ಶುಕ್ರವಾರ, ಮೇ 17, 2024
ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

250 ವರ್ಷಗಳ ಇತಿಹಾಸದ ಬೆಳ್ತಂಗಡಿಯ ಮರೋಡಿಯ ಕೊಡಮಣಿತ್ತಾಯ ದೈವಸ್ಥಾನಕ್ಕೆ ಶಿಲಾನ್ಯಾಸ.

Twitter
Facebook
LinkedIn
WhatsApp
250 ವರ್ಷಗಳ ಇತಿಹಾಸದ  ಬೆಳ್ತಂಗಡಿಯ ಮರೋಡಿಯ ಕೊಡಮಣಿತ್ತಾಯ ದೈವಸ್ಥಾನಕ್ಕೆ ಶಿಲಾನ್ಯಾಸ.

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ದೇರಾಜೆ ಬೆಟ್ಟದಲ್ಲಿ ಶ್ರೀ ದೈವ ಕೊಡಮಣಿತ್ತಾಯ ಸಾನಿಧ್ಯದ ಜಿರ್ಣೋದ್ಧಾರದ ನಿಮಿತ್ತ ಇಂದು ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿoದ ನಡೆಯಿತು .

ಈ ಕ್ಷೇತ್ರಕ್ಕೆ ಸುಮಾರು ೨೫೦ ವರ್ಷಗಳ ಇತಿಹಾಸವಿದೆ ಹಾಗೂ ಸುಮಾರು ನಲವತ್ತು ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ನೇಮೋತ್ಸವವು ನಡೆದಿದ್ದು ನಂತರ ಕ್ಷೇತ್ರವು ಶಿಥಿಲಾವಸ್ಥೆಗೆ ತಲುಪಿತ್ತು. ಮರೋಡಿ ಗ್ರಾಮದ ಪೊಸರಡ್ಕ ಶ್ರೀ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಜಿರ್ಣೋದ್ಧಾರದ ನಿಮಿತ್ತ ನಡೆದ ಪ್ರಶ್ನಾ ಚಿಂತನೆಯಲ್ಲಿ , ಈ ಸಾನಿಧ್ಯವು ಕಂಡು ಬಂದಿದ್ದು ಇದರ ಜಿರ್ಣೋದ್ಧಾರದ ಬಳಿಕ ಪೊಸರಡ್ಕ ಗರಡಿಯ ಜಿರ್ಣೋದ್ಧಾರವನ್ನು ನಡೆಸಬೇಕಾಗಿ ತಿಳಿದು ಬಂದಿದೆ. ಶ್ರೀ ಕೊಡಮಣಿತ್ತಾಯ ದೈವದ ಪ್ರಮುಖ ಆರಾಧನ ಕೇಂದಗಳಲ್ಲಿ ದೇರಾಜೆ ಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರವು ಪ್ರಮುಖ ಸ್ಥಾನದಲ್ಲಿದೆ . ಹೆಸರಿಗೆ ತಕ್ಕ ಹಾಗೆ ಸುತ್ತ ಮುತ್ತ ವರ್ಣನೀಯ ಪ್ರಾಕೃತಿಕ ಸೌಂದರ್ಯದ ಮಡಿಲಲ್ಲಿ ಈ ಸಾನಿಧ್ಯವಿದ್ದು, ಇದರ ಜಿರ್ಣೊದ್ಧಾರದ ಸಲುವಾಗಿ ಇಂದು ಶಿಲಾನ್ಯಾಸ ಕಾರ್ಯಕ್ರಮವನ್ನು ಊರಿನ ಗುರಿಕಾರರು ಹಾಗೂ ಗ್ರಾಮಸ್ಥರ ಕೂಡುವಿಕೆಯಲ್ಲಿ ಶ್ರೀ ಅನಂತ ಅಸ್ರಣ್ಣ ಕೇಳ ಬೊಟ್ಟ  ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು ..

ಈ ಸಂದರ್ಭ ಕ್ಷೇತ್ರದ ಜಿರ್ಣೊದ್ಧಾರದ ಮುಖ್ಯಸ್ಥರಾದ ಹೇಮರಾಜ್ ಬೆಳ್ಳಿಬೀಡು , ಕ್ಷೇತ್ರದ ಜಿರ್ಣೋದ್ದಾರಕ್ಕೆ ಒಗ್ಗಟ್ಟಾಗಿ ಶ್ರಮಿಸುವಂತೆ ಹಾಗೂ ಕ್ಷೇತ್ರದ ಆಭಿವೃದ್ಧಿಯ ಸಲುವಾಗಿ ಬೆಳ್ತಂಗಡಿಯ ಮಾನ್ಯ ಶಾಸಕರಾದ ಹರೀಶ್ ಪೂಂಜರವರು ಪೂರ್ಣ ಪ್ರಮಾಣದಲ್ಲಿ ಕ್ಷೇತ್ರದ ಜಿರ್ಣೋದ್ಧಾರಕ್ಕೆ ಸಹಕಾರವನ್ನು ನೀಡಿದ್ದು ಗ್ರಾಮಸ್ಥರ ಪರವಾಗಿ ಶಾಸಕರಿಗೆ ತುಂಬು ಹೃದಯದ ಧನ್ಯವಾದವನ್ನು ಸಮರ್ಪಿಸಿದರು..ಇನ್ನೂ ಈ ಸಂದರ್ಭ ಗುರಿಕಾರರಾದ ಹೇಮರಾಜ್ ಬೆಳ್ಳಿಬೀಡು ,ರಾಜೇಂದ್ರ ಬಳ್ಳಾಲ್ ಮಿತ್ತ ಬೀಡು,ಜೀನೇಂದ್ರ ಜೈನ್ ಆರಂಬೊಟ್ಟು ,ಜಯವರ್ಮ ಬುಣ್ಣು ಕುಕ್ಯಾರೊಟ್ಟು,ಸುದರ್ಶನ್ ಜೈನ್ ಪಾಂಡಿಬೆಟ್ಟು ,ಶ್ರೀ ಉದಯ ನಾಪ,ಸೇಸಪ್ಪ ಪೂಜಾರಿ ಉಚ್ಚೂರು,ನಳಿನಿ ಪಿ.ಕೆ ಮತ್ತೊಟ್ಟು ,ರಮೇಶ್ ಬಲಾಂತ್ಯರೊಟ್ಟು ಹಾಗೂ , ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್,ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪದ್ಮಶ್ರೀ ಜೈನ್, ಪಂಚಾಯತ್ ಸದಸ್ಯರಾದ ಆಶೋಕ್ ಕೋಟ್ಯಾನ್ ,ರತ್ನಾಕರ್ ಬುಣ್ಣನ್ , ಪತ್ರಕರ್ತರಾದ ಪ್ರದೀಶ್ ಹಾರೊದ್ದು ಹಾಗೂ ಊರ ಪರವೂರ ಗ್ರಾಮಸ್ಥರು ಭಾಗಿಯಾದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು