ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

'ಸಾಯುವವರೆಗೆ ನಿಮ್ಮ ಗುಲಾಮರಾಗಿರುತ್ತೇವೆ' 17 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿ ತನ್ನ ತಮ್ಮನನ್ನು ಕಾಪಾಡಲು 7 ವರ್ಷದ ಬಾಲಕಿ ರೋಧಿಸಿದ ವಿಡಿಯೋ ವೈರಲ್

Twitter
Facebook
LinkedIn
WhatsApp
image.khaleejtimes 3

ಡಮಾಸ್ಕಸ್: ಟರ್ಕಿ (Turkey Earthquake) ಮತ್ತು ಸಿರಿಯಾದಲ್ಲಿ (Syria Earthquake) 7.8 ತೀವ್ರತೆಯ ಭೂಕಂಪ ಸಂಭವಿಸಿ, 7,800ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಈ ಭೀಕರ ಭೂಕಂಪದಲ್ಲಿ ಅವಶೇಷಗಳಡಿ ಸಿಲುಕಿರುವ ಲಕ್ಷಾಂತರ ಜನರ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಭೂಕಂಪ ಸಂಭವಿಸಿ ಒಂದೂವರೆ ದಿನವಾದರೂ ಕೆಲವರು ಅಚ್ಚರಿಯ ರೀತಿಯಲ್ಲಿ ಬದುಕಿ ಬಂದಿರುವ ಘಟನೆಗಳು, ಅದರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸಿರಿಯಾದಲ್ಲಿ ಉಂಟಾದ ಭೂಕಂಪದ ಸಂದರ್ಭದಲ್ಲಿ ಮಾನವೀಯ ಮುಖವನ್ನು ಪರಿಚಯಿಸುವ ಅನೇಕ ಘಟನೆಗಳು ಕೂಡ ನಡೆದಿವೆ. ಸಿರಿಯಾದಲ್ಲಿ ಅಪ್ಪನೊಬ್ಬ ತಾನು ಸಾಯುವ ಕೊನೆ ಕ್ಷಣದಲ್ಲೂ ಮಗನನ್ನು ತಬ್ಬಿ ಹಿಡಿದು, ಆತನನ್ನು ಕಾಪಾಡಲು ಹೆಣಗಾಡಿದ್ದ. ಆದರೆ, ಮಗನನ್ನು ತಬ್ಬಿಕೊಂಡ ರೀತಿಯಲ್ಲೇ ಆ ತಂದೆ-ಮಗು ಇಬ್ಬರೂ ಹೆಣ ಪತ್ತೆಯಾಗಿದ್ದಾರೆ. ಇದರ ನಡುವೆ, ಅವಶೇಷಗಳಡಿ ಸಿಲುಕಿದ್ದ 7 ವರ್ಷದ ಬಾಲಕಿಯೊಬ್ಬಳು ತನ್ನ ತಮ್ಮನನ್ನು ರಕ್ಷಿಸಲು ಆತನ ತಲೆ ಮೇಲೆ ಕೈಯನ್ನು ಇಟ್ಟುಕೊಂಡು, 17 ಗಂಟೆಗಳ ಕಾಲ ತಮ್ಮಿಬ್ಬರನ್ನೂ ಕಾಪಾಡುವ ಕೈಗಳಿಗಾಗಿ ಕಾಯುತ್ತಿದ್ದಳು. ಕೊನೆಗೂ ಆಕೆಯ ಪ್ರಾರ್ಥನೆ ನೆರವೇರಿದ್ದು, ರಕ್ಷಣಾ ಸಿಬ್ಬಂದಿ ಆಕೆ ಹಾಗೂ ಆಕೆಯ ಪುಟ್ಟ ತಮ್ಮನನ್ನು ರಕ್ಷಿಸಿದ್ದಾರೆ.

7 ವರ್ಷದ ಬಾಲಕಿ ತನ್ನ ತಮ್ಮನನ್ನು ಕಾಪಾಡಲು 17 ಗಂಟೆಗಳ ಕಾಲ ತನ್ನ ಜೀವವನ್ನೂ ಒತ್ತೆಯಾಗಿಟ್ಟು ಅವಶೇಷಗಳಡಿ ಅಲುಗಾಡದೆ ಮಲಗಿದ್ದ ವಿಡಿಯೋ ಭಾರೀ ವೈರಲ್ ಆಗಿದೆ. ಈ ವೇಳೆ ರಕ್ಷಣಾ ಸಿಬ್ಬಂದಿ ಆಕೆಯ ಬಳಿ ಹೋದಾಗ ಆಕೆ ನಮ್ಮಿಬ್ಬರನ್ನೂ ಹೇಗಾದರೂ ಇಲ್ಲಿಂದ ಕಾಪಾಡಿ. ನಾವು ಜೀವನಪೂರ್ತಿ ನಿಮಗೆ ಗುಲಾಮರಾಗಿರುತ್ತೇವೆ ಎಂದು ಹೇಳಿರುವ ವಿಡಿಯೋ ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಖಚಿತ.

ಈ ಫೋಟೋ ಮತ್ತು ವಿಡಿಯೋವನ್ನು ವಿಶ್ವಸಂಸ್ಥೆಯ ಪ್ರತಿನಿಧಿ ಮೊಹಮದ್ ಸಫಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದಾಗ ತಮ್ಮನನ್ನು ರಕ್ಷಿಸಲು ತನ್ನ ಕೈಗಳನ್ನು ಆತನ ತಲೆಯ ಮೇಲೆ ಇಟ್ಟುಕೊಂಡ 7 ವರ್ಷದ ಬಾಲಕಿ ಕೊನೆಗೂ ಅಪಾಯದಿಂದ ಪಾರಾಗಿದ್ದಾಳೆ. ಒಂದುವೇಳೆ ತಮ್ಮನನ್ನು ಕಾಪಾಡಲು ಹೋಗಿ ಆಕೆ ಮೃತಪಟ್ಟಿದ್ದರೆ ಎಲ್ಲರೂ ಆಕೆಯನ್ನು ಹೀರೋ ರೀತಿ ನೋಡುತ್ತಿದ್ದರು, ಆ ವಿಡಿಯೋವನ್ನು ಹಂಚಿಕೊಂಡು ಸಂತಾಪ ತೋರಿಸುತ್ತಿದ್ದರು. ಇಂತಹ ಪಾಸಿಟಿವ್ ವಿಡಿಯೋಗಳನ್ನೂ ಹಂಚಿಕೊಳ್ಳಿ. ಆ ಬಾಲಕಿಯ ಜೀವನಪ್ರೀತಿಯನ್ನು ಮೆಚ್ಚಿ ಈ ವಿಡಿಯೋ ಶೇರ್ ಮಾಡಿ ಎಂದು ಸಫಾ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ