ಸೋಮವಾರ, ಮೇ 6, 2024
ಶೀಘ್ರದಲ್ಲೇ SSLC ಪಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ.!-ಮೇ 7 ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮನ..?-ಮದುವೆಗೆ ತೆರಳಿದ್ದ 5 ಮಂದಿ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್ ನಲ್ಲಿ ಮುಳುಗಿ ಸಾವು!-ಚಾಲಕ ನಿಯಂತ್ರಣ ತಪ್ಪಿ 5 ವಿದಾರ್ಥಿಗಳ ದುರಂತ ಅಂತ್ಯ..!-ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ಆದೇಶ.!-ಮೂಡಬಿದರೆ: ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪದವಿ ಪೂರ್ವ ವಿದ್ಯಾರ್ಥಿನಿ ಆತ್ಮಹತ್ಯೆ..!-ಸೇಡಂ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ ನಾಗರೆಡ್ಡಿ ಪಾಟೀಲ್ ನಿಧನ..!-Rain Alert : ನಾಳೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೇ 12ರವರೆಗೆ ಮಳೆ ನಿರೀಕ್ಷೆ..!-ಅಮೇಥಿಯಲ್ಲಿರುವ ಕಾಂಗ್ರೆಸ್​ ಕಚೇರಿ ಮೇಲೆ ದುಷ್ಕರ್ಮಿಗಳಿಂದ ದಾಳಿ; ಕಾರುಗಳು ಧ್ವಂಸ..!-ಬಂಟ್ವಾಳ: ನೇತ್ರಾವತಿ ನದಿ ನೀರಿನಲ್ಲಿ ಆಟವಾಡಲು ಇಳಿದ ಇಬ್ಬರು ಬಾಲಕಿಯರು ನೀರುಪಾಲು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹೊಸ ಆಲೋಚನೆಯ ಅಭಿವೃದ್ಧಿ ಚಿಂತನೆಯ 'ಸಮೃದ್ಧ ಕೊಡಗು' ಪರಿಕಲ್ಪನೆಯ ಮೂಲಕ ಕೊಡಗಿನಲ್ಲಿ ಗಮನ ಸೆಳೆಯುತ್ತಿರುವ ಡಾ. ಮಂತರ್ ಗೌಡ

Twitter
Facebook
LinkedIn
WhatsApp
ಹೊಸ ಆಲೋಚನೆಯ ಅಭಿವೃದ್ಧಿ ಚಿಂತನೆಯ ‘ಸಮೃದ್ಧ ಕೊಡಗು’ ಪರಿಕಲ್ಪನೆಯ ಮೂಲಕ ಕೊಡಗಿನಲ್ಲಿ ಗಮನ ಸೆಳೆಯುತ್ತಿರುವ ಡಾ. ಮಂತರ್ ಗೌಡ

ಮಡಿಕೇರಿ: ಕೊಡಗಿನ ಯುವನಾಯಕ ಡಾ. ಮಂತರ್ ಗೌಡ ಕೊಡಗು ಮಾತ್ರವಲ್ಲದೆ ರಾಜ್ಯಾದ್ಯಂತ ಗಮನ ಸೆಳೆಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ಆಧುನಿಕ ಅಭಿವೃದ್ಧಿ ಚಿಂತನೆಯ ‘ಸಮೃದ್ಧ ಕೊಡಗು’ ಎಂಬ ಪರಿಕಲ್ಪನೆ.

ಸಮೃದ್ಧ ಕೊಡಗು ಎಂಬ ಪರಿಕಲ್ಪನೆಯ ಮೂಲಕ ಆಧುನಿಕ ಅಭಿವೃದ್ಧಿ ಚಿಂತನೆಗಳ ಬಗ್ಗೆ ಜನರೊಂದಿಗೆ ಮಾತನಾಡುತ್ತಿರುವ
ಯುವನಾಯಕ ಡಾ. ಮಂತರ್ ಗೌಡ ಜನರ ಗಮನ ಸೆಳೆಯುತ್ತಿದ್ದಾರೆ.

ಕಳೆದ ವಿಧಾನಪರಿಷತ್ತು ಚುನಾವಣೆಯಲ್ಲಿ ಬಹಳಷ್ಟು ಸಂಚಲನ ಸೃಷ್ಟಿ ಮಾಡಿದ್ದ, ಮಂತರ್ ಗೌಡ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದರು.


ಆದರೆ ನಿರಂತರ ಕೊಡಗಿನ ಜನರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದ ಮಂತರ್ ಗೌಡ ತನ್ನ ಹೊಸ ಆಲೋಚನೆಯ ಅಭಿವೃದ್ಧಿ ಚಿಂತನೆಯಿಂದ ಕೊಡಗಿನಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ತನ್ನ ಜ್ಞಾನ ಹಾಗೂ ತಿಳುವಳಿಕೆಯಿಂದ ಹೊಸ ಯೋಜನೆಗಳ ಬಗ್ಗೆ ಮಾತನಾಡುತ್ತಿರುವ ಮಂತರ್ ಗೌಡ ಈ ಚುನಾವಣೆಯಲ್ಲಿ ಬಹುದೊಡ್ಡ ಆರಂಭವನ್ನು ಕೊಡಗಿನಲ್ಲಿ ಘೋಷಿಸಿದ್ದಾರೆ.


ಅವರ ಮಾತುಗಳು ಬಹಳಷ್ಟು ಜನರಿಗೆ ಹತ್ತಿರವಾಗುತ್ತಿದೆ. ಜೊತೆಯಾಗಿ ಅಭಿವೃದ್ಧಿಯಲ್ಲಿ ಸಾಗುವ ಎಂಬ ಹೇಳಿಕೆಗಳು ಜನರನ್ನ ಆಕರ್ಷಿಸುತ್ತಿದೆ. ಮಂತರ್ ಗೌಡ ಅವರ ಟ್ವೀಟ್ಗಳು ಅವರ ಹೊಸ ಆಲೋಚನೆ ಯ ಪರಿಕಲ್ಪನೆಯನ್ನು ತೆರೆದಿಡುತ್ತಿವೆ.

ಕೆಲವೇ ತಿಂಗಳುಗಳಲ್ಲಿ ಮಂತರ್ ಗೌಡ ಕೊಡಗಿನ ಮನೆ ಮನೆಗಳಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿದ್ದು, ಅವರ ಯೋಚನೆ ಯೋಜನೆಗಳಿಗೆ ಜನರು ಜೊತೆ ನೀಡುತ್ತಿದ್ದು ಕುತೂಹಲ ಕೆರಳಿಸಿದೆ. ಚುನಾವಣೆ ಹಾಗೂ ರಾಜಕೀಯಕ್ಕೆ ನಾನು ಜನಸೇವೆಗೆ ಬಂದಿಲ್ಲ ಎಂಬ ಅವರ ಮಾತು ಜನರಲ್ಲಿ ಅವರ ಬಗೆಗಿನ ವಿಶ್ವಾಸವನ್ನು ಇನ್ನಷ್ಟು ಹೆಚ್ಚು ಮಾಡಿದೆ.


ಕೊಡಗಿನ ಹಾಗು ರಾಜ್ಯದ ರಾಜಕೀಯದಲ್ಲಿ ಮಂತರ್ ಗೌಡ ಗಮನ ಸೆಳೆಯುತ್ತಿದ್ದಾರೆ. ರಸ್ತೆ, ಆರೋಗ್ಯ, ಶಿಕ್ಷಣ, ಉದ್ಯೋಗ ಈ ರೀತಿಯಾಗಿ ಕೊಡಗಿನ ಪ್ರತಿಯೊಂದು ಕ್ಷೇತ್ರದ ಬಗ್ಗೆ ಆಳವಾದ ತಿಳುವಳಿಕೆ ಹೊಂದಿ, ಹೊಸ ಯೋಚನೆ,ಯೋಜನೆಗಳನ್ನುಗಳನ್ನು ಹೆಣೆಯುತ್ತಿರುವ ಡಾ. ಮಂತರ್ ಗೌಡ ಕೊಡಗಿನ ಜನರ ಪ್ರೀತಿಗೆ ಪಾತ್ರವಾಗುತ್ತಿದ್ದಾರೆ.

ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ