ಗುರುವಾರ, ನವೆಂಬರ್ 21, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮರ ಸೇಬು ಹಣ್ಣಿನ ಬಗ್ಗೆ ನಿಮಗೆ ತಿಳಿದಿರದ ಪ್ರಯೋಜನಕಾರಿ ಮಾಹಿತಿಗಳು

Twitter
Facebook
LinkedIn
WhatsApp
ಮರ ಸೇಬು ಹಣ್ಣಿನ ಬಗ್ಗೆ ನಿಮಗೆ ತಿಳಿದಿರದ ಪ್ರಯೋಜನಕಾರಿ ಮಾಹಿತಿಗಳು

ಮಳೆಗಾಲದಲ್ಲಿ ಸಿಗುವ ಹಣ್ಣು ಪಿಯರ್ಸ್‌. ಇದನ್ನು ಮರಸೇಬು ಅಥವಾ ಪೇರಿಕಾಯಿ ಎಂದು ಕರೆಯುತ್ತಾರೆ. ಸೇಬಿನ ಆಕಾರವನ್ನು ಕೊಂಚ ಹೋಲುವ ಈ ಮರ ಸೇಬು ಗುಣದಲ್ಲಿ ಭಿನ್ನವಾಗಿರುತ್ತದೆ. ಪ್ರಾಚೀನ ಕಾಲದಿಂದಲೂ ಪಿಯರ್ಸ್‌ನ್ನು ಪ್ರಪಂಚದಾದ್ಯಂತ ಉಪಯೋಗಿಸಲ್ಪಡುತ್ತದೆ. ಮೂಲ ಯೂರೋಪ್‌ ದೇಶದ್ದಾದರೂ ಕಡಿಮೆ ಉಷ್ಣಾಂಶವಿರುವ ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಹಸಿರು ಬಣ್ಣವಿರುವ ಪಿಯರ್ಸ್‌ ಕೊಂಚ ಗಟ್ಟಿಯಾಗಿರುತ್ತದೆ. ಇದನ್ನು ನೋಡುವುದಕ್ಕೆ ಸ್ವಲ್ಪ ಪೇರಳೆ ಹಣ್ಣು ಮತ್ತು ಸೇಬಿನ ಆಕಾರದಲ್ಲಿ ಇರುತ್ತದೆ. ಆದರೆ ಇದು ರುಚಿಯಲ್ಲಿ ಮತ್ತು ಗುಣದಲ್ಲಿ ಬೇರೆ ಬೇರೆಯಾಗಿರುತ್ತದೆ. ಪ್ರಾಚೀನಕಾಲದಿಂದಲೂ ಕೂಡ ಇದನ್ನು ಪ್ರಪಂಚದಂತೆ ಉಪಯೋಗ ಮಾಡುತ್ತಿದ್ದಾರೆ.

ದೇಹದ ಆರೋಗ್ಯ ಉತ್ತಮವಾಗಲು ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತವೆ. ಸಮೃದ್ಧವಾದ ಪೌಷ್ಟಿಕಾಂಶ ಮತ್ತು ದೇಹಕ್ಕೆ ಬೇಕಾದ ಪ್ರೋಟೀನ್​ ಅಂಶಗಳನ್ನು ನೀಡುತ್ತವೆ. ಅಂತಹ ಹಣ್ಣುಗಳಲ್ಲಿ ಮರ ಸೇಬು ಹಣ್ಣು ಕೂಡ ಒಂದು. ಸುಲಭವಾಗಿ ಸಿಗುವ ಮರ ಸೇಬು ಹಣ್ಣುಗಳಲ್ಲಿ ಯಥೇಚ್ಛವಾದ ಫೈಬರ್​ ಅಂಶ ಅಡಕವಾಗಿದೆ. ಅದೇ ರೀತಿ ಕೊಕೋ ಮತ್ತು ಸೇಬುಹಣ್ಣುಗಳಲ್ಲಿರುವ ಕ್ಯಾಟೆಷಿನ್​ಗಳು ಮರ ಸೇಬು ಹಣ್ಣಿನಲ್ಲಿವೆ. ಇವು ದೇಹವನ್ನು ಸುರಕ್ಷಿತವಾಗಿಡುತ್ತವೆ. ಇನ್ನೂ ಮುಖ್ಯವಾಗಿ ದೇಹದ ತೂಕ ಇಳಿಕೆಗೆ ಇದು ಸಹಾಯಕ ಏಕೆಂದರೆ ಮರ ಸೇಬು ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಅಂಶವಿದೆ

pears coveer 1

ಹಸಿವೆಯನ್ನು ನಿಯಂತ್ರಿಸುತ್ತದೆ: ಫೈಬರ್​ ಅಂಶಗಳನ್ನು ಹೊಂದಿರುವ ಮರ ಸೇಬು ಹಣ್ಣು ಹಸಿವೆಯನ್ನು ನಿಯಂತ್ರಿಸುತ್ತದೆ. ಇದೇ ಕಾರಣದಿಂದ ಡಯೆಟ್​ಗೂ ಕೂಡ ಮರ ಸೇಬುಅತ್ಯುತ್ತಮ ಆಹಾರವಾಗಿದೆ. ಮಧುಮೇಹಿಗಳಿಗೂ ಉತ್ತಮ ಆಹಾರವಾಗಿರುವ ಮರ ಸೇಬು ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.

ಇನ್ನು ಈ ಹಣ್ಣನ್ನು ಸೇಬು ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ಕಂಪೇರ್ ಮಾಡಿ ನೋಡುವುದಾದರೆ ಸೇಬುಹಣ್ಣಿನ ಗಿಂತ ಕಡಿಮೆ ಪೌಷ್ಟಿಕಾಂಶಗಳನ್ನು ಹೊಂದಿದ್ದರೂ ಕೂಡ ಇದರಲ್ಲಿ ಉತ್ತಮವಾದ ನಾರಿನಂಶ ಇದೆ. ಹಾಗಾಗಿ ಯಾರಿಗೆ ಮಲಬದ್ಧತೆಯ ಸಮಸ್ಯೆ ಇರುತ್ತದೆ ಅಂತಹವರು ಇದನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ಮತ್ತೆ ಯಾರಿಗೆ ಮೂಲವೇದಿ ಅಂತಹ ಸಮಸ್ಯೆ ಇರುತ್ತದೆಯೋ ಅಂತ ಅವರಿಗೂ ಕೂಡ ಈ ಹಣ್ಣು ತುಂಬಾನೇ ಪ್ರಯುಕ್ತ. ಯಾಕೆಂದರೆ ಮೂಲವ್ಯಾದಿ ಮತ್ತು ಮಲಬದ್ಧತೆಯಂತಹ ಸಮಸ್ಯೆಯಿದ್ದವರು ತುಂಬಾನೇ ನಾರಿನಂಶ ಇರುವಂತಹ ಆಹಾರವನ್ನು ಮತ್ತು ಹಣ್ಣನ್ನು ಹಂಪಲುಗಳನ್ನು ಸೇವನೆ ಮಾಡಬೇಕಾಗುತ್ತದೆ. ಹಾಗಾಗಿ ಅವರು ಈ ಹಣ್ಣನ್ನು ಸೇವನೆ ಮಾಡಿದರೆ ತುಂಬಾನೆ ಒಳ್ಳೆಯದು.

ಪೇರಳೆ ಹಣ್ಣುಗಳನ್ನು ತಿನ್ನುವುದು ನಿಮ್ಮ ಮೂತ್ರಪಿಂಡದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪೇರಳೆಯಲ್ಲಿ ಸೋಡಿಯಂ ಕಡಿಮೆ ಇರುತ್ತದೆ, ಆದ್ದರಿಂದ ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಮೂತ್ರಪಿಂಡದ ಕಾಯಿಲೆಯನ್ನು ತಡೆಯಬಹುದು. ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಜನರು ತಮ್ಮ ದೇಹದಲ್ಲಿ ಸೋಡಿಯಂ ಮತ್ತು ನೀರನ್ನು ಸಮತೋಲನಗೊಳಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ, ಡಯಾಲಿಸಿಸ್ ಮತ್ತು ಚೇತರಿಕೆಯಿಂದ ನಿಮ್ಮನ್ನು ತಡೆಯಲು ಕಡಿಮೆ ಸೋಡಿಯಂ ಆಹಾರವನ್ನು ಹೊಂದಿರುವುದು ಅತ್ಯಗತ್ಯ.

ಪಿಯರ್ಸ್‌ನ್ನು ರಸ ಮಾಡಿ ಸೇವಿಸುವ ಬದಲು ಉಪ್ಪು-ಖಾರದ ಜೊತೆಗೆ ಹಾಗೆ ಸೇವಿಸಿದರೆ ಅದರ ರುಚಿ ಹೆಚ್ಚುತ್ತದೆ. ಕಾಲದಲ್ಲಿ ಸಿಗುವ ಹಣ್ಣುಗಳನ್ನು ತಿಂದು ಅದರ ಪ್ರಯೋಜನ ಪಡೆದುಕೊಂಡರೆ ಪೌಷ್ಟಿಕಾಂಶದ ಕೊರತೆ ನೀಗಿಸಬಹುದು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ