ಮಗುವಾದ ನಂತರ ಅದ್ಧೂರಿ ಮದುವೆ ಆಗುತ್ತಿದ್ದಾರೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಫೆ.14ರಂದು ಉದಯ್ ಪುರದಲ್ಲಿ ಅದ್ಧೂರಿಯಾಗಿ ಮದುವೆ ಆಗುತ್ತಿದ್ದಾರೆ. ಇಂದಿನಿಂದ ಮದುವೆ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ವರದಿಯಾಗಿದೆ. ಈಗಾಗಲೇ ಅವರು ನತಾಶಾ ಸ್ಟಾಂಕೋವಿಕ್ ರನ್ನು ಮದುವೆಯಾಗಿದ್ದು, ಈ ದಂಪತಿಗೆ ಒಂದು ಮಗು ಕೂಡ ಇದೆ. ಹಾಗಾದರೆ, ನತಾಶಾಗೆ ಹಾರ್ದಿಕ್ ಡಿವೋರ್ಸ್ ಕೊಟ್ಟು ಮತ್ತೊಂದು ಮದುವೆ ಆಗುತ್ತಿದ್ದಾರೆ ಎನಿಸಿದರೆ, ಅದು ತಪ್ಪು.
ಹಾರ್ದಿಕ್ ಪಾಂಡೆ ಮತ್ತು ನತಾಶಾ ಸ್ಟಾಂಕೋವಿಕ್ ಮೂರು ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2020ರ ಮೇ 31ರಂದು ಅವರು ವಿವಾಹ ಕೂಡ ಆಗಿದ್ದರು. ಈ ದಂಪತಿಯ ಮಗುವಿಗೆ ಜುಲೈಗೆ ಮೂರು ವರ್ಷ ತುಂಬುತ್ತಿದೆ. ಆದರೆ, ಇದೀಗ ಅವರಿಗೆ ಅದ್ಧೂರಿಯಾಗಿ ಮದುವೆ ಆಗಬೇಕು ಅನಿಸಿದೆಯಂತೆ. ಹಾಗಾಗಿ ಅದೇ ನತಾಶಾ ಜೊತೆ ಫೆ.14ರಂದು ಅವರು ಎಲ್ಲರ ಸಮ್ಮುಖದಲ್ಲಿ ಮತ್ತೊಂದು ಬಾರಿ ಮದುವೆ ಆಗುತ್ತಿದ್ದಾರೆ.
ರೆಜಿಸ್ಟರ್ ಮದುವೆ ಸಂದರ್ಭದಲ್ಲಿ ಕೋವಿಡ್. ಹಾಗಾಗಿ ಆಪ್ತರಿಗಷ್ಟೇ ಮದುವೆಗೆ ಆಹ್ವಾನಿಸಿದ್ದರು. ಇದೀಗ ಎಲ್ಲರ ಸಮ್ಮುಖದಲ್ಲಿ ಅವರು ಸತಿಪತಿಗಳಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇಂದಿನಿಂದ ಫೆ.16ರವರೆಗೂ ಹಾರ್ದಿಕ್ ಮದುವೆ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ಕ್ರಿಕೆಟ್ ತಂಡದ ಬಹುತೇಕ ಸದಸ್ಯರು ಹಾಗೂ ಈ ದಂಪತಿಯ ಸ್ನೇಹಿತರು ಮತ್ತು ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಹಾರ್ದಿಕ್ ಮದುವೆ ಸಮಾರಂಭವನ್ನು ಇದೊಂದು ವಿಶೇಷ ಕಾರ್ಯಕ್ರಮ ಎಂದೇ ಬಣ್ಣಿಸಲಾಗುತ್ತಿದೆ. ಮದುವೆ ಮತ್ತು ಮಗುವಾಗಿ ಈ ರೀತಿಯಲ್ಲಿ ಮದುವೆ ಆಗುತ್ತಿರುವ ಮೊದಲ ಕ್ರಿಕೆಟಿಗೆ ಎನ್ನುವ ಹೆಗ್ಗಳಿಕೆಯೂ ಇವರದ್ದು. ಇದೊಂದು ಮದುವೆನಾ? ಅಥವಾ ವಿವಾಹ ವಾರ್ಷಿಕೋತ್ಸವನಾ ಎಂದು ಕೆಲವರು ಇದನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ.