ವಿಟ್ಲ: ಇಂದಿನಿಂದ ವಿಟ್ಲ ಜಾತ್ರೋತ್ಸವ – ಅನ್ಯಮತೀಯರು ವ್ಯಾಪಾರ ನಡೆಸದಂತೆ ವಿ.ಹಿಂ.ಪ ಬಜರಂಗದಳ ಎಚ್ಚರಿಕೆ..!
Twitter
Facebook
LinkedIn
WhatsApp
ವಿಟ್ಲ: ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅನುಮತಿ ನೀಡಿ ಗಲಭೆ ಉಂಟಾಗುತ್ತಿರುವ ಹಿನ್ನಲೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ ವಿಟ್ಲ ಜಾತ್ರೋತ್ಸವದಲ್ಲಿ ಅನ್ಯಮತೀಯರಿಗೆ ಸಂತೆ, ವ್ಯಾಪಾರಕ್ಕೆ ಅನುಮತಿ ನೀಡಬಾರದೆಂದು ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಮಾಡಿದೆ.
9 ದಿವಸಗಳ ಕಾಲ ನಡೆಯುವ ವಿಟ್ಲ ಜಾತ್ರೋತ್ಸವದಲ್ಲಿ ವ್ಯಾಪಾರಕ್ಕೆ ಅನುಮತಿ ಕೊಡಬಾರದು ಎಂದು ವಿಹಿಂಪ ಬಜರಂಗದಳ ವಿಟ್ಲ ಪ್ರಖಂಡ ಎಚ್ಚರಿಕೆ ನೀಡಿದೆ.