15 ದಿನಗಳಿಂದ ಸುಧಾರಾಣಿ ಮನೆ ಶ್ವಾನ ನಾಪತ್ತೆ: ಬಿಬಿಎಂಪಿ ವಿರುದ್ಧ ನಟಿ ಗರಂ
ಕನ್ನಡ ಚಿತ್ರರಂಗದ (Kannada Film Industry) ಪ್ರತಿಭಾನ್ವಿತ ನಟಿ ಸುಧಾರಾಣಿ ಸಿನಿಮಾ ಬಿಟ್ಟು ಶ್ವಾನದ ವಿಚಾರವಾಗಿ ಇದೀಗ ಸುದ್ದಿಯಲ್ಲಿದ್ದಾರೆ. ತಮ್ಮ ಏರಿಯಾದ ಶ್ವಾನ ಗಂಗಮ್ಮ ಕಾಣಿಸುತ್ತಿಲ್ಲ ಎಂದು ಬೇಸರ ಹೊರಹಾಕೋದರ ಜೊತೆಗೆ ಬಿಬಿಎಂಪಿ (BBMP) ವಿರುದ್ಧ ನಟಿ ಸುಧಾರಾಣಿ (Actress Sudharani) ಗರಂ ಆಗಿದ್ದಾರೆ.
`ಆನಂದ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ನಟಿ ಸುಧಾರಾಣಿ ಬಳಿಕ ಸಾಕಷ್ಟು ಚಿತ್ರಗಳ ಮೂಲಕ ಗಮನ ಸೆಳೆದರು. ಪ್ರಸ್ತುತ ಕಿರುತೆರೆಯಲ್ಲಿ ʻಶ್ರೀರಸ್ತು ಶುಭಮಸ್ತುʼ ಸೀರಿಯಲ್ನಲ್ಲಿ ಪ್ರಮುಖ ಪಾತ್ರದ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ಇದರ ನಡುವೆ ತಮ್ಮ ಶ್ವಾನದ ಬಗ್ಗೆ ನಟಿ ಬೇಸರಹೊರಹಾಕಿದ್ದಾರೆ. ನಮ್ಮ ಏರಿಯಾದ ಶ್ವಾನ ಗಂಗಮ್ಮ (Pet Gangamma) ಸಿಕ್ಕರೆ ಮಾಹಿತಿ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ಅಳಲು ತೋಡಿಕೊಂಡಿದ್ದಾರೆ.
ಇನ್ನೂ ಬೆಂಗಳೂರಿನ ಮಲ್ಲೇಶ್ವರಂನಲ್ಲಿ (Malleshwaram) ವಾಸಿಸುತ್ತಿರುವ ನಟಿ ಸುಧಾರಾಣಿ ತಮ್ಮ ಮನೆಯಲ್ಲಿ ಎರಡು ಗೋಲ್ಡನ್ ರೆಟ್ರೀವರ್ ಶ್ವಾನಗಳನ್ನು ಸಾಕಿದ್ದಾರೆ. ಜೊತೆಗೆ ತಮ್ಮ ಏರಿಯಾದ ಶ್ವಾನ ಗಂಗಮ್ಮ ಮೇಲೂ ವಿಶೇಷ ಪ್ರೀತಿತಯಿದ್ದು, ಶ್ವಾನ 15 ದಿನಗಳಿಂದ ಕಾಣೆಯಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಬಿಬಿಎಂಪಿಗೆ ದೂರು ಕೊಟ್ಟರೂ ಕೂಡ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮಸ್ಕಾರ ನಿಮ್ಮೆಲ್ಲರಿಗೂ, ನಾನು ಹಲವಾರು ಬಾರಿ ಪೋಸ್ಟ್ ಹಾಕಿರುವೆ. ಸುಮಾರು 15 ದಿನಗಳಿಂದ ನಮ್ಮ ಶ್ವಾನ ಗಂಗಮ್ಮ ಕಾಣಿಸುತ್ತಿಲ್ಲ ಅಪ್ಪಿತಪ್ಪಿ ನಿಮ್ಮ ಏರಿಯಾದಲ್ಲಿ ಕಾಣಿಸಿಕೊಂಡರೆ ನನ್ನನ್ನು ಟ್ಯಾಗ್ ಮಾಡಿ ಒಂದು ಪೋಸ್ಟ್ ಹಾಕಿ. ದಯವಿಟ್ಟು ಇದು ನನ್ನ ಪರ್ಸನಲ್ ರಿಕ್ವೆಸ್ಟ್ ಏಕೆಂದರೆ ನಾವೆಲ್ಲರೂ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೀವಿ. ಗಂಗಮ್ಮ ಇಂಡೀ ಜಾತಿ (ಬೀದಿ) ನಾಯಿ ಆಗಿದ್ದು ಕಪ್ಪು- ಬಿಳಿ ಬಣ್ಣದಲ್ಲಿದೆ. ಆಕೆ ಮರುಳಿ ಮನೆಗೆ ಬರಬೇಕು. ಬಿಬಿಎಂಪಿಗೆ ನಾವು ಮನವಿ ಮಾಡಿಕೊಳ್ಳುತ್ತೀವಿ ಆಕೆಯನ್ನು ಹುಡುಕಿ ನಮಗೆ ಮಾಹಿತಿ ನೀಡಿ. ಗಂಗಮ್ಮನ ನಾವು ವಾಪಸ್ ಕಡೆದುಕೊಂಡು ಬರಬೇಕು’ ಎಂದು ಸುಧಾರಾಣಿ ಮನವಿ ಮಾಡಿದ್ದಾರೆ.
ಮನೆಯಲ್ಲಿ ಸಾಕುತ್ತಿರುವ ಎರಡು ಶ್ವಾನಗಳಿಗೆ ಮಿಕ್ಕಿ ಅಂಡ್ ಮಿನಿ ಎಂದು ಹೆಸರಿಟ್ಟಿದ್ದಾರೆ. ಮನೆಯಲ್ಲಿ ಮಗಳ ಜೊತೆ ಸೇರಿಕೊಂಡು ಮಿಕ್ಕಿ-ಮಿನಿ ಮಾಡುವ ತುಂಟಾಟಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ