ಬುಧವಾರ, ಮೇ 8, 2024
ಟಿ-20 ವಿಶ್ವಕಪ್ ಗೆ ಪ್ರಕಟಗೊಂಡ ಎಲ್ಲಾ ತಂಡದಲ್ಲಿ ಯಾರೆಲ್ಲಾ ಆಟಗಾರರಿದ್ದಾರೆ? ಬಲಿಷ್ಠ ತಂಡ ಯಾವುದು?-ಕರ್ನಾಟಕದಲ್ಲಿ ಸಂಜೆ 5 ಗಂಟೆವರೆಗೆ ಶೇಕಡಾ 66.05 ರಷ್ಟು ಮತದಾನ..!-ಕಳೆದ ಐದು ತಿಂಗಳಿಂದ ರಿಜಿಸ್ಟ್ರೇಷನ್ ಸರ್ವರ್ ಸಮಸ್ಯೆ ಮುಗಿಯದ ಕಥೆ!10 ನಿಮಿಷದ ಡಾಕ್ಯೂಮೆಂಟ್ಗೆ ಅಪ್ಲೋಡೆಗೆ ಬೇಕು ಮೂರರಿಂದ ನಾಲ್ಕು ದಿನ!!-ಮಂಜೇಶ್ವರ: ಕಾರು ಮತ್ತು ಅಂಬುಲೆನ್ಸ್ ನಡುವೆ ಭೀಕರ ಅಪಘಾತ; ಮೂವರು ಸಾವು.!-ಬಂಟ್ವಾಳ: ಮದುವೆ ಸಭಾಂಗಣವೊಂದರ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!-Rain Alert: ರಾಜ್ಯದಲ್ಲಿ ಇಂದಿನಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ.!-ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಆಗಲು ನನ್ನ ಪಾತ್ರವಿಲ್ಲ; ದೇವರಾಜೆಗೌಡರಿಂದ ಸುಳ್ಳು ಆರೋಪವೆಂದ ಡಿಕೆ ಶಿವಕುಮಾರ್-ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ-ಆಘಾತಕಾರಿ ಘಟನೆ; ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಸಾವು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಟೆಸ್ಟ್ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ಅಪ್ಪ-ಮಗ; ಅಪರೂಪದ ಸಾಧನೆ

Twitter
Facebook
LinkedIn
WhatsApp
l31820230206180915

ವೆಸ್ಟ್ ಇಂಡೀಸ್​ನ ಮಾಜಿ ಆಟಗಾರ ಶಿವನಾರಾಯಣ್ ಚಂದ್ರಪಾಲ್ ಅವರ ಪುತ್ರ ಟಾಗೆನರೈನ್ ಚಂದ್ರಪಾಲ್ (Tagenarine Chanderpaul) ಟೆಸ್ಟ್ ಕ್ರಿಕೆಟ್​ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ಅಪ್ಪ-ಮಗ ಎಂಬ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಶಿವನಾರಾಯಣ್ ಚಂದ್ರಪಾಲ್ 2005 ರಲ್ಲಿ ಸೌತ್ ಆಫ್ರಿಕಾ ವಿರುದ್ಧ 203 ರನ್​ ಬಾರಿಸಿ ಮಿಂಚಿದ್ದರು. ಇದೀಗ ತಂದೆಯ ಹಾದಿಯಲ್ಲಿರುವ ಮಗ ಕೂಡ ದ್ವಿಶತಕ ಬಾರಿಸಿ ವಿಶ್ವದ ಗಮನ ಸೆಳೆದಿದ್ದಾರೆ.

ಇನ್ನು ಜಿಂಬಾಬ್ವೆ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್​ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ವಿಂಡೀಸ್​ಗೆ ಟಾಗೆನರೈನ್ ಹಾಗೂ ಕ್ರೇಗ್ ಬ್ರಾಥ್​ವೈಟ್ ಅತ್ಯುತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ ನಾಜೂಕಾದ ಜೊತೆಯಾಟವಾಡಿದ ಈ ಜೋಡಿ 336 ರನ್​ಗಳನ್ನು ಪೇರಿಸಿದರು. ಈ ಹಂತದಲ್ಲಿ 312 ಎಸೆತಗಳಲ್ಲಿ 18 ಫೋರ್​ನೊಂದಿಗೆ 182 ರನ್​ ಬಾರಿಸಿದ್ದ ಕ್ರೇಗ್ ಬ್ರಾಥ್​ವೈಟ್ ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು.

ಮತ್ತೊಂದೆಡೆ ಕಲಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದ ಟಾಗೆನರೈನ್ ಚಂದ್ರಪಾಲ್ ಕೆಲ ಹೊಡೆತಗಳ ಮೂಲಕ ತಂದೆಯನ್ನು ನೆನಪಿಸಿದರು. ಅಷ್ಟೇ ಅಲ್ಲದೆ 465 ಎಸೆತಗಳಲ್ಲಿ ಚೊಚ್ಚಲ ದ್ವಿಶತಕ ಪೂರೈಸಿದರು. ಈ ದ್ವಿಶತಕ ಮೂಡಿಬರುವಷ್ಟರಲ್ಲಿ ವೆಸ್ಟ್ ಇಂಡೀಸ್ ಮೊತ್ತವು 400ರ ಗಡಿದಾಟಿತ್ತು.

ಹೀಗಾಗಿ 6 ವಿಕೆಟ್ ನಷ್ಟಕ್ಕೆ 447 ರನ್​ಗಳಿಸಿದ್ದ ವೇಳೆ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು. ವಿಶೇಷ ಎಂದರೆ 467 ಎಸೆತಗಳನ್ನು ಎದುರಿಸಿದ ಟಾಗೆನರೈನ್ ಚಂದ್ರಪಾಲ್ 3 ಭರ್ಜರಿ ಸಿಕ್ಸ್ ಹಾಗೂ 16 ಬೌಂಡರಿಯೊಂದಿಗೆ 207 ರನ್​ ಬಾರಿಸಿ ಅಜೇಯರಾಗಿ ಉಳಿದರು.

ಒಟ್ಟಿನಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ವೆಸ್ಟ್ ಇಂಡೀಸ್​ನ ಮೊದಲ ಅಪ್ಪ-ಮಗ ಎಂಬ ಹಿರಿಮೆಗೆ ಶಿವನಾರಾಯಣ್ ಚಂದ್ರಪಾಲ್-ಟಾಗೆನರೈನ್ ಚಂದ್ರಪಾಲ್ ಪಾತ್ರರಾಗಿದ್ದಾರೆ.

ಸದ್ಯ ಮೂರನೇ ದಿನದಾಟದ ವೇಳೆ ಮೊದಲ ಇನಿಂಗ್ಸ್ ಆರಂಭಿಸಿರುವ ಜಿಂಬಾಬ್ವೆ ತಂಡವು 84 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಇನ್ನು ಕೂಡ 363 ರನ್​ ಕಲೆಹಾಕಬೇಕಿದ್ದು, ಅದರೊಳಗೆ ಆಲೌಟ್ ಮಾಡಿ ಫಾಲೋಆನ್ ಹೇರುವ ಪ್ಲ್ಯಾನ್​ನಲ್ಲಿದೆ ವೆಸ್ಟ್ ಇಂಡೀಸ್ ತಂಡ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ