ರಾಜಸ್ಥಾನದ ನಾಗೌರ್ ಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಮೃತಿ ಇರಾನಿ ಪುತ್ರಿ
Twitter
Facebook
LinkedIn
WhatsApp
ಜೋಧ್ಪುರ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಜುಬಿನ್ ಇರಾನಿ ಅವರ ಪುತ್ರಿ ಶಾನೆಲ್ ಅವರು ಗುರುವಾರ ಅನಿವಾಸಿ ಭಾರತೀಯ ವಕೀಲ ಅರ್ಜುನ್ ಭಲ್ಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ರಾಜಸ್ಥಾನದ ನಾಗೌರ್ ಜಿಲ್ಲೆಯ 16ನೇ ಶತಮಾನದ ಖಿಮ್ಸರ್ ಕೋಟೆ(ಈಗ ಪಾರಂಪರಿಕ ಹೋಟೆಲ್ ಆಗಿದೆ)ಯಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ವಧು-ವರರ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಬಿಳಿ ಮೇರಿನಲ್ಲಿ ಆಗಮಿಸಿದ ವರನನ್ನು ಸ್ಮೃತಿ ಇರಾನಿ, ಅವರ ಪತಿ ಜುಬಿನ್ ಇರಾನಿ, ರಾಜಸ್ಥಾನದ ಮಾಜಿ ಸಚಿವ ಗಜೇಂದ್ರ ಸಿಂಗ್ ಮತ್ತು ವಧುವಿನ ಕುಟುಂಬ ಸದಸ್ಯರು ಸ್ವಾಗತಿಸಿದರು. ಎರಡೂ ಕಡೆಯಿಂದ ಸುಮಾರು 50 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.