ಸಿಎ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ರಮ್ಯಶ್ರೀ ದೇಶಕ್ಕೆ ದ್ವಿತೀಯ
Twitter
Facebook
LinkedIn
WhatsApp
ಮಂಗಳೂರು: ಅಖಿಲ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆಯು 2022ರ ನವೆಂಬರ್ನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಹೊಸಬೆಟ್ಟಿನ ರಮ್ಯಶ್ರೀ ಅವರು ದೇಶದಲ್ಲಿ ದ್ವಿತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.
ಎಲ್ಐಸಿ ಉದ್ಯೋಗಿ ರಮೇಶ್ ರಾವ್ ಮತ್ತು ನ್ಯಾಶನಲ್ ಇನ್ಸೂರೆನ್ಸ್ ಉದ್ಯೋಗಿ ಮೀರಾ ದಂಪತಿಯ ಪುತ್ರಿ. ಕಾಮತ್ ಆ್ಯಂಡ್ ರಾವ್ ಹಾಗೂ ಎಂ.ಆರ್. ಪಿ.ಎಲ್. ಸಂಸ್ಥೆಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.
ಸಿಎ ಇಂಟರ್ ಪರೀಕ್ಷೆಗೆ ತ್ರಿಶಾ ದಲ್ಲಿ ತರಬೇತಿ ಪಡೆದುಕೊಂಡಿದ್ದರು. ಅಂತಿಮ ಪರೀಕ್ಷೆಗೆ ಸ್ವಯಂ ಅಧ್ಯಯನ ನಡೆಸಿದ್ದರು.