![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ಬೆಂಗಳೂರು (ಡಿ.17): ಯಾದಗಿರಿ ಜಿಲ್ಲೆ, ಸುರಪುರ ತಾಲೂಕಿನ ಕಾಚಾಪುರ ಅನ್ನೋ ಗ್ರಾಮ ಅವತ್ತು ಮಟಮಟ ಮಧ್ಯಾಹ್ನ ಹತ್ತಿಯ ಹೊಲದಲ್ಲಿ ಜೋಡಿ ಹೆಣಗಳು ಬಿದ್ದಿದ್ದವು. ಮೃತ ಮಹಿಳೆ 30ರ ಆಸುಪಾಸಿನ ಬಸಮ್ಮ ಕಾಚಾಪುರ ನಿವಾಸಿ ಮಲ್ಲಣ್ಣ ಎಂಬುವವನ ಹೆಂಡತಿ. ಇನ್ನೊಂದು ಮೃತದೇಹ ಇದೇ ಕಾಚಾಪುರದ 180 ಎಕರೆ ಆಸ್ತಿ ಇರುವ ಆಗರ್ಭ ಶ್ರೀಮಂತ 36 ವರ್ಷದ ನಾಡಗೌಡನದ್ದಾಗಿದೆ.
ಈ ಭೀಕರ ಕೊಲೆಗೆ ಇದ್ದ ಕಾರಣ ಇವರಿಬ್ಬರ ಮಧ್ಯೆ ಇದ್ದ ಅಕ್ರಮ ಸಂಬಂಧ. ನಾಡಗೌಡ ಅನ್ನೋ ಕೋಟ್ಯಾಧಿಪತಿ ಜಮೀನ್ದಾರ. ಬಸಮ್ಮಳನ್ನ ಬುಟ್ಟಿಗೆ ಹಾಕ್ಕೊಂಡಿದ್ದ. ಹಲವು ವರ್ಷಗಳಿಂದ ಇವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಇದ್ದೇ ಇತ್ತು. ಆದರೆ, ಅಕ್ರಮ ಸಂಬಂಧವನ್ನು ಸಹಿಸಲಾರದೇ ಸಮಯಕ್ಕಾಗಿ ಕಾಯುತ್ತಿದ್ದ ಬಸಮ್ಮಳ ಗಂಡ ಇಬ್ಬರೂ ಏಕಾಂತದಲ್ಲಿ ಇರುವಾಗಲೇ ಸ್ಥಳಕ್ಕೆ ಹೋಗಿ ಕೊಲೆ ಮಾಡಿದ್ದಾನೆ.
ಬಸಮ್ಮ ಮತ್ತು ಮಲ್ಲಣ್ಣ ದಂಪತಿಗೆ 2 ಗಂಡು 1 ಹೆಣ್ಣು ಸೇರಿ ಒಟ್ಟು ಮೂರು ಮಕ್ಕಳಿದ್ದರು. ಹೀಗಾಗಿ, ಹೆಂಡತಿಯ ವಿಚಾರ ಗೊತ್ತಿದದರೂ ಯಾವುದೇ ಕಾರಣಕ್ಕೂ ಮಕ್ಕಳಿಗೆ ಗೊತ್ತಾಗಬಾರದು ಎನ್ನುವ ಕಾರಣಕ್ಕಾಗಿ ಮಲ್ಲಣ್ಣ ತನ್ನ ಹೆಂಡ್ತಿ ವಿಚಾರ ಗೊತ್ತಿಲ್ಲದಂತೇ ಇದ್ದುಬಿಟ್ಟಿದ್ದ. ತುಂಬಿದ ಊರಿನಲ್ಲಿ ಎಲ್ಲಿ ತನ್ನ ಮನೆ ಮಾನ ಮರ್ಯಾದೆ ಬೀದಿ ಪಾಲಾಗುತ್ತೋ ಅನ್ನೋ ಭಯ ಆತನಿಗಿತ್ತು. ಇದೇ ಕಾರಣಕ್ಕಾಗಿ ಎಲ್ಲಾ ಗೊತ್ತಿದ್ದೂ ಏನೂ ಗೊತ್ತಿಲ್ಲದಂತೆ ಇದ್ದುಬಿಟ್ಟಿದ್ದ. ಆದರೆ, ಯಾವಾಗ ಹೆಂಡ್ತಿ ಮಲ್ಲಮ್ಮಳ ಆಟ ಅತಿಯಾಯ್ತೋ, ಕದ್ದು ಮುಚ್ಚಿ ಹೊಲದ ಮಧ್ಯೆ, ಮೋಟಾರ್ ಮನೆ ಹೀಗೆ ಎಲ್ಲೆಂದ್ರಲ್ಲಿ ಮಲ್ಲಮ್ಮ ಮತ್ತು ನಾಡಗೌಡ ಕಣ್ಣಾ ಮುಚ್ಚಾಲೆ ಆಟವನ್ನ ಮುಂದುವರೆಸಿದರೋ ಆಗ ಮಲ್ಲಣ್ಣನ ಆಕ್ರೋಶ ಹೆಚ್ಚಾಗಿತ್ತು.
ಈ ಪ್ರೇಮಪಕ್ಷಿಗಳ ಆತುರವನ್ನ ಮಲ್ಲಣ್ಣನ ಅಣ್ಣ ಮಗ ಶಿವಣ್ಣ ಕಣ್ಣಾರೆ ನೋಡಿದ್ದಾನೆ. ತನ್ನ ಚಿಕ್ಕಮ್ಮ ನಾಡಗೌಡನನ್ನ ಭೇಟಿಯಾಗಲು ಹತ್ತಿಹೊಲದ ಹಾದಿಯಲ್ಲಿ ಹೊರಟಿದ್ದುದನ್ನು ಕಂಡು ಎಲ್ಲವನ್ನು ಮಲ್ಲಣ್ಣನಿಗೆ ಹೇಳಿದ್ದಾನೆ.
ಯಾವಾಗ, ತನ್ನಣ್ಣನ ಮಗ ಶಿವಣ್ಣ ಅಂಥದ್ದೊಂದು ಹೊಲಸು ಸಮಾಚಾರವನ್ನ ತಂದು ಮಲ್ಲಣ್ಣನ ಕಿವಿಯಲ್ಲಿ ಉಸುರಿದನೋ ಆಗ ಮಲ್ಲಣ್ಣನ ಆಕ್ರೋಶದ ಕಟ್ಟೆ ಒಡೆದಿತ್ತು. ಈ ವೇಳೆ ತನ್ನ ಸಂಬಂಧಿಕನಾದ ಬಸವರಾಜುನನ್ನೂ ಕರೆದುಕೊಂಡು ಕೈಯಲ್ಲಿ ಕುಡುಗೋಲು ಹಿಡಿದು ಹೊಲದತ್ತ ಹೊರಟನು. ಈ ವಿಷಯ ತಿಳಿಸಿದ್ದ ಶಿವಣ್ಣನೂ ಚಿಕ್ಕಪ್ಪನ ಜೊತೆಗೆ ಬಂದನು. ಹತ್ತಿ ಹೊಲದಲ್ಲಿ ಇಬ್ಬರ ಸರಸ ಸಲ್ಲಾಪ ಮುಂದುವರೆದ ಸ್ಥಳಕ್ಕೆ ಬಂದು ಕಾಮದಾಹ ತೀರಿಸಿಕೊಳ್ಳುತ್ತಿದ್ದ ಇಬ್ಬರನ್ನೂ ಕೊಡಲಿಯಿಂದ ಮಲ್ಲಣ್ಣ ಕತ್ತರಿಸಿದ್ದಾನೆ. ಕೆಲವೇ ನಿಮಿಷಗಳ ಹಿಂದೆ ಸುಖದ ಅಮಲಿನಲ್ಲಿ ತೇಲಾಡ್ತಿದ್ದ ಜೋಡಿ ನೆತ್ತರ ಓಕುಳಿಯಲ್ಲಿ ಮಿಂದು ಪ್ರಾಣಬಿಟ್ಟರು. ಹತ್ತಿಯ ಹೊಲ ಪ್ರೇಮಿಗಳ ನೆತ್ತರ ಕುಡಿದು ಕೆಂಪಾಗಿತ್ತು.
ಕೊಲೆ ಮಾಡಿದ ವಿಚಾರ ಊರಿಗೆ ಗೊತ್ತಾದ ನಂತರ ಓಡಿ ಹೋಗಿ ತಲೆ ಮರೆಸಿಕೊಳ್ಳುವ ಮರ್ಜಿಗೆ ಹೋಗದ ಮಲ್ಲಣ್ಣ ಕೆಂಬಾವಿ ಪೊಲೀಸರು ಹುಡುಕೋ ಮೊದಲೇ ಅವರ ಮುಂದೆ ಹಾಜಾರ್ ಆಗಿದ್ದನು. ಶವವನ್ನ ಪೋಸ್ಟ್ ಮಾರ್ಟಮ್ ಸಾಗಿಸಿದ ಬಳಿಕ, ಸ್ಥಳಕ್ಕೆ ಖುದ್ದು ಎಸ್ಪಿ ಸಿಬಿ ವೇದಮೂರ್ತಿ ಘಟನೆ ನಡೆದ ಜಾಗಕ್ಕೆ ಬಂದು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದರು. ಆರೋಪಿಗಳಾದ ಮಲ್ಲಣ್ಣ, ಶಿವಣ್ಣ ಮತ್ತು ಈ ಬಸವರಾಜು ಅನ್ನೋ ಮೂರೂ ಮಂದಿ ಕೆಂಬಾವಿ ಸ್ಟೇಷನ್ ಜೈಲಿನಲ್ಲಿದ್ದರು.
ಸುಮಾರು 180 ಎಕರೆ ಆಸ್ತಿ ಇದ್ದ ಈ ನಾಡಗೌಡನ ಕಡೆಯವರು ಈ ಕೊಲೆಯಲ್ಲಿ ಬೇರೆ ಏನೋ ರೀಸನ್ ಇದೆ ಅನ್ನೋ ಆರೊಪ ಮಾಡಿದ್ದಾರೆ. ಆದರೆ, ಅಕ್ರಮ ಸಂಬಂಧ, ಹೊಲದಲ್ಲಿ ಬೇಟಿ, ಕಳ್ಳತನದ ಹೆಜ್ಜೆಗಳು, ಮಲ್ಲಮ್ಮಳ ಗಂಡನ ಕೈಗೆ ಸಿಕ್ಕಿಹಾಕಿಕೊಂಡಿದ್ದು ಇದೆಲ್ಲಾ ಬರೀ ಸುಳ್ಳು ಅಂತಿದ್ದಾರೆ. ಆದರೆ, ಬೇರೆ ದುರುದ್ದೇಶ ಮುಚ್ಚಿಟ್ಟು ಅಕ್ರಮ ಸಂಬಂಧದ ಕಾರಣ ಹೇಳಿ ಕೊಲೆ ಮಾಡಿದ್ದಾರೆ ಅಂತಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist