ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಮಹಿಳಾ ಶೌಚಾಲಯಕ್ಕೆ ಒಳನುಗ್ಗಿ ರಹಸ್ಯವಾಗಿ ವಿದ್ಯಾರ್ಥಿನಿಯರ ಖಾಸಗಿ ದೃಶ್ಯ ಚಿತ್ರೀಕರಿಸುತ್ತಿದ್ದ ಯುವಕ ಕೊನೆಗೂ ಗಿರಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆತನ ಮೊಬೈಲ್ ಪರಿಶೀಲಿಸಿದಾಗ 1,200ಕ್ಕೂ ಹೆಚ್ಚು ಯುವತಿಯರ ಖಾಸಗಿ ದೃಶ್ಯವಿರುವ ಫೋಟೋ, ವಿಡಿಯೋ ಪತ್ತೆಯಾಗಿದೆ.
ದ್ವಾರಕಾನಗರದ ನಿವಾಸಿ ಉತ್ತರ ಭಾರತ ಮೂಲದ ಶುಭಂ ಆಜಾದ್(21) ಬಂಧಿತ. ಹೊಸಕೆರೆಹಳ್ಳಿಯ ಖಾಸಗಿ ಕಾಲೇಜೊಂದರಲ್ಲಿ 5ನೇ ಸೆಮಿಸ್ಟರ್ ಬಿಬಿಎ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದ.
ಆರೋಪಿಯು ಕಾಲೇಜಿನ ಒಂದು ಮಹಿಳಾ ಶೌಚಾಲಯದಲ್ಲಿ ಅವಿತುಕೊಳ್ಳುತ್ತಿದ್ದ. ಶೌಚಕ್ಕಾಗಿ ವಿದ್ಯಾರ್ಥಿನಿಯರು ಬರುವ ವೇಳೆ ತಾನು ಅವಿತು ಕುಳಿತ ಪಕ್ಕದ ಶೌಚಾಲಯದ ಮೇಲೆ ಹತ್ತಿ ವಿದ್ಯಾರ್ಥಿನಿಯರ ಗಮನಕ್ಕೆ ಬಾರದಂತೆ ತನ್ನ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದ. ನ.13ರಂದು ಸಂಜೆ ಇಬ್ಬರು ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋದ ವೇಳೆ 2 ಶೌಚಾಲಯಗಳೂ ಒಳಗಿನಿಂದ ಲಾಕ್ ಆಗಿದ್ದವು. ಹೀಗಾಗಿ ಇವರು ಕಾಯುತ್ತಿದ್ದಾಗ, ಆರೋಪಿಯು ಶೌಚಗೃಹದ ಮೇಲಿಂದ ಮೊಬೈಲ್‌ನಲ್ಲಿ ರಹಸ್ಯವಾಗಿ ವಿಡಿಯೋ ಸೆರೆಹಿಡಿಯುವುದನ್ನು ಗಮನಿಸಿ ಹೌಹಾರಿದ್ದರು.
ಇದನ್ನು ಕಂಡ ಆರೋಪಿಯು ಆತಂಕದಿಂದ ಶೌಚಾಲಯದ ಒಳಗೆ ಕುಳಿತುಕೊಂಡು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇಬ್ಬರು ಯುವತಿಯರೂ ಜೋರಾಗಿ ಬಾಗಿಲು ಬಡಿದಾಗ ಬೇರೆ ದಾರಿ ಕಾಣದೇ ಬಾಗಿಲು ತೆಗೆದು ಹೊರಗೆ ಓಡಿ ಹೋಗಿದ್ದ. ವಿದ್ಯಾರ್ಥಿನಿಯರು ಮೇಲಧಿಕಾರಿಗಳಿಗೆ ಈ ವಿಚಾರ ತಿಳಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯು ಮಹಿಳಾ ಶೌಚಾಲಯದ ಬಳಿ ಇರುವ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಯ ಭಾವ ಚಿತ್ರ ಕಂಡು ಬಂದಿತ್ತು. ಈ ಭಾವಚಿತ್ರವನ್ನು ಕೂಡಲೇ ಕಾಲೇಜಿನ ಎಲ್ಲ ವಿಭಾಗಕ್ಕೂ ಕಳುಹಿಸಿ ಗುರುತಿಸುವಂತೆ ತಿಳಿಸಿದಾಗ ಬಿಬಿಎ ವಿಭಾಗದ ಮುಖ್ಯಸ್ಥರು ಆರೋಪಿ ಶುಭಂ ಆಜಾದ್‌ನ ವಿವರವನ್ನು ಕಾಲೇಜಿನ ಆಡಳಿತ ಮಂಡಳಿಯ ಅಧಿಕಾರಿಗಳಿಗೆ ನೀಡಿದ್ದರು. ಕೂಡಲೇ ಶುಭಂನನ್ನು ಕರೆದು ವಿಚಾರಣೆ ಮಾಡಿದಾಗ ಆತ ಸತ್ಯ ಬಾಯ್ಬಿಟ್ಟಿ ದ್ದಾನೆ. ವಿದ್ಯಾರ್ಥಿನಿಯರು ಶೌಚಾಲಯ ದೊಳಗೆ ಬಂದು ಬಟ್ಟೆ ತೆಗೆಯುವ ಸಂದರ್ಭದಲ್ಲಿ ವಿಡಿಯೋ ಮಾಡಿಕೊಂಡಿರುತ್ತೇನೆ. ಇದೇ ರೀತಿ 1,200 ವಿಡಿಯೋಗಳು ನನ್ನ ಮೊಬೈಲ್ ನಲ್ಲಿವೆ ಎಂದು ಹೇಳಿದ್ದ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist