ಉಡುಪಿ: ಮಾದಕ ವಸ್ತು ಮಾರಾಟ ಯತ್ನ, ಇಬ್ಬರ ಬಂಧನ
Twitter
Facebook
LinkedIn
WhatsApp
ಉಡುಪಿ, ಜ 17 : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಾಘವೇಂದ್ರ ದೇವಾಡಿಗ ಮತ್ತು ಜಗದೀಶ್ ಪೂಜಾರಿ ಎಂದು ಗುರುತಿಸಲಾಗಿದೆ. ಇವರು ಉಡುಪಿಯ ಟೌನ್ ಹಾಲ್ ಬಳಿಯ ರಿಕ್ಷಾ ನಿಲ್ದಾಣದ ಬಳಿ ಗಾಂಜಾ ಮತ್ತು ಮೆಟಾಫೆಟನೈನ್ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ದಸ್ತಗಿರಿ ಮಾಡಲಾಗಿದೆ.
ಬಂಧಿತರಿಂದ 1.176 ಕೆಜಿ ಗಾಂಜಾ, 10 ಗ್ರಾಂ ಮೆಟಾಫೆಟನೈನ್, ನಂಬ್ರ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಆಕ್ಟಿವಾ ಸ್ಕೂಟರ್ 1, ಮೊಬೈಲ್ಪೋನ್- 2, ವೇಯಿಂಗ್ಮೀಶನ್-1,ಪೌಡರ್ಪ್ಯಾಕ್ ಮಾಡಲು ಬಳಸುವ ಸಣ್ಣ ಪ್ಲಾಸ್ಟಿಕ್ ಕವರ್-17 ವಶಪಡಿಸಿಕೊಂಡಿರುವುದಾಗಿರುತ್ತದೆ.
45,000 ರೂ ಮೌಲ್ಯದ ಮೆಟಾಫೆಟನೈನ್ ಡ್ರಗ್, 28,000 ರೂ. ಮೌಲ್ಯದ ಗಾಂಜಾ ಸಹಿತ ಒಟ್ಟು 2,09,000 ರೂ, ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.