ಶನಿವಾರ, ಮೇ 18, 2024
Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

9 ವರ್ಷಗಳ ಹಿಂದೆ ಕಿಡ್ನ್ಯಾಪ್‌ ಆಗಿದ್ದ ಬಾಲಕಿ ಪೋಸ್ಟರ್ ಸಹಾಯದಿಂದ ಹೆತ್ತವರ ಮಡಿಲಿಗೆ

Twitter
Facebook
LinkedIn
WhatsApp
9 ವರ್ಷಗಳ ಹಿಂದೆ ಕಿಡ್ನ್ಯಾಪ್‌ ಆಗಿದ್ದ ಬಾಲಕಿ ಪೋಸ್ಟರ್ ಸಹಾಯದಿಂದ ಹೆತ್ತವರ ಮಡಿಲಿಗೆ

ಮುಂಬೈ: ಕಾಣೆಯಾಗಿದ್ದಾರೆ ಎನ್ನುವ 2013ರ ಡಿಜಿಟಲ್ ಪೋಸ್ಟರ್‌ನ ನಕಲು ಪ್ರತಿಯೊಂದು 9 ವರ್ಷಗಳ ಹಿಂದೆ ಕಿಡ್ನ್ಯಾಪ್‌ ಆಗಿದ್ದ ಅಪ್ರಾಪ್ತೆ ಮತ್ತೆ ತನ್ನ ಕುಟುಂಬದೊಂದಿಗೆ ಸೇರಲು ಸಹಾಯ ಮಾಡಿದೆ.

2013ರಲ್ಲಿ ಪ್ರಕಟಿಸಿದ್ದ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್ ಸಹಾಯದಿಂದ ತನ್ನವರನ್ನು ಸಂಪರ್ಕಿಸಿದ ಬಾಲಕಿ 9 ವರ್ಷಗಳ ನಂತರ ತನ್ನ ಕುಟುಂಬದೊಂದಿಗೆ ಸೇರಿಕೊಂಡಿದ್ದಾಳೆ.

ಮುಂಬೈನ ಅಂಧೇರಿಯಲ್ಲಿ ಪೋಷಕರೊಂದಿಗೆ ವಾಸವಿದ್ದ 7 ವರ್ಷದ ಬಾಲಕಿ ಪೂಜಾ 2013ರ ಜನವರಿ 22 ರಂದು ತನ್ನ ಸಹೋದರನೊಂದಿಗೆ ಶಾಲೆಗೆ ಹೋಗಿದ್ದಳು. ಈ ವೇಳೆ ಹೆನ್ರಿ ಜೋಸೆಫ್ ಡಿಸೋಜಾ ಹೆಸರಿನ ವ್ಯಕ್ತಿಯೊಬ್ಬ ತನಗೆ ಐಸ್‌ಕ್ರೀಂ ಕೊಡಿಸೋದಾಗಿ ಆಕೆಯನ್ನು ಅಪಹರಿಸಿದ್ದನು. ಇದೀಗ ಬಂಧನಕ್ಕೊಳಗಾಗಿರುವ ಹೆನ್ರಿ ತನಗೆ ಮಕ್ಕಳಾಗದಿರುವ ಕಾರಣ ಪೂಜಾಳನ್ನ ಅಪಹರಿಸಿದ್ದೆ ಎಂಬುದಾಗಿ ಕೇಳಿದ್ದಾನೆ.

ಪೂಜಾ ಯಾರಿಂದಲೂ ಗುರುತಿಸಲ್ಪಡುವುದಿಲ್ಲ ಎಂದು ಹೇಳಿ ಹೆನ್ರಿ ಡಿಸೋಜಾ ಆಕೆಯನ್ನು ಕರ್ನಾಟಕದಲ್ಲಿನ ಹಾಸ್ಟೆಲ್‌ಗೆ ಕಳುಹಿಸಿದ್ದನು. ಅಲ್ಲದೆ ಆನಿ ಡಿಸೋಜಾ ಎಂದು ಹೆಸರನ್ನೂ ಬದಲಾಯಿಸಿದ್ದನು. ಹೆನ್ರಿ ದಂಪತಿಗೆ ಸ್ವಂತ ಮಗುವಾದಾಗ ಆಕೆಯನ್ನು ಹಾಸ್ಟೆಲ್‌ನಿಂದ ವಾಪಸ್ ತನ್ನ ಮನೆಗೆ ಕರೆತಂದಿದ್ದನು. ಅಂದಿನಿಂದ ಮನೆಗೆಲಸ ಮಾಡಿಸುತ್ತಾ ಪೂಜಾಳನ್ನು ಚೆನ್ನಾಗಿ ನೋಡಿಕೊಳ್ಳುವುದನ್ನೇ ನಿಲ್ಲಿಸಿದ್ದನು ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಸದ್ಯ ಪೂಜಾ 16 ವರ್ಷದ ಬಾಲಕಿಯಾಗಿದ್ದಾಳೆ. ಆದರೆ ಕುಟುಂಬದ ಸದಸ್ಯರ ಬಗ್ಗೆ ಹೆಚ್ಚು ನೆನಪಿರಲಿಲ್ಲ. ಹಾಗಾಗಿ ಪೋಷಕರಿಂದ ದೂರವೇ ಉಳಿದ್ದರು. ಆದರೆ ಹೆನ್ರಿ ಕುಡಿದ ಅಮಲಿನಲ್ಲಿ ಈಕೆ ತನ್ನ ಮಗಳಲ್ಲ ಎಂದು ಹೇಳಿದ ನಂತರ ಪೂಜಾ ತನ್ನ ನಿಜವಾದ ಸುಳಿವಿನ ಬಗ್ಗೆ ಹುಡುಕಾಟ ನಡೆಸಲು ಪ್ರಾರಂಭಿಸಿದಳು. ಪೂಜಾ ಕಾಣೆಯಾದ ನಂತರ ಆಕೆಯ ಸ್ನೇಹಿತರು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ್ದರು.

ಈ ವೇಳೆ ಪೂಜಾ ಸಹ ತನ್ನವರಿಗಾಗಿ ಹುಡುಕಾಟ ನಡೆಸುತ್ತಿದ್ದಾಗ 2013ರಲ್ಲಿ ಹಾಕಿದ್ದ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್‌ವೊಂದು ಸಿಕ್ಕಿದೆ. ಅದರಲ್ಲಿ 5 ಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿತ್ತು. ಆದರೆ 4 ಸಂಖ್ಯೆಗಳು ಸೇವೆಯಲ್ಲಿರಲಿಲ್ಲ. ಅದೃಷ್ಟವಶಾತ್ ಉಳಿದ ಒಂದು ಸಂಖ್ಯೆ ಪೂಜಾ ಕುಟುಂಬದ ನೆರೆಯವರಾಗಿದ್ದ ರಫಿಕ್ ಅವರದ್ದಾಗಿತ್ತು. ಪೂಜಾ ರಫಿಕ್‌ಗೆ ಕರೆ ಮಾಡಿ ತನ್ನ ಬಗ್ಗೆ ಹೇಳಿಕೊಂಡಳು. ಆಗ ರಫಿಕ್ ವೀಡಿಯೋ ಕರೆ ಮಾಡಿ ಅವಳೊಂದಿಗೆ ಮಾತನಾಡಿ ಆಕೆಯನ್ನು ಗುರುತಿಸಿದನು. ವೀಡಿಯೋ ಕರೆ ಮಾಡಿ ಪೂಜಾಳ ತಾಯಿಯೊಂದಿಗೂ ಮಾತನಾಡಿಸಿದನು. ಪೂಜಾಳ ತಾಯಿಯೂ ಆಕೆಯನ್ನೂ ಗುರುತಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ