ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Classmates Marriage: 35 ವರ್ಷದ ಬಳಿಕ ಸಹಪಾಠಿಗಳಿಗೆ ಮದುವೆ ಮಾಡಿಸಿದ ಸ್ನೇಹಿತರು: ಅಪರೂಪದ ಪ್ರಸಂಗ

Twitter
Facebook
LinkedIn
WhatsApp
Classmates Marriage: 35 ವರ್ಷದ ಬಳಿಕ ಸಹಪಾಠಿಗಳಿಗೆ ಮದುವೆ ಮಾಡಿಸಿದ ಸ್ನೇಹಿತರು: ಅಪರೂಪದ ಪ್ರಸಂಗ

ಮಾಮೂಲಿ ಪ್ರೇಮ ಕಥೆಯಾಗಿದ್ದರೆ ಅವರ ಮದುವೆ ಅಷ್ಟೇನು ಗಮನ ಸೆಳೆಯುತ್ತಿರಲಿಲ್ಲ. ಅವರಿಬ್ಬರ ಮದುವೆಯ ಪ್ರಸ್ತಾಪ ಮಾಡಿದ್ದು ಅವರ ಮಾಜಿ ಸಹಪಾಠಿಗಳು ಎನ್ನುವುದು ವಿಶೇಷ.

ಮರಾಠಂಕೂಡು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್, ಈ ಇಬ್ಬರು ಮಾಜಿ ಸಹಪಾಠಿಗಳನ್ನು ಬೆಸೆದಿದೆ. ಮೂರು ವರ್ಷಗಳ ಹಿಂದೆ, ಹಳೆಯ ವಿದ್ಯಾರ್ಥಿಗಳು ವಾಟ್ಸಾಪ್ ಗ್ರೂಪ್ ಮೂಲಕ ಮತ್ತೆ ಜತೆಗೂಡಿದ್ದರು. ಅವರಲ್ಲಿ ಹರಿದಾಸನ್ ಮತ್ತು ಸುಮತಿ ಇಬ್ಬರೂ ಮದುವೆಯಾಗದೆ ಉಳಿದಿರುವುದು ಮತ್ತು ಒಂಟಿ ಜೀವನ ನಡೆಸುತ್ತಿರುವುದು ಅವರ ಗಮನಕ್ಕೆ ಬಂದಿತ್ತು.

ಕೆಲವು ತಿಂಗಳ ಹಿಂದೆ ಅವರ ಮಾಜಿ ಸಹಪಾಠಿ ಸತೀಶನ್, ಒಬ್ಬರೂ ಜತೆಗೂಡಿ ಹೊಸ ಜೀವನ ಆರಂಭಿಸಬಹುದು ಎಂಬ ಆಲೋಚನೆ ಮುಂದಿಟ್ಟಿದ್ದರು. ಇದಕ್ಕೆ ಅವರ ಸ್ನೇಹಿತರಿಂದ ಬೆಂಬಲ ವ್ಯಕ್ತವಾಗಿತ್ತು. ಆದರೆ, ಮದುವೆ ಬಗ್ಗೆ ಯೋಚನೆಯೇ ಇಲ್ಲ ಎಂದು ಅವರಿಬ್ಬರೂ ಅದನ್ನು ನಿರಾಕರಿಸಿದ್ದರು. ಅಷ್ಟಾದರೂ ಸ್ನೇಹಿತರು ಪಟ್ಟುಬಿಡಲಿಲ್ಲ. ತಾವೆಲ್ಲ ಮದುವೆಯಾಗಿ ಸಂಸಾರ ಜಂಜಾಟದಲ್ಲಿ ಹೆಣಗಾಡುತ್ತಿರುವಾಗ, ವಯಸ್ಸು ಮೀರುತ್ತಿದ್ದರೂ ಮದುವೆಯಾಗದೆ ಇವರಿಬ್ಬರು ಆರಾಮಾಗಿ ಇದ್ದಾರಲ್ಲ ಎಂಬ ಹೊಟ್ಟೆಕಿಚ್ಚು ಕೂಡ ಇದಕ್ಕೆ ಕಾರಣ ಇರಬಹುದು!

ಅದೇನೇ ಇದ್ದರೂ ಮಾಜಿ ಗೆಳೆಯರ ಒತ್ತಾಸೆ ಮೇರೆಗೆ ಅವರಿಬ್ಬರೂ ಕುನ್ನಬರುಕಾವು ದೇವಿ ದೇವಸ್ಥಾನದಲ್ಲಿ ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಸುಮಾರು 250 ಮಂದಿ ಉಪಸ್ಥಿತರಿದ್ದರು. ಇದು ಅವರ ಸ್ನೇಹಿತರ ಬಳಗಕ್ಕೆ ಕನಸೊಂದು ನನಸಾದ ಸಂಭ್ರಮದ ಕ್ಷಣವಾಗಿತ್ತು.

“ಇದನ್ನು ನಿರೀಕ್ಷಿಸಿರಲಿಲ್ಲ. ನಾವು ಜತೆಯಾಗಿ ಓದಿದ್ದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಹೀಗಾಗಿ ಮದುವೆಯಾಗಲು ಒಪ್ಪಿಕೊಂಡಿದ್ದೆವು. ರಾಜಕೀಯ ಮತ್ತು ವೈಯಕ್ತಿಕ ಜೀವನ ಎರಡೂ ವಿಭಿನ್ನ. ಅವರೆಡನ್ನೂ ನಾನು ಬೆರೆಸುವುದಿಲ್ಲ” ಎಂದು ಸುಮತಿ ಹೇಳಿದ್ದಾರೆ.

“ನಾನು ಎಂದಿಗೂ ಮದುವೆ ಬಗ್ಗೆ ಆಲೋಚಿಸಿಯೇ ಇರಲಿಲ್ಲ. ಆದರೆ ಒಂಟಿಯಾಗಿ ಜೀವನ ನಡೆಸುತ್ತಿರುವುದರ ಬಗ್ಗೆ ನನಗೆ ಬೇಸರವಿತ್ತು. ಈಗ ಸ್ನೇಹಿತರು ಮತ್ತು ಕುಟುಂಬದವರ ಸಹಾಯದಿಂದ ಸಂಗಾತಿ ದೊರೆತಿದ್ದಾಳೆ” ಎಂದು ಹರಿದಾಸನ್ ಸಂತಸ ವ್ಯಕ್ತಪಡಿಸಿದ್ದಾರೆ. ಹರಿದಾಸನ್ ಬಲಪಂಥೀಯ ನಿಲುವು ಹೊಂದಿದ್ದರೆ, ಸುಮತಿ ಎಡಪಂಥೀಯ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದವರಾಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ