ಕೊಡಗಿನಲ್ಲಿ ತನ್ನ ಅಭಿವೃದ್ಧಿ ಚಿಂತನೆಯಿಂದ ಸಂಚಲನ ಸೃಷ್ಟಿ ಮಾಡಿದ ಡಾ. ಮಂತರ್ ಗೌಡ. ನೂರಾರು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ !!
ಮಡಿಕೇರಿ: ಕೊಡಗಿನಲ್ಲಿ ಕಾಂಗ್ರೆಸ್ ಯುವ ನಾಯಕ ಡಾ. ಮಂತರ್ ಗೌಡ ಸಂಚಲನವನ್ನು ಸೃಷ್ಟಿ ಮಾಡಿದ್ದಾರೆ. ತನ್ನ ಅಭಿವೃದ್ಧಿ ಚಿಂತನೆಗಳಿಂದ ಜನರ ನಡುವೆ ಅಭಿವೃದ್ಧಿಯ ಚರ್ಚೆ ಹುಟ್ಟು ಹಾಕಿರುವ ಡಾ. ಮಂತರ್ ಗೌಡ ಕೊಡಗಿನ ಜನರನ್ನು ಬಹಳಷ್ಟು ಸೆಳೆದುಕೊಳ್ಳುತ್ತಿದ್ದಾರೆ.
ಈ ಕಾರಣದಿಂದ ಬೇರೆ ಬೇರೆ ಪಕ್ಷಕ್ಕೆ ಸೇರಿರುವ ನೂರಾರು ಕಾರ್ಯಕರ್ತರು ಡಾ. ಮಂತರ್ ಗೌಡ ಅಭಿವೃದ್ಧಿ ಚಿಂತನೆಯನ್ನು ಮೆಚ್ಚಿಕೊಂಡು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಕೊಡಗಿನ ಕಾಂಗ್ರೆಸ್ಸಿನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ.
ಈ ಮೊದಲು ಈ ರೀತಿಯ ಸಂಚಲನ ಯುವಕರ ನಡುವೆ ಸೃಷ್ಟಿಯಾಗಿರಲಿಲ್ಲ. ಮಂಥರ್ ಗೌಡ ಅವರ ಅಭಿವೃದ್ಧಿ ಚಿಂತನೆ ಬಹಳಷ್ಟು ಚೆನ್ನಾಗಿದೆ. ಕೊಡಗನ್ನು ಅವರು ಕರ್ನಾಟಕದ ನಂಬರ್ ಒನ್ ಜಿಲ್ಲೆಯನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಕುಶಾಲನಗರದ ಹಿರಿಯ ನಾಗರಿಕರೊಬ್ಬರು ಅಭಿಪ್ರಾಯ ಪಡುತ್ತಾರೆ.
ಕೊಡಗಿನ ಕಾಫಿ ,ಏಲಕ್ಕಿ, ಕಾಳು ಮೆಣಸುಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಲಭ್ಯವಾಗಬೇಕು ಎಂದು ದೃಢವಾಗಿ ವಾದಿಸಿಕೊಂಡು ಬರುತ್ತಿರುವ ಮಂತರ್ ಗೌಡ, ಕೊಡಗಿನ ಪುಷ್ಪೋದ್ಯಮವನ್ನು ಬೆಳವಣಿಗೆ ಮಾಡುವ ಕನಸುಗಳನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ಮಂತರ್ ಗೌಡ ರವರ ಯೋಚನೆ ಯೋಜನೆಗಳನ್ನು ಬಹುವಾಗಿ ಮೆಚ್ಚಿಕೊಂಡಿರುವ ಕೊಡಗಿನ ನಾಗರಿಕರು ಅವರ ಬಗ್ಗೆ ಒಲವನ್ನು ವ್ಯಕ್ತಪಡಿಸುತ್ತಿರುವುದು ಈ ಬಾರಿ ಚುನಾವಣೆಯ ವಿಶೇಷ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಕೊಡಗಿನಲ್ಲಿ ಸಂಚಲನ ಸೃಷ್ಟಿ ಮಾಡಿರುವ ಮಂಥರ್ ಗೌಡ ರಾಜ್ಯದ ಇತರ ಜಿಲ್ಲೆಗಳ ಪಕ್ಷದ ನಾಯಕರುಗಳ ಆಶ್ಚರ್ಯಕ್ಕೆ ಕಾರಣವಾಗಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಕೊಡಗಿನ ನಾಗರಿಕರ ಗಮನಸೆಳೆದಿರುವ ಮಂತರ್ ಗೌಡ ಮುಂದಿನ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯಾಗಿರುವ ಎಲ್ಲಾ ಲಕ್ಷಣಗಳನ್ನು ತೋರ್ಪಡಿಸಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.