ಗುರುವಾರ, ಮೇ 16, 2024
ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!-ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?-ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!-8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಖಾಸಗಿ ಶಾಲೆಯ ಮಾಲೀಕನ ಬಂಧನ!-Breaking NEWS: ಲಾರಿಗೆ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ; 6 ಮಂದಿ ಸಾವು-Rakhi Sawant: ಹೃದಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ರಾಖಿ ಸಾವಂತ್; ಫೋಟೋ ವೈರಲ್!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಬಲಿಷ್ಠವಾಗಿದೆ: ನಿರ್ಮಲಾ ಸೀತಾರಾಮನ್

Twitter
Facebook
LinkedIn
WhatsApp

ಹೊಸದಿಲ್ಲಿ: ಅಮೆರಿಕದ ಸಂಶೋಧನ ಸಂಸ್ಥೆ ಹಿಂಡ ನ್‌ಬರ್ಗ್‌ ಹಾಗೂ ಅದಾನಿ ಸಮೂಹ ಸಂಸ್ಥೆಯ ನಡುವೆ ಹಗ್ಗ ಜಗ್ಗಾಟ ನಡೆದಿರು ವಂತೆಯೇ, ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆ ಮತ್ತು ಅದಾನಿ ಕಂಪೆನಿಗೆ ಸಾಲ ನೀಡಿರುವ ಸಂಸ್ಥೆಗಳು ಬಲಿಷ್ಠವಾಗಿದ್ದು, ಅವುಗಳಿಗೆ ಯಾವುದೇ ಅಪಾಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಸಿಎನ್‌ಬಿಸಿ-ಟಿವಿ18ಗೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಭಾರತದ ಹಣಕಾಸು ಮಾರುಕಟ್ಟೆಯು ಉತ್ತಮ ಆಡಳಿತ ಮತ್ತು ಸೂಕ್ತ ನಿಯಂತ್ರಣಗಳನ್ನು ಹೊಂದಿದೆ. ಕಠಿನ ನಿಯಂತ್ರಣ ಕ್ರಮಗಳನ್ನು ಇಲ್ಲಿ ಅನುಸರಿಸಲಾಗುತ್ತದೆ. ಎಸ್‌ಬಿಐ ಮತ್ತು ಎಲ್‌ಐಸಿ ಕೂಡ ಅದಾನಿ ಗ್ರೂಪ್‌ನಲ್ಲಿ ಅನುಮತಿಸಲಾದ ಮಿತಿಯ ಷೇರುಗಳನ್ನಷ್ಟೇ ಹೊಂದಿರುವುದಾಗಿ ಈಗಾಗಲೇ ಸ್ಪಷ್ಟಪಡಿಸಿವೆ. ಜತೆಗೆ ಎಲ್‌ಐಸಿ ಮತ್ತು ಎಸ್‌ಬಿಐಗಳು ಲಾಭದಲ್ಲೇ ಇವೆ’ ಎಂದು ಹೇಳಿದ್ದಾರೆ.

ಟೀ ಕಪ್‌ನಲ್ಲಿನ ಬಿರುಗಾಳಿ: ಅದಾನಿ ಗ್ರೂಪ್‌ ಷೇರುಗಳ ಪತನದಿಂದ ಷೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ಸಂಚಲನವು “ಟೀ ಕಪ್‌ನಲ್ಲಿನ ಬಿರುಗಾಳಿ'(ಅಲ್ಪಾವಧಿಯದ್ದು ಮತ್ತು ಅಲ್ಪ ತೀವ್ರತೆಯದ್ದು) ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್‌ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಭಾರತದ ಸಾರ್ವಜನಿಕ ಹಣಕಾಸು ವ್ಯವಸ್ಥೆಯು ಬಲಿಷ್ಠವಾಗಿದೆ ಎಂದೂ ತಿಳಿಸಿದ್ದಾರೆ.

ಸುಪ್ರೀಂಗೆ ಪಿಐಎಲ್‌: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಹಿಂಡನ್‌ಬರ್ಗ್‌ ರಿಸರ್ಚ್‌ ಮತ್ತು ಭಾರತದಲ್ಲಿರುವ ಆ ಕಂಪೆನಿಯ ಸಹವರ್ತಿ ಸಂಸ್ಥೆಗಳ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಅದಾನಿ ಗ್ರೂಪ್‌ ಷೇರುಗಳನ್ನು ಕೃತಕವಾಗಿ ಪತನಗೊಳಿಸುವ ಮೂಲಕ ಅಮಾಯಕ ಹೂಡಿಕೆದಾರರ ಮೇಲೆ ದೌರ್ಜನ್ಯವೆಸಗುತ್ತಿವೆ ಎಂದು ಅರ್ಜಿದಾರ, ವಕೀಲ ಎಂ.ಎಲ್‌.ಶರ್ಮಾ ಆರೋಪಿಸಿದ್ದಾರೆ.

ಕಾನೂನು ಪಾಲಿಸಿದ್ದೇವೆ: ನಾವು ಭಾರತದ ಕಾನೂನುಗಳನ್ನು ಪಾಲಿಸಿಕೊಂಡು ಅದಾನಿ
ಗ್ರೂಪ್‌ನ 2 ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದೇವೆ. ಈಗ ಷೇರು ಮಾರುಕಟ್ಟೆ ಪತನಗೊಂಡಿತು ಎಂಬ ಕಾರಣಕ್ಕೆ ಮರು ಮೌಲ್ಯಮಾಪನ ಮಾಡಲು ಹೋಗುವುದಿಲ್ಲ ಎಂದು ಫ್ರಾನ್ಸ್‌ನ ಟೋಟಲ್‌ ಎನರ್ಜೀಸ್‌ ಶುಕ್ರವಾರ ಪ್ರಕಟನೆ ಹೊರಡಿಸಿದೆ.
ಇನ್ನೊಂದೆಡೆ ಅದಾನಿ ಕಂಪೆನಿಗಳಿಗೆ ನಾವು ನೀಡಿರುವ 250 ಕೋಟಿ ರೂ. ಸಾಲ ಸುರಕ್ಷಿ ತವಾಗಿದ್ದು, ಬ್ಯಾಂಕ್‌ನ ಹೂಡಿಕೆದಾರರು ಆತಂಕ ಪಡಬೇಕಾಗಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ ಸ್ಪಷ್ಟಪಡಿಸಿದೆ. ಇದೇ ವೇಳೆ ಅದಾನಿ ಸಮೂಹಕ್ಕೆ ಶೇ.0.88ರಷ್ಟು ಅಂದರೆ 27 ಸಾವಿರ ಕೋಟಿ ರೂ.ಗಳಷ್ಟು ಸಾಲವನ್ನು ನೀಡಲಾಗಿದೆ ಎಂದು ಎಸ್‌ಬಿಐ ಮುಖ್ಯಸ್ಥ ದಿನೇಶ್‌ ಖಾರಾ ತಿಳಿಸಿದ್ದಾರೆ.

ಅದಾನಿ ಸಮೂಹದ ಷೇರುಗಳ ಪತನ ದಿಂದಾಗಿ ಮುಖ್ಯಸ್ಥ ಗೌತಮ್‌ ಅದಾನಿ ತಮ್ಮ ವೈಯಕ್ತಿಕ ಸಂಪತ್ತಿನಲ್ಲಿ ಅರ್ಧದಷ್ಟನ್ನು ಕಳೆದುಕೊಂಡಿದ್ದಾರೆ. ಪರಿಣಾಮ ಅವರು ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಸೂಚ್ಯಂಕದಲ್ಲಿ “ಟಾಪ್‌ 20 ಶ್ರೀಮಂತರ ಪಟ್ಟಿ’ಯಿಂದಲೂ ಹೊರಕ್ಕೆ ಬಿದ್ದಿದ್ದಾರೆ. ಹಿಂಡನ್‌ಬರ್ಗ್‌ ವರದಿ ಹೊರಬಿದ್ದಾಗಿನಿಂದ ಅದಾನಿ ಕಂಪೆನಿಯ ಮಾರುಕಟ್ಟೆ ಮೌಲ್ಯ 9.74 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ.

ರೇಟಿಂಗ್‌ ಸಂಸ್ಥೆಗಳು ಹೇಳಿದ್ದೇನು?
ಫೆ.7ರಿಂದ ಅದಾನಿ ಎಂಟರ್‌ಪ್ರೈಸಸ್‌ ಅನ್ನು ತನ್ನ ಸುಸ್ಥಿರ ಸೂಚ್ಯಂಕದಿಂದ ತೆಗೆದುಹಾಕು ವುದಾಗಿ ಎಸ್‌ ಆ್ಯಂಪ್‌ ಪಿ ಡೋವ್‌ ಜೋನ್ಸ್‌ ಶುಕ್ರವಾರ ತಿಳಿಸಿದೆ.

ಅದಾನಿ ಗ್ರೂಪ್‌ ಕಂಪೆನಿಗಳನ್ನು ಅಲ್ಪಾವಧಿಯ ಹೆಚ್ಚುವರಿ ನಿಗಾದಲ್ಲಿಡಲಾಗುವುದು ಎಂದು ಬಿಎಸ್‌ಇ ಮತ್ತು ಎನ್‌ಎಸ್‌ಇ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ ಸಂಸ್ಥೆಯ ಒಟ್ಟಾರೆ ಹಣಕಾಸು ಸ್ಥಿತಿಯನ್ನು ಪರಿಶೀಲಿಸು ತ್ತಿರುವುದಾಗಿ ಕ್ರೆಡಿಟ್‌ ರೇಟಿಂಗ್ಸ್‌ ಸಂಸ್ಥೆ ಮೂಡೀಸ್‌ ತಿಳಿಸಿದೆ. ಜತೆಗೆ ಕಂಪೆನಿಯ ಷೇರುಗಳು ಪತನಗೊಳ್ಳುತ್ತಿರುವ ಕಾರಣ ಬಂಡವಾಳ ವೆಚ್ಚ ಸರಿದೂಗಿಸಲು ಮತ್ತು ಮುಂದಿನ 1-2 ವರ್ಷಗಳಲ್ಲಿ ಮೆಚೂರ್‌ ಆಗುವಂಥ ಸಾಲದ ಮರುಪೂರಣಕ್ಕೆ ಅಗತ್ಯವಿರುವ ಬಂಡವಾಳವನ್ನು ಸಂಗ್ರಹಿಸುವ ಕಂಪೆನಿಯ ಸಾಮರ್ಥ್ಯಕ್ಕೆ ಧಕ್ಕೆಯಾಗಲಿದೆ ಎಂದೂ ಮೂಡೀಸ್‌ ಅಭಿಪ್ರಾಯಪಟ್ಟಿದೆ. ಇನ್ನು ಹಿಂಡನ್‌ಬರ್ಗ್‌ ವರದಿ ಹೊರತಾಗಿಯೂ ಸದ್ಯಕ್ಕೆ ಅದಾನಿ ಸಂಸ್ಥೆಗಳ ರೇಟಿಂಗ್‌ ಮೇಲೆ ಪರಿಣಾಮ ಉಂಟಾಗದು ಎಂದು ಫಿಚ್‌ ರೇಟಿಂಗ್‌ ಸಂಸ್ಥೆ ಹೇಳಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ