುಪ್ಪದ ಜೊತೆ ಬೆರಸಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
  • ಒಂದೆಲಗದ ಎಲೆಯ ರಸವನ್ನು ತೆಗೆದು ಪ್ರತಿದಿನ ಕುಡಿಯುವುದರಿಂದ ದೇಹವು ಆರೋಗ್ಯವಾಗಿರುತ್ತದೆ. ಮತ್ತು ಒಂದೆಲಗದ ಬೇರನ್ನು ರುಬ್ಬಿ ಅದನ್ನು ಆಕಳಿನ ಹಸಿ ಹಾಲಿನಲ್ಲಿ ( ತಂಬು ಹಾಲು) ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ, ಜೊತೆಗೆ ಹುಟ್ಟುವ ಮಕ್ಕಳು ಕೂಡ ಚುರುಕಾಗಿ ಹುಟ್ಟುತ್ತಾರೆ.
  • ಅಜೀರ್ಣದಿಂದ ಬಳಲುತ್ತಿರುವವರು ಪ್ರತಿದಿನ 4 ರಿಂದ 5 ಒಂದೆಲಗದ ಎಲೆಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಅಲ್ಲದೆ ಒಂದೆಲಗವು ರಕ್ತಹೀನತೆಯನ್ನು ನಿವಾರಿಸುತ್ತದೆ.
  • ಕೆಲವರಿಗೆ ತಲೆಯ ಹೊಟ್ಟಿನ ಸಮಸ್ಯೆ ಇರುತ್ತದೆ. ಇದರಿಂದ ತಳೆಯ ಕೂದಲು ಉದುರುತ್ತದೆ. ಮತ್ತು ತಲೆಯಲ್ಲಿ ಹೇನು ಆಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಒಂದೆಲಗದ ಎಲೆಯನ್ನು ಮತ್ತು ಬೇರನ್ನು ಅರೆದು ತಲೆಗೆ ಹಚ್ಚಿ, 2 ತಾಸು ಬಿಟ್ಟು ಸ್ನಾನ ಮಾಡುವುದರಿಂದ ತಲೆಯ ಹೊಟ್ಟನ್ನು, ಕೂದಲು ಉದುರುವುದನ್ನು ಮತ್ತು ಕೂದಲು ಸೀಳುವಿಕೆಯನ್ನು ಕಡಿಮೆ ಮಾಡಬಹುದು.
  • ದೇಹದಲ್ಲಿ ಹೆಚ್ಚಿನ ಉಷ್ಣಾಂಶ ಉಂಟಾದಾಗ ಒಂದೆಲಗದ ಎಲೆಯನ್ನು ಬಳಸುವುದರಿಂದ ದೇಹವನ್ನು ತಂಪಾಗಿಸಬಹುದು. ಎಳ್ಳು, ಒಂದು ಹಸಿಮೆಣಸು, ಸ್ವಲ್ಪತೆಂಗಿನ ತುರಿಯನ್ನು ಸ್ವಲ್ಪ ಎಣ್ಣೆ ಸೇರಿಸಿ ಹುರಿಯಬೇಕು. ನಂತರ ಒಂದೆಲಗದ ಎಲೆಯನ್ನು ಸ್ವಲ್ಪ ಬಾಣಲೆಯಲ್ಲಿ ಅದರ ಹಸಿ ವಾಸನೆ ಹೋಗುವಷ್ಟು ಹುರಿಯಬೇಕು. ನಂತರ ಮಿಕ್ಸಿಗೆ ಹಾಕಿ ರುಬ್ಬಿ ಆ ಮಸಾಲೆಗೆ ಸಾಸಿವೆ, ಉದ್ದಿನ ಬೇಳೆ, ಒಂದು ಒಣಮೆಣಸು, 3 ರಿಂದ 4 ಬೆಳ್ಳುಳ್ಳಿ ಹಾಕಿ ಒಗ್ಗರಣೆ ತಯಾರಿಸಿ ಹಾಕಬೇಕು ಇದನ್ನು ಒಂದೆಲಗದ ತಂಬುಳಿ ಎಂದು ಕೆರೆಯುತ್ತಾರೆ. ನಂತರ ಅದನ್ನು ಅನ್ನದ ಜೊತೆ ಸವಿದರೆ ದೇಹವು ತಂಪಾಗಿರಲು ಸಹಾಯಮಾಡುತ್ತದೆ.
  • ನಿಮ್ಮೊಂದಿಗೆ ವಯೋವೃದ್ಧರು ವಾಸಿಸುತ್ತಿದ್ದರೆ ಆಗ ಅವರಿಗೆ ಇಂತಹ ಸಮಸ್ಯೆಗಳ ಅಪಾಯ ಕಡಿಮೆ ಮಾಡಲು ಬಾಹ್ಮಿಯನ್ನು ಪ್ರತಿನಿತ್ಯವೂ ನೀಡಿ. ಮಾನಸಿಕವಾಗಿ ಕುಗ್ಗುವುದು ಮತ್ತು ನೆನಪಿನ ಶಕ್ತಿ ಕುಂದುವುದನ್ನು ಬ್ರಾಹ್ಮಿ ನಿವಾರಿಸುವುದು ಎಂದು ಅಧ್ಯಯನಗಳು ಹೇಳಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ