ಮಂಗಳೂರು : ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿಗಳ ಮೃತದೇಹ ಪತ್ತೆ!
Twitter
Facebook
LinkedIn
WhatsApp
ಮಂಗಳೂರು: ಲಾಡ್ಜ್‌ವೊಂದರಲ್ಲಿ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ಬುಧವಾರ ನಡೆದಿದೆ.
ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಭ ನಿವಾಸಿಗಳಾದ ರವೀಂದ್ರ (55), ಸುಧಾ (50) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ದಂಪತಿ. ಫೆಬ್ರವರಿ 6ರಂದು ಲಾಡ್ಜ್ ಬಾಡಿಗೆ ಪಡೆದಿದ್ದ ದಂಪತಿಯನ್ನು ಅದೇ ದಿನ ರಾತ್ರಿ ಸಿಬಂದಿ ನೋಡಿದ್ದಾರೆ. ಆದರೆ ಎರಡು ದಿನಗಳಿಂದ ಅವರು ಹೊರ ಬಾರದೇ ಇದ್ದ ಕಾರಣ ಸಿಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬಾಗಿಲು ತೆರೆದಾಗ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.