ಉತ್ತರಾಖಂಡ್: ಉತ್ತರಾಖಂಡ್‌ನ ರೂರ್ಕಿಯಲ್ಲಿ ಹುಡುಗಿಯರ ಗುಂಪೊಂದು ಒಂದು ಹುಡುಗಿ ಮೇಲೆ ಅಟ್ಯಾಕ್ ಮಾಡಿದೆ. ಎಲ್ಲಾ ಹುಡುಗಿಯರು ಜೀನ್ಸ್‌ಧಾರಿಗಳಾಗಿದ್ದು, ಒಬ್ಬ ಹುಡುಗಿಯ ಮೇಲೆ ಎಲ್ಲರೂ ಸೇರಿ ದೊಣ್ಣೆಯಿಂದ ರಸ್ತೆಯಲ್ಲೇ ಹಲ್ಲೆ ಮಾಡುತ್ತಿದ್ದಾರೆ.
ಉತ್ತರಾಖಂಡ್‌ನ(Uttarakhand) ರೂರ್ಕಿಯಲ್ಲಿ (Roorkee) ನಡೆದ ಘಟನೆ ಇದು ಎನ್ನಲಾಗಿದ್ದು, ಸಣ್ಣದೊಂದು ವಿಚಾರಕ್ಕೆ ವಾದ ವಿವಾದವೇರ್ಪಟ್ಟು, ಅದು ವಿಕೋಪಕ್ಕೆ ಹೋಗಿದ್ದು, ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಯುವತಿಯನ್ನು ರಸ್ತೆಗೆ ತಳ್ಳಿದ ಹುಡುಗಿಯರ ಗುಂಪು ಆಕೆಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಇದೇ ವೇಳೆ ಆ ದಾರಿಯಲ್ಲಿ ಸಾಗುತ್ತಿದ್ದ ಕೆಲವರು ಜಗಳ ನಿಲ್ಲಿಸಿ ಇವರೆಲ್ಲರೂ ಶಾಲೆಗೆ ಹೋಗುವ ಹುಡುಗಿಯರು ಎಂದು ಹೇಳುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸುತ್ತಿದೆ. ಅಲ್ಲದೇ ಆ ವ್ಯಕ್ತಿ ಹುಡುಗಿಯರ ಜಗಳದ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸುವಂತೆ ಅಲ್ಲಿದ್ದ ಜನರಿಗೆ ಹೇಳುತ್ತಾನೆ. ಅಲ್ಲದೇ ಅನೇಕರು ಈ ಜಗಳ ನಿಲ್ಲಿಸಲು ಮುಂದಾಗಿ ಹುಡುಗಿಯರನ್ನು ಬೇರೆ ಬೇರೆ ಮಾಡಿ ಕಳುಹಿಸಲು ಪ್ರಯತ್ನಿಸುತ್ತಾರೆ.
ಆದರೆ ಈ ಘಟನೆ ಯಾವಾಗ ನಡೆದಿರುವುದು ಎಂಬ ಉಲ್ಲೇಖವಿಲ್ಲ. ವಿಜಯ್ ಪುಂಡಿರ್ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media)ಪೋಸ್ಟ್ ಮಾಡಿದ್ದು, ಸ್ಥಳೀಯ ಪೊಲೀಸರಿಗೆ ಈ ವಿಡಿಯೋ ವೈರಲ್ ಆಗುವವರೆಗೂ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಜಾಗರಣ್ ವರದಿ ಪ್ರಕಾರ, ಘಟನೆಯ ವಿಡಿಯೋ ಪೊಲೀಸರ ಕೈಗೆ ಸಿಕ್ಕಿದ್ದು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ದೇವೇಂದ್ರ ಚೌಹಾಣ್ (Devendra Chauhan) ಹೇಳಿದ್ದಾರೆ. ಇದಕ್ಕೂ ಮೊದಲು ಉತ್ತರಪ್ರದೇಶ (Uttar Pradesh) ಹಾಪುರ್‌ದಲ್ಲಿ (Hapur) ಇಂತಹದೇ ಒಂದು ಘಟನೆ ನಡೆದಿತ್ತು. ವಿದ್ಯಾರ್ಥಿನಿಯರು ಪರಸ್ಪರ ಹೊಡೆದಾಡಿಕೊಂಡಿದ್ದರು. ಪರಸ್ಪರ ಕೂದಲನ್ನು ಹಿಡಿದು ಎಳೆದಾಡಿಕೊಂಡ ಹುಡುಗಿಯರು ನಂತರ ಒಬ್ಬರಿಗೊಬ್ಬರು ಕೈಯಲ್ಲೇ ಥಳಿಸುತ್ತಾ ಹೊಡೆದಾಡಿಕೊಂಡಿದ್ದರು.
लड़कियों के बीच डंडों के साथ जमकर हुई मारपीट, वायरल वीडियो रुड़की का बताया जा रहा है।@haridwarpolice pic.twitter.com/xraOyDQQRb
— Vijay Pundir (@vip_pundir) December 25, 2022
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist