ಇದಲ್ಲದೆ, ಗೂಗಲ್ ರಿಸರ್ಚ್ ಕೈಬರಹದ ವೈದ್ಯಕೀಯ ಪ್ರಿಸ್ಕ್ರಿಪ್ಷನ್ಗಳನ್ನು ಡಿಜಿಟೈಜ್ ಮಾಡಲು ಸಹ ಕೆಲಸ ಮಾಡುತ್ತಿದೆ. ಈ ಕುರಿತು ಮಾತನಾಡಿದ ಗುಪ್ತಾ, ಔಷಧಿಕಾರರು ಪ್ರಿಸ್ಕ್ರಿಪ್ಷನ್ ಅನ್ನು ಅರ್ಥೈಸಿಕೊಳ್ಳುವಾಗ ಹಲವು ಅಂಶಗಳಿವೆ. ನಿಮ್ಮ ಕೈಬರಹ ಗುರುತಿಸುವುದು ಅಥವಾ ಒಸಿಆರ್ ಮಾದರಿಗಳ ನಿಖರತೆಯನ್ನು ಸುಧಾರಿಸಲು ಎಐ ಆ ರೀತಿಯ ಮಾಹಿತಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪತ್ತೆ ಮಾಡುತ್ತೇವೆ ಎಂದು ಮನೀಶ್ ಗುಪ್ತಾ ಹೇಳಿದ್ದಾರೆ.
ಇನ್ನು ಗೂಗಲ್ನಿಂದ ಬರುವ ಒಂದು ಮಿಲಿಯನ್ ಡಾಲರ್ನ ಹೊಸ ಅನುದಾನವನ್ನ ಸದ್ಬಳಕೆ ಮಾಡಿಕೊಳ್ಳಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT Madras) ಮದ್ರಾಸ್ ಮುಂದಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ಹಲವಾರು ಯೋಜನೆಗಳನ್ನು ಪ್ರಾರಂಭಿಸಲು ಯೋಜಿಸಿರುವುದಾಗಿ AI ಸೆಂಟರ್, ರಾಬರ್ಟ್ ಬಾಷ್ ಸೆಂಟರ್ ಫಾರ್ ಡಾಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (RBCDSAI) ಮುಖ್ಯಸ್ಥ ಬಿ ರವೀಂದ್ರನ್ ತಿಳಿಸಿದ್ದಾರೆ. ನಾವು ಯಾವುದೇ ಎಐ ಆಧಾರಿತ ವ್ಯವಸ್ಥೆಯ ನಿಖರತೆಯ ದರವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದೇವೆ ಎಂದು ರವೀಂದ್ರನ್ ವಿವರಿಸಿದ್ದಾರೆ.
ಐಐಟಿ ಮದ್ರಾಸ್ನಲ್ಲಿರುವ ಎಐ ಕೇಂದ್ರವು ಬಹು ಪಾಲುದಾರರೊಂದಿಗೆ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಗೂಗಲ್ ನಮ್ಮ ಮಧ್ಯಸ್ಥಗಾರರಲ್ಲಿ ಒಬ್ಬರು. ಮುಂದಿನ ಆರ್ಥಿಕ ವರ್ಷದಲ್ಲಿ, ಕಾನೂನು, ಹಣಕಾಸು ಮತ್ತು ಶಿಕ್ಷಣ ಸೇರಿದಂತೆ ವಿವಿಧ ವಿಭಾಗಗಳ ಇತರ ಉದ್ಯಮದ ವ್ಯಕ್ತಿಗಳೊಂದಿಗೆ ಪಾಲುದಾರರಾಗಲು ನಾವು ಯೋಜಿಸಿದ್ದೇವೆ ಎಂದು ರವೀಂದ್ರನ್ ತಿಳಿಸಿದ್ದಾರೆ. ಎಐ ಕೇಂದ್ರವು ಬ್ಯಾಂಕಿಂಗ್ ಮತ್ತು ಹಣಕಾಸು, ರಾಷ್ಟ್ರೀಯ ನೀತಿ ರಚನೆ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಸೇರಿಸುವ ಗುರಿಯನ್ನು ಹೊಂದಿದೆ. ಭಾರತದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ಎಐ ಒಳಗೊಳ್ಳಲು ನಾವು ಕಾರ್ಯಾಗಾರಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತೇವೆ ಎಂದು ರವೀಂದ್ರನ್ ಹೇಳಿದರು.
ಸಂಬಂಧಿತ ಕ್ಷೇತ್ರಗಳ ತಜ್ಞರ ಪಾಲ್ಗೊಳ್ಳುವಿಕೆಯೊಂದಿಗೆ ಬಹು ಸಂಶೋಧನಾ ಯೋಜನೆಗಳ ಮೂಲಕ ಉದ್ದೇಶಗಳನ್ನು ರೂಪಿಸಲಾಗುವುದು. ಸಂಶೋಧನಾ ಪಠ್ಯಕ್ರಮದ ಅಡಿಯಲ್ಲಿ ಕೋರ್ಸ್ವರ್ಕ್ ವಸ್ತುಗಳನ್ನು ಸಹ ಸಂಗ್ರಹಿಸಲಾಗುತ್ತದೆ. ಐಐಟಿ ಮದ್ರಾಸ್ನಲ್ಲಿರುವ ಜವಾಬ್ದಾರಿಯುತ ಎಐ ಕೇಂದ್ರವು ಫೆಬ್ರವರಿ, 2023ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist