RRR ಸಂಗೀತ ನಿರ್ದೇಶಕ ಎಂಎಂ ಕೀರವಾಣಿಗೆ ಪದ್ಮಶ್ರೀ ಗೌರವ
Twitter
Facebook
LinkedIn
WhatsApp
ನಾಟು ನಾಟು… ಚಿತ್ರದ ಪ್ರಮುಖ ತಾರೆಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಮೇಲೆ ಚಿತ್ರಿಸಲಾದ ನೃತ್ಯ ಗೀತೆ.
ಇದನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದರು. ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದರು. 74ನೇ ಗಣರಾಜ್ಯೋತ್ಸವದ ಹೊತ್ತಿನಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಚಿತ್ರರಂಗದವರ ಹೆಸರು ಕೂಡ ಇದೆ.
RRR ಸಿನಿಮಾವು ಇತಿಚೇಗಷ್ಟೇ ನಾಟು ನಾಟು ಹಾಡಿಗಾಗಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದು ಇದೀಗ ಆಸ್ಕರ್ ಅಂಗಳದಲ್ಲಿದೆ. ಇದರ ಬೆನ್ನಲೇ ಭಾರತ ಸರ್ಕಾರ ನೀಡುವ 2023 ರ ಪದ್ಮಶ್ರೀ ಪ್ರಶಸ್ತಿಗೆ ಈ ಚಿತ್ರದ ಸಂಗೀತ ನಿರ್ದೇಶಕ ಕೀರವಾಣಿ ಭಾಜನರಾಗಿದ್ದಾರೆ.