ಶನಿವಾರ, ಫೆಬ್ರವರಿ 22, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಉದ್ಯೋಗಕ್ಕೆ ಸೇರಿ ಎಂಟು ತಿಂಗಳಾಗುವಷ್ಟರಲ್ಲೇ ಲಂಚಕ್ಕೆ ಕೈಯೊಡ್ಡಿದ ಮಹಿಳಾಧಿಕಾರಿ - ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ!

Twitter
Facebook
LinkedIn
WhatsApp
52

Women Officer on First Posting Caught Taking Bribe in Jharkhand: ಈ ಮಹಿಳಾ ಅಧಿಕಾರಿ ಉದ್ಯೋಗಕ್ಕೆ ಸೇರಿ ಎಂಟು ತಿಂಗಳಾಗಿತ್ತಷ್ಟೇ. ತನ್ನ ಮೊದಲ ಪೋಸ್ಟಿಂಗ್‌ನಲ್ಲಿಯೇ ಆಕೆಗೆ ಹೆಚ್ಚುವರಿ ‘ದುಡಿಯುವ’ ಬಯಕೆ ಮೂಡಿದೆ. ಭ್ರಷ್ಟಾಚಾರವನ್ನು ಅಡಗಿಸಲು ಭ್ರಷ್ಟಾಚಾರವನ್ನ ಮಾಡಬೇಕಲ್ಲವೇ? ಹಣಕ್ಕಾಗಿ ಕೈಯೊಡ್ಡಿದ್ದಾರೆ. ನೋಟುಗಳು ಕೈಗೆ ಬಂದ ಬೆನ್ನಲ್ಲೇ, ಪೊಲೀಸರ ಬೇಡಿ ಕೂಡ ಅವರ ಕೈಗಳನ್ನು ಸುತ್ತಿಕೊಂಡಿದೆ.

ಹಜಾರಿಬಾಗ್: ವ್ಯಕ್ತಿಯೊಬ್ಬರಿಂದ ಲಂಚ ಪಡೆದುಕೊಳ್ಳುತ್ತಿದ್ದ ಸರ್ಕಾರಿ ಅಧಿಕಾರಿಣಿಯೊಬ್ಬರನ್ನು ಜಾರ್ಖಂಡ್‌ನ ಹಜಾರಿಬಾಗ್ ಭ್ರಷ್ಟಾಚಾರ ನಿಯಂತ್ರಣ ದಳ (ಎಸಿಬಿ) ರೆಡ್ ಹ್ಯಾಂಡ್ ಆಗಿ ಹಿಡಿದಿದೆ.

ಬಂಧಿತ ಮಹಿಳಾ ಅಧಿಕಾರಿಯನ್ನು ಮಿಥಾಲಿ ಶರ್ಮಾ ಎಂದು ಗುರುತಿಸಲಾಗಿದ್ದು, ಅವರು ಎಂಟು ತಿಂಗಳ ಹಿಂದೆ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ಸಹಕಾರ ಇಲಾಖೆಯ ಸಹಾಯಕ ರಿಜಿಸ್ಟ್ರಾರ್ ಆಗಿ ನಿಯೋಜನೆಗೊಂಡಿದ್ದರು. ಇದು ಅವರ ವೃತ್ತಿ ಜೀವನದ ಮೊದಲ ಪೋಸ್ಟಿಂಗ್ ಆಗಿದೆ.

ಮಿಥಾಲಿ ಶರ್ಮಾ ಅವರನ್ನು ಹಜಾರಿಬಾಗ್ ಎಸಿಬಿ ಅಧಿಕಾರಿಗಳು ಜುಲೈ 7ರಂದು ಬಂಧಿಸಿದ್ದಾರೆ. ಅವರು ಲಂಚ ಪಡೆಯುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿದೆ. ಅಧಿಕಾರಿಣಿ ವಿರುದ್ಧ ತೀವ್ರ ಟೀಕಾಪ್ರಹಾರ ಕೇಳಿಬಂದಿದೆ.

ಲಂಚ ಪಡೆಯುತ್ತಿರುವ ವೇಳೆಯೇ ಸಿಕ್ಕಿಬಿದ್ದ ಮಿಥಾಲಿ ಅವರನ್ನು ಬಂಧಿಸಿದ ಎಸಿಬಿ ತಂಡ, ಅವರನ್ನು ಮುಂದಿನ ಪ್ರಕ್ರಿಯೆಗಳಿಗಾಗಿ ಹಜಾರಿಬಾಗ್‌ಗೆ ಕರೆದೊಯ್ದಿದೆ. ಈ ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ.

ಕೊಡೆರ್ಮಾ ವ್ಯಾಪಾರ ಸಹಯೋಗ ಸಮಿತಿಗೆ ಮಿಥಾಲಿ ಶರ್ಮಾ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತಪಾಸಣೆ ವೇಳೆ ಅವರಿಗೆ ಅಲ್ಲಿನ ಕೆಲಸಗಳಲ್ಲಿ ಅಕ್ರಮಗಳು ನಡೆದಿರುವುದು ಕಂಡುಬಂದಿತ್ತು. ಭ್ರಷ್ಟಾಚಾರ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇರಲು 20 ಸಾವಿರ ರೂ ಲಂಚ ನೀಡುವಂತೆ ಮಿಥಾಲಿ ಬೇಡಿಕೆ ಇರಿಸಿದ್ದರು ಎಂದು ಬಂಧನದ ಬಗ್ಗೆ ಎಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮಿಥಾಲಿ ಅವರು ಲಂಚಕ್ಕೆ ಬೇಡಿಕೆ ಒಡ್ಡಿರುವ ಬಗ್ಗೆ ಕೊಡೆರ್ಮಾ ವ್ಯಾಪಾರ ಸಹಯೋಗ ಸಮಿತಿಯ ಸದಸ್ಯ ರಾಮೇಶ್ವರ ಪ್ರಸಾದ್ ಯಾದವ್ ಅವರು ಎಸಿಬಿ ಡಿಜಿ ಬಳಿ ದೂರು ನೀಡಿದ್ದರು.

ಈ ಆರೋಪದ ಬಗ್ಗೆ ಎಸಿಬಿ ತಂಡವು ರಹಸ್ಯವಾಗಿ ತನಿಖೆ ನಡೆಸಿತ್ತು. ಮಿಥಾಲಿ ಶರ್ಮಾ ಅವರು ಸಮಿತಿಯಿಂದ 20 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿರುವುದು ತನಿಖೆಯಿಂದ ಖಚಿತವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ, ಮಿಥಾಲಿ ಅವರನ್ನು ಲಂಚ ಪಡೆಯುವಾಗಲೇ ಹಿಡಿಯಲು ಬಲೆ ಬೀಸಿದ್ದರು.

ಜುಲೈ 7ರಂದು ಮಿಥಾಲಿ ಅವರು ತಾವು ಕೇಳಿದ್ದ ಲಂಚದ ಹಣದ ಮೊದಲ ಕಂತಾಗಿ 10 ಸಾವಿರ ರೂಪಾಯಿ ಪಡೆದುಕೊಳ್ಳುವಾಗ ಎಸಿಬಿ ತಂಡವು ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿತ್ತು. ಅವರು ಲಂಚ ತೆಗೆದುಕೊಳ್ಳುವ ವಿಡಿಯೋ ಕೂಡ ಸೆರೆಯಾಗಿತ್ತು.

ಗೃಹ ಲಕ್ಷ್ಮಿ ಯೋಜನೆ ಜಾರಿಗೂ ಮುನ್ನವೇ ಚಿಕ್ಕಮಗಳೂರಿನಲ್ಲಿ ಅವ್ಯವಹಾರದ ಆರೋಪ

ಚಿಕ್ಕಮಗಳೂರು: ಕರ್ನಾಟಕದಲ್ಲಿ ‘ಗೃಹ ಲಕ್ಷ್ಮಿ’ ಯೋಜನೆ (Gruha Lakshmi Scheme) ಜಾರಿಯಾಗುವ ಮುನ್ನವೇ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ನಕಲಿ ಅರ್ಜಿಗಳು ಮಾರಾಟವಾಗುತ್ತಿವೆ. ಈ ಬಗ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದು, ನಕಲಿ ನೋಂದಣಿ ಪತ್ರ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭಾವಚಿತ್ರವಿರುವ ನಕಲಿ ಅರ್ಜಿಗಳನ್ನು ಶೃಂಗೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೈಬರ್ ಸೆಂಟರ್ ಗಳಲ್ಲಿ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ನಕಲಿ ಪತ್ರದಲ್ಲಿ ಫಲಾನುಭವಿಗಳ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯ ವಿವರಗಳನ್ನು ಕೇಳಲಾಗಿದೆ.

ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಶೃಂಗೇರಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ

ಜುಲೈ 19 ರಂದು ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಗೃಹ ಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಲಿದ್ದಾರೆ .

ಈ ಯೋಜನೆಗೆ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ ಮತ್ತು ಫಲಾನುಭವಿಗಳಿಗೆ ನೋಂದಣಿ ದಿನಾಂಕ, ಸಮಯ ಮತ್ತು ಕೇಂದ್ರದ ಬಗ್ಗೆ ಅವರ ಮೊಬೈಲ್ ಸಂಖ್ಯೆಗಳಿಗೆ ಎಸ್‌ಎಂಎಸ್ ಕಳುಹಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ತಮ್ಮ ನೋಂದಣಿ ನೇಮಕಾತಿ ದಿನಾಂಕ ಮತ್ತು ಸಮಯವನ್ನು ತಿಳಿಯಲು ಇಚ್ಛಿಸುವ ಜನರು 8147500500 ಗೆ SMS ಕಳುಹಿಸಬಹುದು. ಯೋಜನೆಗೆ ಸಂಬಂಧಿಸಿದಂತೆ ಸಂದೇಹಗಳಿರುವ ಜನರು 1902 ಗೆ ಕರೆ ಮಾಡಬಹುದು ಎಂದು ಸರ್ಕಾರ ತಿಳಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist