ಮಗುವಾದ ಬಳಿಕ ಮಾಲಿವುಡ್‌ನತ್ತ ಪ್ರಣಿತಾ ಸುಭಾಷ್
ಬಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿದ್ದಾರೆ. ಮದುವೆ, ಸಂಸಾರ, ತಾಯ್ತನ ಅಂತಾ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಿದ್ದ ನಟಿ ಮತ್ತೆ ಚಿತ್ರರಂಗದತ್ತ (Films) ಮುಖ ಮಾಡಿದ್ದಾರೆ.
ಮುದ್ದು ಮಗಳು ಆರ್ನಾ ಆರೈಕೆಯಲ್ಲಿ ಬ್ಯುಸಿಯಿದ್ದ ನಟಿ ಪ್ರಣಿತಾ ಸದ್ಯ ಮಲಯಾಳಂ (Malyalam) ಚಿತ್ರರಂಗದತ್ತ ನಟಿ ಆಕ್ಟೀವ್ ಆಗಿದ್ದಾರೆ. ಮಾಲಿವುಡ್ (Mollywood) ಸೂಪರ್ ಸ್ಟಾರ್ ದಿಲೀಪ್‌ಗೆ (Dilip) ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ `ಪೊರ್ಕಿ’ ಚಿತ್ರದ ನಟಿ ಕೂಡ ಮೇಜರ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮಾಲಿವುಡ್ ನಟ ದಿಲೀಪ್ ಅವರ ಮುಂದಿನ ಚಿತ್ರ ನೈಜ ಘಟನೆಗಳನ್ನು ಆಧರಿಸಿ ನಿರ್ದೇಶನ ಮಾಡಲಾಗುತ್ತಿದೆ. ಸದ್ಯಕ್ಕೆ ಸಿನಿಮಾಗೆ `ಡಿ 148′ ಎಂದು ಹೆಸರಿಡಲಾಗಿದೆ. `ಡಿ 148′ ಸಿನಿಮಾವನ್ನು ರತೀಶ್ ರಘುನಂದನ್ (Ratheesh Raghunandan) ಅವರು ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಣಿತಾ, ನೀತಾ ಪಿಳ್ಳೈ ಸೇರಿದಂತೆ ಇತರ ಪ್ರಮುಖ ಪಾತ್ರಗಳು ಇರಲಿವೆ.
ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಈಗಾಗಲೇ ನಟಿಸಿರುವ ಪ್ರಣಿತಾ, ಇದೀಗ ಮೊದಲ ಬಾರಿಗೆ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಗುವಾದ ಬಳಿಕ ಮತ್ತೆ ಸಿನಿಮಾ ಮಾಡಲು ನಟಿ ರೆಡಿಯಾಗಿದ್ದಾರೆ. ಎಂದೂ ಮಾಡಿರದ ಪಾತ್ರದಲ್ಲಿ ಪ್ರಣಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಣಿತಾ ಅವರ ಪಾತ್ರದ ಶೂಟಿಂಗ್ 2 ವಾರಗಳ ಕಾಲ ಕೇರಳದಲ್ಲಿ ನಡೆಯಲಿದೆ. ಈಗಾಗಲೇ `ಡಿ 148′ ಶೂಟಿಂಗ್ ಶುರುವಾಗಿದೆ.