ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರಲಿದೆ ಹೋಂಡಾ ಆಕ್ಟಿವಾ 7ಜಿ.
Twitter
Facebook
LinkedIn
WhatsApp
ದೇಶದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಹೋಂಡಾ ಆಕ್ಟಿವಾ ಆಗಿದೆ. ನೀವು ಹೋಂಡಾ ಆಕ್ಟಿವಾವನ್ನು ಖರೀದಿಸುವ ಯೋಚನೆಯಲ್ಲಿದ್ದರೆ ನಿಮ್ಮ ಪ್ಲಾನ್ ಅನ್ನು ಮುಂದೂಡುವುದು ಸೂಕ್ತ. ಏಕೆಂದರೆ ಶೀಘ್ರದಲ್ಲೇ ಹೋಂಡಾ ಹೊಸ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಹೋಂಡಾದ ಹೊಸ ಸ್ಕೂಟರ್ ಹೋಂಡಾ ಆಕ್ಟಿವಾ 7 ಜಿ ಆಗಿರಬಹುದು ಎನ್ನಲಾಗಿದೆ. ವರದಿಗಳ ಪ್ರಕಾರ, ಆಕ್ಟಿವಾ 7G ಎಲೆಕ್ಟ್ರಿಕ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರಲಿದೆ.
ಕಂಪನಿಯು ಸ್ಕೂಟರ್ನಲ್ಲಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ. ಈ ಸ್ಕೂಟರ್ ಅನ್ನು ಜನವರಿ 23 2023 ರಂದು ಬಿಡುಗಡೆ ಮಾಡಲಾಗುವುದು.
ಡಿಸೆಂಬರ್ 2022 ರಲ್ಲಿ, ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಹೊಸ ಸ್ಕೂಟರ್ಗಾಗಿ H-ಸ್ಮಾರ್ಟ್ ಟ್ರೇಡ್ಮಾರ್ಕ್ ಅನ್ನು ಅಪ್ಲೈ ಮಾಡಿತ್ತು. ಹೊಸ ಸ್ಕೂಟರ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.