ಗಂಗೊಳ್ಳಿ: ಸುಣ್ಣವೆಂದು ಇಲಿ ಪಾಷಾಣ ಬೆರೆಸಿ ವೀಳ್ಯದೆಲೆ ಸೇವಿಸಿದ್ದ ವೃದ್ದೆ ಮೃತ್ಯು
Twitter
Facebook
LinkedIn
WhatsApp
ಗಂಗೊಳ್ಳಿ, ಫೆ 14 : ವೀಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣ ಬೆರೆಸಿ ತಿಂದು ಅಸ್ವಸ್ಥಗೊಂಡಿದ್ದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಸಾಧು ಪೂಜಾರ್ತಿ(71) ಎಂದು ಗುರುತಿಸಲಾಗಿದೆ.
ಇವರು ಫೆ.6ರಂದು ಬೆಳಗ್ಗೆ ವೀಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣವನ್ನು ಸೇರಿಸಿ ತಿಂದಿದ್ದು, ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಗೆ ದಾಖಲಿಸಿದ್ದರೂ ಫೆ.12ರಂದು ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರ ಮಗಳು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.