9 ಐಎಎಸ್ ಅಧಿಕಾರಗಳ ವರ್ಗಾವಣೆ ; ರಾಜ್ಯ ಸರ್ಕಾರ ಆದೇಶ!
ಬೆಂಗಳೂರು: ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಮಂಜುನಾಥ್ ಜೆ ಸೇರಿದಂತೆ 9 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ನಿರ್ದೇಶಕರಾಗಿದ್ದ ಶ್ರೀಮತಿ ಸತ್ಯಭಾಮಾ ಸಿ ಅವರನ್ನು ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಅವರನ್ನು ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭೂಬಾಲನ್ ಟಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಜಯಪುರ ಜಿಲ್ಲೆಯ ಉಪ ಆಯುಕ್ತರಾಗಿ ನಿಯೋಜಿಸಲಾಗಿದೆ. ಅಲ್ಲದೇ ಇದೇ ಜಿಲ್ಲಾ ಪಂಚಾಯತ್ ನ ವಿಜಯಮಹಾಂತೇಶ ಬಿ. ದಾನಮ್ಮನವರ್ ಅವರನ್ನು ಸಹ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.
ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ದರ್ಶನ್ ಎಚ್.ವಿ. ಅವರನ್ನು ಐಟಿ ಮತ್ತು ಬಿಟಿ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ಹುದ್ದೆಯ ನಿರೀಕ್ಷೆಯಲ್ಲಿದ್ದ ಡಾ. ಅನುರಾಧಾ ಕೆ.ಎನ್. ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆಗಿ ವರ್ಗಾವಣೆ ಮಾಡಲಾಗಿದೆ. ಇನ್ನೂ ಅಲ್ಲಿನ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ವರ್ನಿತ್ ನೇಗಿ ಅವರನ್ನು ಕೊಡಗು ಜಿಲ್ಲಾ ಪಂಚಾಯತ್ ಸಿಇಒ ಆಗಿ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾ ಬಸವಂತಪ್ಪ ಅವರನ್ನು ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆಗೊಳಿಸಲಾಗಿದೆ.
ವರ್ಗಾವಣೆಯಾದ ಆಧಿಕಾರಿ – ವರ್ಗಾವಣೆಯಾದ ಇಲಾಖೆ
1. ಶ್ರೀ ಮಂಜುನಾಥ್ ಜೆ., IAS – Commissioners, Survey Settlement and Land Records, Bangaluru
2.ಶ್ರೀಮತಿ ಸತ್ಯಭಾಮ ಸಿ., IAS – Deputy Commissioner, Hassan District.
3.ಶ್ರೀಮತಿ ಶಿಲ್ಪ ನಾಗ್ ಸಿ.ಟಿ.,IAS – Deputy Commissioner, Chamarajanagara District.
4.ಶ್ರೀ ಭೂಬಾಲನ್ T., IAS – Deputy Commissioner, Vijayapura District.
5.ಶ್ರೀ ದರ್ಶನ್ H.V., IAS – Director IT&BT Bangaluru.
6.ಡಾ.ಅನುರಾಧ K.N., IAS – CEO, Zilla Panchayath Bangalore Rural District.
7.ಶ್ರೀಮತಿ ಪದ್ಮ ಬಸವಂತಪ್ಪ.,IAS- CEO, Zilla Panchayath Kolar District.
8.ಶ್ರೀ ವರ್ಣಿತ್ ನೇಗಿ .,IAS – CEO, Zilla Panchayath Kodagu District.
9.ಶ್ರೀ ನೋಂಜೈ ಮೊಹಮದ್ ಆಲಿ ಅಕ್ರಮ್ ಶಾ ., IAS -Assistant Commissioner Hospete Sub-Division, Vijayanagar.
ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದ ಸಿಎಂ, ಡಿಸಿಎಂ
ಬೆಂಗಳೂರು: ಅನ್ನಭಾಗ್ಯ ಯೋಜನೆಯ (Anna Bhagya Scheme) ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಚಾಲನೆ ನೀಡಿದರು. ಇದೇ ವೇಳೆ ಯೋಜನೆಯ ಲೋಗೋ ಕೂಡ ಬಿಡುಗಡೆ ಮಾಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆದ ಕಾರ್ಯಕ್ರಮದಲ್ಲಿ 10 ಕೆಜಿ ಅಕ್ಕಿಯ ಪೈಕಿ ಐದು ಕೆಜಿ ಅಕ್ಕಿಯ 170 ರೂ. ಹಣವನ್ನು ಮೈಸೂರು, ಕೋಲಾರ ಜಿಲ್ಲೆಯ ಫಲಾನುಭವಿಗಳ ಖಾತೆಗೆ ಹಾಕುವ ಮೂಲಕ ಚಾಲನೆ ನೀಡಿದರು. ಬಳಿಕ ಹಂತ ಹಂತವಾಗಿ ಇಡೀ ರಾಜ್ಯದ ಫಲಾನುಭವಿಗಳಿಗೆ ಹಣ ಜಮೆಯಾಗಲಿದೆ.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ದೇಶದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ. ಮೊದಲ ಸಂಪುಟದಲ್ಲೇ ಐದು ಗ್ಯಾರಂಟಿ ಜಾರಿಗೆ ತೀರ್ಮಾನ ಮಾಡಿದ್ದೆವು. ನಮ್ಮ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದದ್ದು ಅನ್ನಭಾಗ್ಯ ಯೋಜನೆ. ರಾಜ್ಯದ 1.28 ಕೋಟಿ ಕುಟುಂಬಕ್ಕೆ ಅನ್ನಭಾಗ್ಯ ಯೋಜನೆ ತಲುಪುತ್ತದೆ. ರಾಜ್ಯದ 4.42 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ಕೊಡುತ್ತಿದ್ದೇವೆ. ಅಂತ್ಯೋದಯ, BPL ಕಾರ್ಡ್ದಾರರು ಸೇರಿ 4.42 ಕೋಟಿ ಜನರಿಗೆ ಅನುಕೂಲವಾಗಲಿದೆ. ನಾವು ಹೆಚ್ಚುವರಿಯಾಗಿ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಅಂತಾ ಹೇಳಿಲ್ಲ. ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದೆವು ಎಂದರು.
ಅನ್ನ ಭಾಗ್ಯ ಹೊಸ ಕಾರ್ಯಕ್ರಮ ಏನೂ ಅಲ್ಲ. ನಾವು 2013ರಲ್ಲಿ ಅಧಿಕಾರಕ್ಕೆ ಬಂದಾಗ ಪ್ರಾರಂಭಿಸಿದ್ದೆವು. ಜನರಿಗೆ ಏನು ಭರವಸೆ ಕೊಟ್ಟಿದ್ದೆವು ಅದನ್ನು ಈಡೇರಿಸಬೇಕು. ಜನರಿಗೆ ದ್ರೋಹ ಮಾಡಬಾರದು ಅಂತ ಪ್ರಮಾಣ ವಚನ ವಹಿಸಿಕೊಂಡ ಮೊದಲ ದಿನವೇ ಐದು ಗ್ಯಾರಂಟಿಗಳನ್ನು ಜಾರಿಗೆ ತಂದೆವು ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಐದು ಗ್ಯಾರಂಟಿಗಳಲ್ಲಿ ಮೂರನೇ ಗ್ಯಾರಂಟಿಯಾಗಿರುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ, ಮುಂದೆಯೂ ನಡೆಯುತ್ತೇವೆ. ನಮ್ಮ ಐದು ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಕೇಂದ್ರ ಸರ್ಕಾರ ಹೃದಯ ಶ್ರೀಮಂತಿಕೆ ತೋರಿಸಿ ಅಕ್ಕಿ ಕೊಡಬಹುದಿತ್ತು ಎಂದು ಕುಟುಕಿದ ಅವರು, ನಮಗೂ ಅಕ್ಕಿ ಹೊಂದಿಸುವ ಶಕ್ತಿ ಇದೆ ಎಂದರು.