ರಾಂಚಿ: ಜಾರ್ಖಂಡ್‌ನ (Jharkhand) ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಪೊಲೀಸ್ ತಂಡ 2019 ರಲ್ಲಿ ಜಿಲ್ಲೆಯಲ್ಲಿ ದಾಖಲಾದ ಅತ್ಯಾಚಾರ (Rape) ಮತ್ತು ಪೋಕ್ಸೊ (Pocso) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ನೆರೆಯ ರಾಜ್ಯಗಳಿಗೆ ತೆರಳಿದೆ.
2019 ರಲ್ಲಿ ದಾಖಲಾದ 15 ವರ್ಷದ ಬಾಲಕಿ (Minor girl) ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ವರದಿಗಳ ಪ್ರಕಾರ ಸಂತ್ರಸ್ತ ಬಾಲಕಿ 2-3 ವರ್ಷದ ವರೆಗೆ ನಿರಂತರವಾಗಿ 3-4 ರಾಜ್ಯಗಳಿಗೆ ಕಳ್ಳಸಾಗಣೆಗೆ ಒಳಗಾಗಿದ್ದು, ಹಲವು ಸ್ಥಳಗಳಲ್ಲಿ ಆಕೆಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಆರೋಪಿಗಳಲ್ಲಿ ಒಬ್ಬ ರಾಜಕೀಯ ನಾಯಕನೂ ಸೇರಿದ್ದಾನೆ ಎನ್ನಲಾಗಿದೆ.
ರಾಜಕೀಯ ನಾಯಕನಾಗಿರುವ ಆರೋಪಿಯನ್ನು ಬಂಧಿಸಲು ಪೊಲೀಸರು ನೆರೆಯ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆತ ಪ್ರತಿ ಬಾರಿಯೂ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದು, ಅವನ ಹುಡುಕಾಟಕ್ಕಾಗಿ ಇತರ ರಾಜ್ಯಗಳಿಗೆ ತೆರಳುತ್ತಿರುವುದು ಇದು 5ನೇ ಬಾರಿ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಬಾಲಕಿ ಮೇಲೆ ಜಾರ್ಖಂಡ್, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಪೂರ್ವ ಸಿಂಗ್‌ಭೂಮ್ ಜಿಲ್ಲೆಗಳಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಬಾಲಕಿ ಡೈರಿಯೊಂದನ್ನು ಬರೆಯುತ್ತಿದ್ದು, ಅದರಲ್ಲಿ ಆಕೆ ಕೆಲ ಆರೋಪಿಗಳ ಹೆಸರು ಹಾಗೂ ಸಂಖ್ಯೆಗಳನ್ನು ಬರೆದಿದ್ದಾಳೆ. ಈ ಡೈರಿ ಮೂಲಕ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಪಡೆದಿದ್ದಾರೆ.
2019ರಲ್ಲಿ ಸಿಂಗ್‌ಭೂಮ್‌ನ ಹೋಟೆಲ್ ಮಾಲೀಕರಿಂದ ಮಾಹಿತಿ ಪಡೆದ ಬಳಿಕ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಲು ಛತ್ತೀಸ್‌ಗಢಕ್ಕೆ ತೆರಳಿರುವುದು ಮೊದಲೇನಲ್ಲ. 10 ಆರೋಪಿಗಳ ಪೈಕಿ ಐವರನ್ನು ಈಗಾಗಲೇ ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ರಾಜಕೀಯ ಪಕ್ಷದ ನಾಯಕ ಸೇರಿದಂತೆ ಇನ್ನುಳಿದ ಐವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಖಲೆಗಳ ಪ್ರಕಾರ, 2013 ರಲ್ಲಿ ಬಾಲಕಿ ಮೇಲೆ ಮೊದಲ ಬಾರಿಗೆ ತನ್ನ ಸಂಬಂಧಿಕನಿಂದಲೇ ಅತ್ಯಾಚಾರ ನಡೆದಿದೆ. ಬಳಿಕ ಆಕೆಯ ಸಂಬಂಧಿಕರು ಆಕೆಯನ್ನು ಪೂರ್ವ ಸಿಂಗ್‌ಭೂಮ್‌ನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಸಿದರು. ಅಲ್ಲಿ ಇನ್ನೊಬ್ಬ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ಆಕೆಯನ್ನು ರೈಲಿನಲ್ಲಿ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ಕರೆದೊಯ್ದು ಫ್ಲಾಟ್‌ನಲ್ಲಿ ಇರಿಸಲಾಗಿತ್ತು. ಅಲ್ಲಿ ಆಕೆಯ ಮೇಲೆ 8 ಜನರು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist