ಕನ್ನಡದ ಲಕ್ಕಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬ್ಯಾನ್ ಬಗ್ಗೆ ನಟರಾಕ್ಷಸ ಡಾಲಿ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ರಶ್ಮಿಕಾ ಕನ್ನಡದ ಹುಡುಗಿ, ಯಾಕೆ ಬ್ಯಾನ್ ಮಾಡಬೇಕು ಎಂದು ನಟ ಧನಂಜಯ್ (Actor Dhananjay) ಪ್ರಶ್ನಿಸಿದ್ದಾರೆ.
ಕಿರಿಕ್ ಬ್ಯೂಟಿ ರಶ್ಮಿಕಾ ಸದ್ಯ ಸೌತ್ ಮತ್ತು ಬಾಲಿವುಡ್‌ನಲ್ಲಿ ಬೆಳಗುತ್ತಿರುವ ನಟಿ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಚೊಚ್ಚಲ ಚಿತ್ರದ ನಿರ್ಮಾಣ ಸಂಸ್ಥೆಯ ಹೆಸರನ್ನ ರಶ್ಮಿಕಾ ಹೇಳಿಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ರಶ್ಮಿಕಾರನ್ನ ಕನ್ನಡ ಚಿತ್ರರಂಗದಲ್ಲಿ ಬ್ಯಾನ್ ಮಾಡಲೇಬೇಕು ಎಂಬ ಕೂಗು ಕೇಳಿ ಬಂದಿತ್ತು. ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬ್ಯಾನ್ (Ban) ಎಂಬ ಅಭಿಯಾನ ಕೂಡ ಆಗಿತ್ತು. ಇದೀಗ ಈ ಬಗ್ಗೆ ಸಂದರ್ಶನವೊಂದರಲ್ಲಿ ಡಾಲಿಗೆ (Dali) ಪ್ರಶ್ನೆ ಎದುರಾಗಿದೆ.
ಚಿತ್ರರಂಗದಲ್ಲಿ ಎಲ್ಲರಿಗೂ ಅವರದ್ದೇ ಆದ ಬದುಕಿದೆ. ಸಿನಿಮಾರಂಗ ಎಲ್ಲರಿಗೂ ಓಪನ್ ಆಗಿದೆ. ಯಾರು ಯಾರನ್ನು ಇಲ್ಲಿ ಬರಬೇಡಿ ಎಂದು ಹೇಳೋದಕ್ಕೆ ಆಗಲ್ಲ. ಸಣ್ಣ ಪುಟ್ಟ ತಪ್ಪಾಯ್ತು ಅಂದಾಕ್ಷಣ ಮನೆ ಮಕ್ಕಳನ್ನ ಮನೆಯಿಂದ ಹೊರಗೆ ಹಾಕ್ತೀರಾ? ಇಲ್ಲಾವಲ್ಲಾ, ಆ ಜೀವನೂ ಅಷ್ಟೇ ಅವರು ಎಲ್ಲಿದ್ದರೂ ಕೂಡ ಕನ್ನಡದ ಹುಡುಗಿನೇ ಎಂದು ರಶ್ಮಿಕಾ ಪರ ಧನಂಜಯ್ ಖಡಕ್ ಉತ್ತರ ನೀಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಬೆಳೆದಿರುವ ಬಗ್ಗೆ ಡಾಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಪ್ಯಾನ್ ಇಂಡಿಯಾ ಸಿನಿಮಾ `ಪುಷ್ಪ’ (Pushpa) ಚಿತ್ರದಲ್ಲಿ ಡಾಲಿ, ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಜೊತೆ ನಟಿಸಿದ್ದರು. ಇದೀಗ `ಪುಷ್ಪ 2’ನಲ್ಲೂ ಡಾಲಿ ಇರಲಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist