ಉತ್ತರ ಪ್ರದೇಶದಲ್ಲೂ ದೆಹಲಿ ಮಾದರಿ ಅಪಘಾತ: ಸೈಕಲ್ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ಮೇಲೆ ಹರಿದ ಕಾರು
ಉತ್ತರ ಪ್ರದೇಶದಲ್ಲೂ ದೆಹಲಿ ಮಾದರಿಯಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಉತ್ತರಪ್ರದೇಶದ ಹರ್ದೋಯಿ ಜಿಲ್ಲೆ ಕೊತ್ವಾಲಿ ನಗರದಲ್ಲಿ ಸೈಕಲ್ನಲ್ಲಿ ತೆರಳುತ್ತಿದ್ದ ಅಪ್ರಾಪ್ತೆ ಮೇಲೆ ಕಾರು ಹರಿದಿದೆ. ಕಾರು ಚಾಲಕ ಅಪ್ರಾಪ್ತೆ ಕಾರಿನಡಿ ಸಿಲುಕಿರುವುದು ತಿಳಿದಿದ್ದರೂ ಕೆಲದೂರದವರೆಗೆ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಈ ಪರಿಣಾಮ ಚಕ್ರದಡಿ ಸಿಲುಕಿದ ಅಪ್ರಾಪ್ತೆಯನ್ನ ಕಾರು ಕೆಲದೂರ ಎಳೆದೊಯ್ದಿದೆ. ಅಪ್ರಾಪ್ತ ಬಾಲಕಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಜ.6ರ ಶುಕ್ರವಾರ ಸಂಜೆ ಕೊಚಿಂಗ್ ಕ್ಲಾಸ್ಗೆ ಹೋಗುತ್ತಿದ್ದ ವಿದ್ಯಾರ್ಥಿ ಮೇಲೆ ಕಾರು ಹಾರಿದಿದೆ. ಈ ವೇಳೆ ವಿದ್ಯಾರ್ಥಿ ಕಾರಿನಡಿ ಸಿಲುಕಿಕೊಂಡಿದ್ದು ಕಾರು ಚಾಲಕ ಸೈಕಲ್ಗೆ ಡಿಕ್ಕಿ ಹೊಡೆದು ಸುಮಾರು ದೂರ ವಿದ್ಯಾರ್ಥಿಯನ್ನು ಎಳೆದೊಯ್ದಿದ್ದಾನೆ.
ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯರು ಕಾರು ಚಾಲಕನಿಗೆ ಬೈದು ಕಾರಿನ ಹಿಂದೆ ಓಡಿದ್ದಾರೆ. ಕಾರು ನಿಂತ ಬಳಿಕ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಾರು ಚಾಲಕನನ್ನು ಥಳಿಸಿದ್ದಾರೆ. ಆಗ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.