ಕಾಜೊಲ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ ಕಿಚ್ಚ ಸುದೀಪ್
ಬಾಲಿವುಡ್ ಖ್ಯಾತನಟಿ ಕಾಜೊಲ್ ಜೊತೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಕಿಚ್ಚ ಸುದೀಪ್. ಆದರೆ, ಕೆಲವು ಷರತ್ತುಗಳನ್ನೂ ಅವರು ಹಾಕಿದ್ದಾರೆ. ಕಾಜೊಲ್ ಪತಿ, ಬಾಲಿವುಡ್ ನಟ ಅಜಯ್ ದೇವಗನ್ ಈ ವಿಷಯದಲ್ಲಿ ತಮ್ಮನ್ನು ದ್ವೇಷಿಸಬಾರದು ಎಂದು ತಮಾಷೆ ಮಾಡಿದ್ದಾರೆ. ಜೊತೆಗೆ ಅಜಯ್ ದೇವಗನ್ ತಮ್ಮಿಷ್ಟದ ನಟ ಎಂದೂ ಕಿಚ್ಚ ಹೇಳಿಕೊಂಡಿದ್ದಾರೆ.
ಭಾಷಾ ವಿಷಯದಲ್ಲಿ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಟ್ವೀಟ್ ವಾರ್ ನಡೆದಿತ್ತು. ಹಿಂದಿ ಭಾಷೆಯನ್ನು ಅಜಯ್ ದೇವಗನ್ ರಾಷ್ಟ್ರ ಭಾಷೆ ಎಂದು ಕರೆದಿದ್ದರೆ, ಕನ್ನಡವೂ ಕೂಡ ರಾಷ್ಟ್ರ ಭಾಷೆ ಎಂದು ಹೇಳುವ ಮೂಲಕ ಕಿಚ್ಚ ಕನ್ನಡ ಪ್ರೇಮವನ್ನು ಮೆರೆದಿದ್ದರು. ಇದು ಸಾಕಷ್ಟು ಸುದ್ದಿ ಮಾಡಿತ್ತು. ಕೊನೆಗೆ ಒಬ್ಬರಿಗೊಬ್ಬರು ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ಸುಖಾಂತ್ಯ ಹಾಡಿದ್ದರು. ಇದೀಗ ಕಾಜೊಲ್ ಬಗ್ಗೆ ಸುದೀಪ್ ಮಾತಾಡುವ ಮೂಲಕ ತಮ್ಮಗೆ ಯಾರ ಮೇಲೂ ದ್ವೇಷವಿಲ್ಲ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಸುದೀಪ್, ‘ನಾನು ಕಾಜೊಲ್ ಜೊತೆ ನಟಿಸಲು ಕಾಯುತ್ತಿದ್ದೇನೆ. ಅಂಥದ್ದೊಂದು ಅವಕಾಶ ಸಿಗಲಿ. ಅವಕಾಶ ಸಿಕ್ಕಾಗಿ ಅಜಯ್ ದೇವಗನ್ ಕೋಪಿಸಿಕೊಳ್ಳದಿರಲಿ ಎಂದು ತಮಾಷೆ ಮಾಡಿದ್ದಾರೆ. ವೈಯಕ್ತಿಕ ವಿಚಾರಕ್ಕೆ ಅಜಯ್ ಅವರ ಜೊತೆ ತಾವು ವಾದ ಮಾಡಲಿಲ್ಲ ಎನ್ನುವುದನ್ನು ಕಿಚ್ಚ ಸ್ಪಷ್ಟ ಪಡಿಸಿದ್ದಾರೆ. ಎಲ್ಲವೂ ಪ್ರೀತಿಯಿಂದ ಸುಖಾಂತ್ಯವಾಗಿದ್ದನ್ನೂ ಅವರು ನೆನಪಿಸಿಕೊಂಡಿದ್ದಾರೆ.