ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

23 ಲಕ್ಷ ಬಿಲ್ ಕೊಡದೆ ದೆಹಲಿ ಲೀಲಾ ಪ್ಯಾಲೇಸ್‌ನಿಂದ ಪರಾರಿಯಾದವ ಮಂಗಳೂರಿನಲ್ಲಿ ಅಂದರ್

Twitter
Facebook
LinkedIn
WhatsApp
index 2

ಮಂಗಳೂರು/ ದೆಹಲಿ: ಅಬುಧಾಬಿ ರಾಜಮನೆತನದ ನಿಕಟವರ್ತಿ ಎಂದು ಹೇಳಿಕೊಂಡು ದೆಹಲಿಯ ಪಂಚತಾರಾ ಹೊಟೇಲ್ ಲೀಲಾ ಪ್ಯಾಲೇಸ್‌ನಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲ ವಾಸವಿದ್ದು, ಬಳಿಕ ಹೊಟೇಲ್ ಬಿಲ್ ನೀಡದೇ ಪರಾರಿಯಾಗಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. 41 ವರ್ಷ ಪ್ರಾಯದ ಮಹಮ್ಮದ್ ಶರೀಫ್ ಎಂದು ಆರೋಪಿಯನ್ನು ಗುರುತಿಸಲಾಗಿದೆ. ಈತ ನಕಲಿ ಬ್ಯುಸಿನೆಸ್ ಕಾರ್ಟ್ ಹಾಗೂ ದಾಖಲೆಗಳನ್ನು ನೀಡಿ ಕಳೆದ ವರ್ಷ ದೆಹಲಿಯ ಲೀಲಾ ಪ್ಯಾಲೇಸ್ ಹೊಟೇಲ್‌ನಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲ ವಾಸವಿದ್ದ

ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates) ಸರ್ಕಾರದ ನಿಕಟವರ್ತಿ ಎಂದು ಹೇಳಿಕೊಂಡು ಈತ ದೆಹಲಿಯ ಪ್ರಖ್ಯಾತ ಪಂಚತಾರಾ ಹೊಟೇಲ್‌ನಲ್ಲಿ ರೂಮ್ ಪಡೆದಿದ್ದ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹೊಟೇಲ್‌ಗೆ ಆಗಮಿಸಿದ ಈತ ನವಂಬರ್ ಅಂತ್ಯದವರೆಗೂ ಅಲ್ಲೇ ಇದ್ದ. ಇದಾದ ನಂತರ ನವಂಬರ್‌ನಲ್ಲಿ ಅಲ್ಲಿ ರೂಮ್ ಖಾಲಿ ಮಾಡಿದ ಆರೋಪಿ ಈ ವೇಳೆ 20 ಲಕ್ಷ ಬಿಲ್‌ಗೆ ಚೆಕ್‌ ನೀಡಿದ್ದ. ಆದರೆ ಅದು ಸರಿ ಇಲ್ಲದ ಕಾರಣ ಚೆಕ್ ಬೌನ್ಸ್ (Cheque Bounce) ಆಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಈತ ಹೊಟೇಲ್‌ನಿಂದ ತೆರಳುವ ವೇಳೆ ಬೆಳ್ಳಿ ಪಾತ್ರೆಗಳು ಸೇರಿದಂತೆ ಕೆಲ ಅಮೂಲ್ಯ ವಸ್ತುಗಳನ್ನು ಹೊಟೇಲ್‌ನಿಂದ ಕದ್ದೊಯ್ದಿದ್ದಾನೆ ಎಂದು ಹೊಟೇಲ್ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಮೂಲತಃ ರಾಜ್ಯದ ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯವನಾಗಿದ್ದು, 23,46,413. ಲಕ್ಷ ಹೊಟೇಲ್ ಬಿಲ್ ಅನ್ನು ಪಾವತಿಸದೇ ಪರಾರಿಯಾಗಿದ್ದ. ಇದರಿಂದ ಹೊಟೇಲ್‌ಗೆ ಧೀರ್ಘ ಮೊತ್ತದ ನಷ್ಟ ಉಂಟಾಗಿತ್ತು. ಈ ಘಟನೆಯ ನಂತರ ಹೊಟೇಲ್ ಮ್ಯಾನೇಜರ್ ಅನುಪಮ ದಾಸ್ ಗುಪ್ತಾ (Anupam Das Gupta) ಅವರು ಜನವರಿ 14 ರಂದು ದೆಹಲಿಯ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನಾಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419, 420, 380ರ ಅಡಿ ಲೀಲಾ ಪ್ಯಾಲೇಸ್ ಹೊಟೇಲ್‌ನ ( Hotel Leela Palace) ಜನರಲ್ ಮ್ಯಾನೇಜರ್ ಅನುಪಮ ಅವರು ಕೇಸ್ ದಾಖಲಿಸಿದ್ದು, ದೂರಿನ ಪ್ರಕಾರ, ಆರೋಪಿ ಮಹಮ್ಮದ್ ಶರೀಫ್ ಆಗಸ್ಟ್ 1 ರಿಂದ ನವಂಬರ್ 20ರವರೆಗೆ ಹೊಟೇಲ್‌ನಲ್ಲಿ ವಾಸವಿದ್ದ, ಹೊಟೇಲ್‌ನಿಂದ ಹೊರಟು ಹೋಗುವ ವೇಳೆ ಆತ ಅಲ್ಲಿದ್ದ ಅಮೂಲ್ಯ ವಸ್ತುಗಳನ್ನು ಕದ್ದೊಯ್ದಿದ್ದ ಎಂದು ಹೇಳಲಾಗಿದೆ. ದೂರಿನ ಬಳಿಕ ಈತನ ಬಂಧನಕ್ಕೆ ಬಲೆ ಬೀಸಿದ ದೆಹಲಿ ಪೊಲೀಸರು ತಂಡವೊಂದನ್ನು ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ನಂತರ ಜನವರಿ 19 ರಂದು ಶರೀಫ್‌ನನ್ನು (Mahamed Sharif) ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೆಹಲಿ ಪೊಲೀಸರು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist