ಪುತ್ತೂರು: ಮನೆಯಂಗಳದಲ್ಲೇ ಯುವತಿಗೆ ಚೂರಿ ಇರಿದು ಕೊಲೆ
Twitter
Facebook
LinkedIn
WhatsApp

ಪುತ್ತೂರು;ಮನೆಗೆ ನುಗ್ಗಿ ಯುವತಿಯನ್ನು ಚೂರಿಯಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪುತ್ತೂರಿನ ಮಂಡೂರು ಬಳಿ ನಡೆದಿದೆ.
ಕಂಪದ ಎಂಬಲ್ಲಿನ 23 ವರ್ಷದ ಜಯಶ್ರೀಗೆ ಚೂರಿಯಿಂದ ಇರಿಯಲಾಗಿದೆ. ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ.
ಯುವತಿಯ ಮೃತದೇಹ ಪುತ್ತೂರಿನ ಆಸ್ಪತ್ರೆಯಲ್ಲಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.