ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಕೊಲೆ' - ಶರಣ್ ಪಂಪ್ವೆಲ್ ಹೇಳಿಕೆ ವೈರಲ್
ಮಂಗಳೂರು, ಜ 29: ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಕೊಲೆ ಮಾಡಲಾಗಿದೆ ಎಂದು ಬಜರಂಗದಳ ನಾಯಕ ಶರಣ್ ಪಂಪ್ ವೆಲ್ ಹೇಳಿಕೆ ನೀಡಿದ್ದು, ಇದೀಗ ಈ ಕುರಿತ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ತುಮಕೂರಿನಲ್ಲಿ ನಡೆದ ಶೌರ್ಯಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರ್ ಹತ್ಯೆಯಲ್ಲಿ ಇರುವವರಿಗೆ ಉತ್ತರವನ್ನು ಕೊಡುವುದಕ್ಕಾಗಿ ಸುರತ್ಕಲ್ ನಲ್ಲಿ ಇದ್ದಂತಹ ಬಿಸಿ ನೆತ್ತರಿನ ಯುವಕರು, ಯಾರು ಇಲ್ಲದ ಸಮಯದಲ್ಲದಲ್ಲ, ಇಡೀ ಮಾರ್ಕೆಟ್ ನಲ್ಲಿದ್ದ ಜನರ ಎದುರೇ ನುಗ್ಗಿ ನುಗ್ಗಿ ಹೊಡೆದು ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಕಾರ ನೀಡ್ತಾರಲ್ವ ಅದು ಹಿಂದೂ ಯುವಕರ ತಾಕತ್ತು ಎಂದಿದ್ದಾರೆ.
ಇನ್ನು 2022 ರ ಜುಲೈ 26 ರಂದು ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಎರಡು ದಿನದೊಳಗೆ (ಜುಲೈ 28) ಸಾರ್ವಜನಿಕವಾಗಿಯೇ ಕೆಲ ದುಷ್ಕರ್ಮಿಗಳು ಸುರತ್ಕಲ್ ನ ಮುಹಮ್ಮದ್ ಫಾಝಿಲ್ ಎಂಬ ಯುವಕನ್ನು ಹತ್ಯೆ ಮಾಡಲಾಗಿತ್ತು.
*In order 2 reply to those #Muslim jihadists who were responsible 4 the murder of PraveenNettaru.Youths in Surathkal killed him;not in an isolated place but in an open market.This is the power of #Hindu youths* #VHP Leader Sharan Pumpwell during shouryayatra @#Tumkuru #Karnataka pic.twitter.com/AlxBNShFF8
— Imran Khan (@KeypadGuerilla) January 29, 2023