ಕಾರು ಡಿಕ್ಕಿಯಾಗಿ 30 ಕುರಿಗಳು ಸಾವು- ಮೂವರಿಗೆ ಗಾಯ
ರಾಯಚೂರು: ನಗರದ ಹೊರವಲಯದ ಲಿಂಗಸುಗೂರು ರಸ್ತೆ ಬೈಪಾಸ್ ನಲ್ಲಿ ರಸ್ತೆ ಪಕ್ಕ ನಿಲ್ಲಿಸಿದ್ದ ಕುರಿಗಳಿಗೆ ಕಾರು (Car Accident) ಡಿಕ್ಕಿಹೊಡೆದು 30 ಕುರಿಗಳು ಸಾವನ್ನಪ್ಪಿದ್ದು, 10 ಕುರಿ (Sheep) ಗಳಿಗೆ ಕಾಲು ಮುರಿದಿದೆ.
ಕುರಿಗಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಯಾಪಲದಿನ್ನಿಯ ಜಗನ್ನಾಥ ಎಂಬವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಯಾಪಲದಿನ್ನಿಯಿಂದ ಕಲ್ಲೂರಿಗೆ ಹೊರಟಿದ್ದ ಕುರಿಗಾಯಿಗಳು, ರಾತ್ರಿ ವೇಳೆ ರಸ್ತೆ ಪಕ್ಕದಲ್ಲಿ ಕುರಿಗಳನ್ನ ನಿಲ್ಲಿಸಿದ್ದರು. ಬೆಳಗ್ಗಿನ ಜಾವ ಅಪಘಾತ ಸಂಭವಿಸಿದ್ದು, 120 ಕುರಿಗಳಲ್ಲಿ 21 ಕುರಿಗಳು ಸಾವನ್ನಪ್ಪಿವೆ.
ಅಪಘಾತದಿಂದ ಸುಮಾರು ಮೂರೂವರೆ ಲಕ್ಷ ರೂಪಾಯಿ ಬೆಲೆ ಬಾಳುವ ಕುರಿಗಳು ಸಾವನ್ನಪ್ಪಿವೆ. ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗೋವಾದಿಂದ ಹೈದರಾಬಾದ್ಗೆ ಹೊರಟಿದ್ದ ಕಾರು ಕುರಿಗಳಿಗೆ ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾತ ನಡೆದಿದ್ದು, ರಾಯಚೂರು ಪಶ್ಚಿಮ ಪೊಲೀಸ್ ಠಾಣೆ (West Police Station Raichur) ಯಲ್ಲಿ ಪ್ರಕರಣ ದಾಖಲಾಗಿದೆ.