ಸ್ಕೂಟಿ ಮೇಲೆಯೇ ಪ್ರೇಮಿಗಳ ರೊಮ್ಯಾನ್ಸ್, ವಿಡಿಯೋ ವೈರಲ್!
ಲಖನೌ: ಈ ಪ್ರೀತಿ-ಪ್ರೇಮದ(Love) ಹೆಸರಲ್ಲಿ ಕೆಲವರು ಎಲ್ಲಿ ಏನು ಮಾಡುತ್ತಿದ್ದೇವೆ ಎನ್ನವುದು ಪರಿಜ್ಞಾನವೇ ಇರುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಲವರ್ಸ್ ಸಾರ್ವಜನಿಕ ಸ್ಥಳಗಳಲ್ಲಿ ಅದು ಚಲಿಸುವ ಸ್ಕೂಟಿಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಹೌದು…ಪ್ರೇಮಿಗಳು ಚಲಿಸುತ್ತಿರುವ ಬೈಕ್ (Bike) ಮೇಲೆಯೇ ರೊಮ್ಯಾನ್ಸ್ (Romance) ಮಾಡಿದ್ದಾರೆ. ಪ್ರೇಮಿಗಳ ಈ ರೊಮ್ಯಾನ್ಸ್ ವಿಡಿಯೋ ಸಾರ್ವಜನಿಕರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಅದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಪ್ರೇಮಿಗಳ ಅಸಭ್ಯ ವರ್ತನೆ ನೋಡಿ ನೆಟ್ಟಿಗರು ಛೀ, ಥೂ ಅಂತ ಉಗೀತಾ ಇದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಉತ್ತರ ಪ್ರದೇಶದಲ್ಲಿ.
ಲಖನೌನ ಹಜರತ್ಗಂಜ್ ವ್ಯಾಪ್ತಿಯ ಜನಸಂದಣಿ ರಸ್ತೆಯಲ್ಲಿ ಸ್ಕೂಟಿ ಮೇಲೆ ಯುವಕ-ಯುವತಿ ತೆರಳುತ್ತಿದ್ದು, ಇದೇ ವೇಳೆ ಬೈಕ್ ಚಲಾಯಿಸುತ್ತಿದ್ದ ಯುವಕ, ಯುವತಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಒಬ್ಬರಿಗೊಬ್ಬರು ತಬ್ಬಿಕೊಂಡು ಮುತ್ತಿಕ್ಕುತ್ತಾ ಜಾಲಿ ರೈಡ್ ಹೊರಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
चलती स्कूटी में बीच सड़क इश्क़ का खुल्लम खु्ल्ला इज़हार।
— Shubhankar Mishra (@shubhankrmishra) January 17, 2023
- वीडियो लखनऊ हज़रतगंज का बताया जा रहा है। pic.twitter.com/65aLWkMPdd
ಲಖನೌ ಪೊಲೀಸರು ಈ ಪ್ರೇಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ತೀವ್ರ ಹುಡುಕಾಟ ನಡೆಸಿದ್ದಾರೆ. ವಿಡಿಯೋ ವೈರಲ್ ಆದ ತಕ್ಷಣ ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಲಖನೌ ಕೇಂದ್ರ ವಲಯದ ಉಪ ಪೊಲೀಸ್ ಆಯುಕ್ತ ಅಪರ್ಣಾ ರಜತ್ ಕೌಶಿಕ್, ಈ ವಿಡಿಯೋ ಹಜರತ್ಗಂಜ್ ಪ್ರದೇಶದಲ್ಲಿದ್ದು ಎಂದು ಖಚಿತಪಡಿಸಿದ್ದಾರೆ. ಪ್ರೇಮಿಗಳ ಪತ್ತೆಗೆ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಅಲ್ಲದೇ ಅವರನ್ನು ಹಿಡಿಯಲು ಪೊಲೀಸರು ಹತ್ತಿರದ ಕ್ಯಾಮೆರಾಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲಿಸುತ್ತಿದ್ದಾರೆ. ಮೋಟಾರು ವಾಹನ ಕಾಯ್ದೆಯಡಿ ಮತ್ತು ಅಶ್ಲೀಲತೆಯನ್ನು ಹರಡಿದ ಪ್ರೇಮಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.