ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandann) ಬಹುಭಾಷೆಗಳಲ್ಲಿ ನಟಿಸುತ್ತ ಎತ್ತರದ ಸ್ಥಾನದಲ್ಲಿದ್ದಾರೆ. ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತ, ಮುನ್ನುಗ್ಗುತ್ತಿದ್ದಾರೆ. ಇನ್ನೂ ಸಂಕ್ರಾಂತಿ ಹಬ್ಬಕ್ಕೆ (Sankranthi Festival) ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ. ಆದರೂ ರಶ್ಮಿಕಾ ಈ ಬಾರಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
`ಕಿರಿಕ್ ಪಾರ್ಟಿ’ ನಟಿ ರಶ್ಮಿಕಾ, ಅವರು ಸಂಕ್ರಾಂತಿ ಹಬ್ಬದ ನಿಮಿತ್ತ ಟ್ವೀಟ್ ಮಾಡಿದ್ದಾರೆ. ಕೆಂಪು ಬಣ್ಣದ ಟಾಪ್ ಧರಿಸಿ, ಸಾಂಪ್ರದಾಯಿಕ ಉಡುಗೆತೊಟ್ಟು ಕೈ ಮುಗಿದಿದ್ದಾರೆ. ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾರೆ. ಹಲವು ಭಾಷೆಗಳಲ್ಲಿ ರಶ್ಮಿಕಾ ಶುಭಾಶಯ ತಿಳಿಸಿದ್ದಾರೆ. ವಿಶೇಷ ಎಂದರೆ ಅವರು ಮೊದಲು ಕನ್ನಡದಲ್ಲಿ (Kannada) ಬರೆದುಕೊಂಡಿದ್ದಾರೆ. ಸಂಕ್ರಾಂತಿಯ ಶುಭಾಶಯಗಳು ಎಂದು ರಶ್ಮಿಕಾ ಬರೆದಿದ್ದಾರೆ. ಆ ಬಳಿಕ ತಮಿಳು, ಹಿಂದಿ, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ನಲ್ಲಿ ನಟಿ ಶುಭಕೋರಿದ್ದಾರೆ.
ರಶ್ಮಿಕಾ ಕನ್ನಡದಲ್ಲಿ ಬರೆದುಕೊಂಡ ಬಗ್ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲರೂ ನಟಿಗೆ ಮರಳಿ ಶುಭಾಶಯ ತಿಳಿಸಿದ್ದಾರೆ. ಆದರೆ, ಇನ್ನೂ ಕೆಲವರು ಅಸಮಾಧಾನ ತೋರಿದ್ದಾರೆ. ರಶ್ಮಿಕಾ ಅವರೇ ನೀವು ಈ ಮೊದಲು ಮಾಡಿದ್ದನ್ನು ನಾವು ಮರೆಯುವುದಿಲ್ಲ. ಏನೇ ಮಾಡಿದರೂ ನೀವು ನಮಗೆ ಇಷ್ಟವಾಗುವುದಿಲ್ಲ ಎಂದು ಕೆಲವರು ಬರೆದುಕೊಂಡಿದ್ದಾರೆ. ಆದರೆ, ಈ ಟ್ರೋಲ್‌ಗಳ ಬಗ್ಗೆ ರಶ್ಮಿಕಾ ತಲೆಕೆಡಿಸಿಕೊಂಡಿಲ್ಲ. ಯಾರು ಅದೆಷ್ಟೇ ಕಿಡಿಕಾರಿದ್ರು, ತಮ್ಮ ಕೆಲಸಗಳ ಮೂಲಕ ನಟಿ ಸೌಂಡ್ ಮಾಡ್ತಿದ್ದಾರೆ.
ಸದ್ಯ ರಶ್ಮಿಕಾ `ವಾರಿಸು’ (Varisu) ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. `ಮಿಷನ್ ಮಜ್ನು’ ಚಿತ್ರ ಜ.20ಕ್ಕೆ ಒಟಿಟಿಯಲ್ಲಿ ತೆರೆಗೆ ಅಬ್ಬರಿಸುತ್ತಿದೆ.