ಗುರುವಾರ, ಮೇ 2, 2024
ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ-ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ-ಪೆನ್ ಡ್ರೈವ್ ಪ್ರಕರಣ: ಅಪ್ಪ- ಮಗನಿಗೆ ನೋಟಿಸ್!-ತೆಲಂಗಾಣದ ನಿಜಾಮಾಬಾದ್ ಕ್ಷೇತ್ರದ ಚುನಾವಣಾ AICC ಉಸ್ತುವಾರಿಯಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇಮಕ-ಅನೈತಿಕ ಸಂಬಂಧ ಶಂಕೆ ಕಾರಿಗೆ ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ!-Commercial LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ-ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಗ್ ಬ್ಯಾಷ್ ಲೀಗ್: 1 ಎಸೆತದಲ್ಲಿ 16 ರನ್; ಕ್ರಿಕೆಟ್‌ನಲ್ಲಿ ಅಪರೂಪದ ಘಟನೆ! ವಿಡಿಯೋ ನೋಡಿ

Twitter
Facebook
LinkedIn
WhatsApp
Y KUIJGFYHTBG 265x186 1

Big Bash League 2023: ಕ್ರಿಕೆಟ್‌ನಲ್ಲಿ ಹಲವು ಬಾರಿ ದಾಖಲೆಗಳು ನಿರ್ಮಾಣಗೊಳ್ಳುವುದನ್ನು ಮತ್ತು ಮುರಿಯುವುದನ್ನು ನೀವು ನೋಡಿರಬಹುದು, ಆದರೆ ಈ ಸುದ್ದಿಯಲ್ಲಿ ನಾವು ವಿಶ್ವ ಕ್ರಿಕೆಟ್‌ನಲ್ಲಿ ನಿರ್ಮಾಣಗೊಂಡ ಒಂದು ಅಪರೂಪದ ದಾಖಲೆಯ ಬಗ್ಗೆ ಹೇಳುತ್ತಿದ್ದೇವೆ. ಬಿಗ್ ಬ್ಯಾಷ್ ಲೀಗ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಈ ಲೀಗ್‌ನಲ್ಲಿ ಬೌಲರ್ ಒಬ್ಬರು ಕೇವಲ 1 ಎಸೆತದಲ್ಲಿ 16 ರನ್ ನೀಡಿ ಅಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.

ಈ ಬೌಲರ್ ಒಂದು ಎಸೆತದಲ್ಲಿ 16 ರನ್ ನೀಡಿದ್ದಾನೆ
ಬಿಗ್ ಬ್ಯಾಷ್ ಲೀಗ್‌ನಲ್ಲಿ ಸೋಮವಾರ ಸಿಡ್ನಿ ಸಿಕ್ಸರ್ಸ್ ಮತ್ತು ಹೋಬರ್ಟ್ ಹರಿಕೇನ್ಸ್ ನಡುವೆ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ವೇಗದ ಬೌಲರ್ ಜೋಯಲ್ ಪ್ಯಾರಿಸ್ ಒಂದು ಎಸೆತದಲ್ಲಿ 16 ರನ್ ನೀಡಿದ್ದಾರೆ. ಸಿಡ್ನಿ ಸಿಕ್ಸರ್ಸ್ ಇನ್ನಿಂಗ್ಸ್‌ನಲ್ಲಿ ಜೋಯಲ್ ಪ್ಯಾರಿಸ್ ಎರಡನೇ ಓವರ್ ಬೌಲಿಂಗ್ ಮಾಡುತ್ತಿದ್ದರು. ಈ ಓವರ್‌ನಲ್ಲಿ ಜೋಶ್ ಫಿಲಿಪ್ಸ್ ಮತ್ತು ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದರು.

ಈ ರೀತಿ ಒಂದು ಎಸೆತದಲ್ಲಿ 16 ಓಟ ಗಳಿಸಲಾಗಿದೆ
ಈ ಓವರ್‌ನ ಮೂರನೇ ಎಸೆತದಲ್ಲಿ ಜೋಯಲ್ ಪ್ಯಾರಿಸ್ ನೋ ಬಾಲ್ ಬೌಲ್ ಮಾಡಿದ್ದಾರೆ, ಸ್ಟೀವ್ ಸ್ಮಿತ್ ಅದನ್ನು ಸಿಕ್ಸರ್ ಗೆ ಅಟ್ಟಿದ್ದಾರೆ. ಈಗ ನೋ ಬಾಲ್‌ನಿಂದ ಫ್ರೀ ಹಿಟ್ ಸಿಕ್ಕಿತ್ತು, ಆದರೆ ಮುಂದಿನ ಎಸೆತದಲ್ಲಿ ಪ್ಯಾರಿಸ್ ದಿಶಾ ವೈಡ್ ಬಾಲ್ ಎಸೆದಿದ್ದಾರೆ, ವಿಕೆಟ್ ಕೀಪರ್ ಕೂಡ ಈ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ ಮತ್ತು ಸಿಡ್ನಿ ಸಿಕ್ಸರ್‌ಗೆ 5 ರನ್ ನೀಡಲಾಯಿತು. ವೈಡ್ ಬಾಲ್ ನಿಂದಾಗಿ ಫ್ರೀ ಹಿಟ್ ಮುಂದುವರೆಯಿತು ಮತ್ತು ಸ್ಮಿತ್ ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದ್ದಾರೆ. ಈ ಮೂಲಕ ಸಿಡ್ನಿ ಸಿಕ್ಸರ್ಸ್ ಪ್ಯಾರಿಸ್‌ ಅವರ ಒಂದು ಲೀಗಲ್ ಡಿಲೇವರಿಯಿಂದ 16 ರನ್ ಗಳಿಸಿದೆ, ಇದರಲ್ಲಿ 10 ರನ್ ಸ್ಮಿತ್ ಖಾತೆಗೆ ಸೇರಿಕೊಂಡಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ