ಭಾನುವಾರ, ಜೂನ್ 2, 2024
ರವೀನಾ ಟಂಡನ್ ಕಾರು ಅಪಘಾತ; ದಯವಿಟ್ಟು ಹೊಡಿಬೇಡಿ ಎಂದ ನಟಿ ವಿಡಿಯೋ ವೈರಲ್-ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಂದು ವಾರ ಭಾರಿ ಮಳೆ ಸಾಧ್ಯತೆ..!-ಮತ್ತೆ ತಿಹಾರ್ ಜೈಲಿಗೆ ವಾಪಸ್ಸಾದ ಸಿಎಂ ಅರವಿಂದ್ ಕೇಜ್ರಿವಾಲ್..!-ಕರಾವಳಿಯಿಂದ ಐವನ್ ಡಿಸೋಜ ಸೇರಿದಂತೆ ವಿಧಾನ ಪರಿಷತ್ ಚುನಾವಣೆಗೆ 8 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್.!-ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಸಿಟಿ ರವಿ ಸೇರಿ ಮೂವರಿಗೆ ಟಿಕೆಟ್ ಆಫರ್; ಸುಮಲತಾ ಅಂಬರೀಷ್ ಗೆ ನಿರಾಸೆ..!-ಬೆಳ್ತಂಗಡಿ: ಬೈಕಿಗೆ ಡಿಕ್ಕಿ ಹೊಡೆದ ಲಾರಿ; ಬೈಕ್ ಸವಾರ ಸಾವು.!-ಇಂಗ್ಲೆಂಡ್ನಿಂದ 1 ಲಕ್ಷ ಕಿಲೋಗ್ರಾಂಗಳಷ್ಟು ಚಿನ್ನ ಭಾರತಕ್ಕೆ ಮರಳಿ ತಂದ ಭಾರತ; ಖಜಾನೆಗೆ ರವಾನಿಸಿದ ಆರ್ಬಿಐ.!-ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ: ಮಲ್ಲಿಕಾರ್ಜುನ ಖರ್ಗೆ-ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಇಳಿಕೆ..!-ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಸಲು ಜೂನ್ 12 ರವರೆಗೆ ಅವಕಾಶ ನೀಡಿದ ಹೈಕೋರ್ಟ್
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಾಕಿ ವಿಶ್ವಕಪ್: ಬಲಿಷ್ಠ ಸ್ಪೇನ್ ವಿರುದ್ಧ 2-0 ಗೆಲುವು,

Twitter
Facebook
LinkedIn
WhatsApp
pti01 13 2023 000310b 710x400xt

ಒಡಿಶಾದಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್‌ನಲ್ಲಿ ಭಾರತವು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಭಾರತ 2-0 ಗೋಲುಗಳಿಂದ ಸ್ಪೇನ್ ಅನ್ನು ಸೋಲಿಸಿದೆ. 

ಭಾರತದ ಪರ ಅಮಿತ್ ರೋಹಿದಾಸ್ ಮತ್ತು ಹಾರ್ದಿಕ್ ಸಿಂಗ್ ಗೋಲು ಗಳಿಸಿದರು. ಭಾರತ ಎರಡನೇ ಪಂದ್ಯವನ್ನು ಜನವರಿ 15ರಂದು ಬಲಿಷ್ಠ ಇಂಗ್ಲೆಂಡ್ ವಿರುದ್ಧ ಆಡಲಿದೆ. ಇಂಗ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ವೇಲ್ಸ್ ಅನ್ನು 5-0 ಗೋಲುಗಳಿಂದ ಸೋಲಿಸಿತ್ತು. ಸ್ಪೇನ್ ವಿರುದ್ಧದ ಗೆಲುವಿನೊಂದಿಗೆ ಟೀಂ ಇಂಡಿಯಾ ಪೂಲ್ ಡಿನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇಂಗ್ಲೆಂಡ್ ಈ ಹಿಂದೆ ವೇಲ್ಸ್ ತಂಡವನ್ನು  5-0 ಅಂತರದಿಂದ ಸೋಲಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಭಾರತ ನಿಧಾನವಾಗಿ ಪಂದ್ಯ ಆರಂಭಿಸಿತು. ಮೊದಲ ಐದು ನಿಮಿಷಗಳ ಕಾಲ ಸ್ಪೇನ್ ಟೀಂ ಇಂಡಿಯಾವನ್ನು ಸಾಕಷ್ಟು ಕಂಗೆಡಿಸಿತು. ಆದರೆ ಪಂದ್ಯ ಮುಂದುವರೆದಂತೆ, ಭಾರತವು ಪಂದ್ಯದಲ್ಲಿ ಮೇಲುಗೈ ಸಾಧಿಸಲು ಪ್ರಾರಂಭಿಸಿತು. 11ನೇ ನಿಮಿಷದಲ್ಲಿ ಟೀಂ ಇಂಡಿಯಾ ತನ್ನ ಲಾಭ ಪಡೆಯಿತು.

ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಆದರೆ ಅದನ್ನು ಗೋಲ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಮುಂದಿನ ನಿಮಿಷದಲ್ಲಿ ಎರಡನೇ ಪೆನಾಲ್ಟಿ ಕಾರ್ನರ್ ಸಿಕ್ಕಿದ್ದು ಅದನ್ನು ಅಮಿತ್ ರೋಹಿದಾಸ್ ಅದ್ಭುತ ಗೋಲು ಬಾರಿಸಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದರು.

26ನೇ ನಿಮಿಷದಲ್ಲಿ ಭಾರತ ಎರಡನೇ ಗೋಲು ದಾಖಲಿಸಿತು. ಹಾರ್ದಿಕ್ ಸಿಂಗ್ ಅಮೋಘ ಗೋಲು ದಾಖಲಿಸಿದರು. ಇದು ಈ ವಿಶ್ವಕಪ್‌ನಲ್ಲಿ ಭಾರತದ ಮೊದಲ ಫೀಲ್ಡ್ ಗೋಲ್ ಆಗಿದೆ. ಇದಾದ ಬಳಿಕ ಭಾರತ ಯಾವುದೇ ಗೋಲು ಗಳಿಸಲಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ